ETV Bharat / technology

3 ಟ್ರಿಲಿಯನ್ ಡಾಲರ್ ತಲುಪಿದ ಮೈಕ್ರೋಸಾಫ್ಟ್​ ಮಾರುಕಟ್ಟೆ ಮೌಲ್ಯ

author img

By ETV Bharat Karnataka Team

Published : Jan 25, 2024, 12:26 PM IST

3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಪಡೆದುಕೊಳ್ಳುವ ಮೂಲಕ ಮೈಕ್ರೋಸಾಫ್ಟ್​ ಆಪಲ್ ನಂತರ ಈ ಸಾಧನೆ ಮಾಡಿದ ವಿಶ್ವದ 2ನೇ ಕಂಪನಿಯಾಗಿದೆ.

Microsoft now a $3 trillion company, second after Apple

ಸ್ಯಾನ್ ಫ್ರಾನ್ಸಿಸ್ಕೋ: ಮೈಕ್ರೋಸಾಫ್ಟ್​ನ ಮಾರುಕಟ್ಟೆ ಮೌಲ್ಯ 3 ಟ್ರಿಲಿಯನ್ ಡಾಲರ್ ತಲುಪಿದ್ದು, ಆಪಲ್ ನಂತರ ಈ ಸಾಧನೆ ಮಾಡಿದ ಎರಡನೇ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಕ್ರೋಸಾಫ್ಟ್ ತನ್ನ 48 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಪಡೆದುಕೊಂಡಿದೆ.

ಸತ್ಯ ನಾದೆಲ್ಲಾ ನೇತೃತ್ವದ ಮೈಕ್ರೋಸಾಫ್ಟ್​ ಬುಧವಾರ ತಡರಾತ್ರಿ ನಾಸ್ಡಾಕ್​ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಶೇಕಡಾ 1.5ರಷ್ಟು ಏರಿಕೆ ಕಂಡ ನಂತರ ಈ ಮೈಲಿಗಲ್ಲು ತಲುಪಿದೆ. ಟಿಮ್ ಕುಕ್ ನೇತೃತ್ವದ ಆಪಲ್ ಸುಮಾರು ಎರಡು ವರ್ಷಗಳ ಹಿಂದೆ 3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಸಂಪಾದಿಸಿತ್ತು.

ಓಪನ್ ಎಐ ಜೊತೆಗೆ ಕೃತಕ ಬುದ್ಧಿಮತ್ತೆ (ಎಐ) ಉತ್ತೇಜನದ ಕಾರಣದಿಂದ ಮೈಕ್ರೋಸಾಫ್ಟ್ ಷೇರುಗಳು ಇತ್ತೀಚಿನ ತಿಂಗಳುಗಳಲ್ಲಿ ಏರಿಕೆ ಕಾಣುತ್ತಿವೆ. ಕಳೆದ ಐದು ವರ್ಷಗಳಲ್ಲಿ, ಮೈಕ್ರೋಸಾಫ್ಟ್​ ಷೇರು ಬೆಲೆ $ 107ರಿಂದ ಪ್ರಸ್ತುತ ಬೆಲೆ ಸುಮಾರು $ 404 ಕ್ಕೆ ಏರಿದೆ. ನಾದೆಲ್ಲಾ ನೇತೃತ್ವದಲ್ಲಿ ಮೈಕ್ರೋಸಾಫ್ಟ್ ಹಲವಾರು ಎಐ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ ಮತ್ತು ಓಪನ್ ಎಐನಲ್ಲಿ 10 ಬಿಲಿಯನ್ ಡಾಲರ್​ಗಿಂತ ಹೆಚ್ಚು ಹೂಡಿಕೆ ಮಾಡಿದೆ ಎಂದು ದಿ ವರ್ಜ್ ವರದಿ ಮಾಡಿದೆ.

ಸುಮಾರು 10 ವರ್ಷಗಳ ಹಿಂದೆ ನಾದೆಲ್ಲಾ ಕಂಪನಿಯ ಉಸ್ತುವಾರಿ ವಹಿಸಿಕೊಂಡ ನಂತರ ಮೈನ್ ಕ್ರಾಫ್ಟ್ ಡೆವಲಪರ್ ಮೊಜಾಂಗ್, ಲಿಂಕ್ಡ್ಇನ್, ಗಿಟ್​ ಹಬ್ ಮತ್ತು ಕ್ಸಮರಿನ್ ಕಂಪನಿಗಳನ್ನು ಮೈಕ್ರೋಸಾಫ್ಟ್​ ಸ್ವಾಧೀನಪಡಿಸಿಕೊಂಡಿದೆ. ಈ ತಿಂಗಳ ಆರಂಭದಲ್ಲಿ, ಮೈಕ್ರೋಸಾಫ್ಟ್ ಆಪಲ್​ನ ಮಾರುಕಟ್ಟೆ ಮೌಲ್ಯವನ್ನು ದಾಟಿ ಅಲ್ಪಾವಧಿಗೆ ವಿಶ್ವದ ಅತ್ಯಂತ ಮೌಲ್ಯಯುತ ಸಾರ್ವಜನಿಕ ಕಂಪನಿಯಾಗಿತ್ತು. ಈಗ ಅದು ಅಂತಿಮವಾಗಿ 3 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಮತ್ತು ಅದೇ ಹಂತದಲ್ಲಿ ಮುಂದುವರೆದಿದೆ.

ಮೈಕ್ರೋಸಾಫ್ಟ್ 365ನಲ್ಲಿ ಕೋಪೈಲೆಟ್ ಬಳಸಲು ದೊಡ್ಡ ಮೊತ್ತದ ಶುಲ್ಕವನ್ನು ಘೋಷಿಸಿದ ನಂತರ ಕಂಪನಿಯ ಷೇರುಗಳು ಅತ್ಯಧಿಕ ಏರಿಕೆ ಕಂಡವು. ಆಗಿನಿಂದಲೂ ಕಂಪನಿಯು ಆಗಾಗ ಹೊಸ ಎಐ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ಮೈಕ್ರೋಸಾಫ್ಟ್ ಪ್ರಸ್ತುತ ಅಗ್ಗದ ಮತ್ತು ಚಿಕ್ಕ ಗಾತ್ರದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕಾರ್ಯನಿರತವಾಗಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಮೈಕ್ರೋಸಾಫ್ಟ್ ತನ್ನ ಕೃತಕ ಬುದ್ಧಿಮತ್ತೆ ಆಧಾರಿತ ಉತ್ಪನ್ನಗಳ ಅಭಿವೃದ್ಧಿಗೆ ಓಪನ್ಎಐ ಅನ್ನು ಹೆಚ್ಚು ಅವಲಂಬಿಸಿದೆ.

ಇದನ್ನೂ ಓದಿ: ₹55 ಕೋಟಿಗೆ ಕಾಮಿಕ್ ಕಾನ್ ಇಂಡಿಯಾ ಸ್ವಾಧೀನಪಡಿಸಿಕೊಂಡ ನಾಡ್ವಿನ್ ಗೇಮಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.