ETV Bharat / technology

ನೀವು ಮರೆತರೂ ವಾಟ್ಸಪ್​ ಮರೆಯದು; ಈ ಫೀಚರ್​ ಸಹಾಯದಿಂದ ನಿಮಗೆ ನೆನಪಿಸುತ್ತಲೇ ಇರುತ್ತದೆ - MESSAGE REMINDERS FEATURE

Message Reminders Feature: ಜನಪ್ರಿಯ ಮೆಸೇಜಿಂಗ್​ ಆ್ಯಪ್​ ಮತ್ತೊಂದು ಹೊಸ ಫೀಚರ್​ ಹೊರತರಲು ಕಾರ್ಯ ನಿರ್ವಹಿಸುತ್ತಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯೋಣ..

WHATSAPP NEW FEATURES  WHATSAPP REMINDER MESSAGE  WHATSAPP MESSAGE REMINDERS FEATURE  WHATSAPP NEW UPDATE
ನೀವು ಮರೆತರೂ ವಾಟ್ಸಾಪ್​ ಮರೆಯದು (IANS)
author img

By ETV Bharat Tech Team

Published : Dec 9, 2024, 10:48 AM IST

Message Reminders Feature: ವಾಟ್ಸಾಪ್​ನಲ್ಲಿ ಮತ್ತೊಂದು ಅದ್ಭುತ ಫೀಚರ್ ಬರಲಿದೆ. ಮರೆತುಹೋದ ಮೆಸೇಜ್​ಗಳನ್ನು ನೆನಪಿಸುವುದಕ್ಕೆ ಇದು ಉಪಯುಕ್ತವಾಗಿದೆ. ಇದನ್ನು ‘ಮೆಸೇಜ್​ ರಿಮೆಂಡರ್ಸ್​’ ಎಂಬ ಹೆಸರಿನಲ್ಲಿ ವಾಟ್ಸಪ್​ ಪರಿಚಯಿಸುತ್ತಿದೆ. ಆದರೆ ಈ ವೈಶಿಷ್ಟ್ಯವು ಯಾವಾಗ ಲಭ್ಯವಾಗಲಿದೆ.. ಇದು ಹೇಗೆ ಕೆಲಸ ಮಾಡುತ್ತದೆ..

ಈ ಫೀಚರ್ ಉಪಯೋಗಗಳೇನು? ಈಗಿನ ಯುಗದಲ್ಲಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸಪ್​ ಇದೆ. ತ್ವರಿತ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ವಾಟ್ಸಪ್​ ಬಳಸುವುದು ಸಾಮಾನ್ಯ. ಇದರಿಂದಾಗಿ ವಾಟ್ಸಪ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂದೇಶಗಳು ಹರಡುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ನಾವು ಕೆಲ ಸಂದೇಶಗಳನ್ನು ಓದದೆ ಬಿಟ್ಟುಬಿಡುತ್ತೇವೆ. ಬಿಟ್ಟು ಹೋಗಿರುವ ಚಾಟ್​ಗಳನ್ನು ನೆನಪಿಸುವ ಉದ್ದೇಶದಿಂದ ವಾಟ್ಸಪ್ ಈ ಹೊಸ ಫೀಚರ್ ತರಲು ವ್ಯವಸ್ಥೆ ಮಾಡುತ್ತಿದೆ. ಈ ಬಗ್ಗೆ ಬೀಟಾ ಇನ್ಫೋ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.

WHATSAPP NEW FEATURES  WHATSAPP REMINDER MESSAGE  WHATSAPP MESSAGE REMINDERS FEATURE  WHATSAPP NEW UPDATE
ವಾಟ್ಸಪ್​ ಸೆಟ್ಟಿಂಗ್ಸ್​ (Wabetainfo)

ಇದರ ಕೆಲಸವೇನು? ಮಾಹಿತಿಯ ಪ್ರಕಾರ.. ಈ ಹೊಸ ವಾಟ್ಸಪ್​ನ 'Message Reminders' ವೈಶಿಷ್ಟ್ಯವು ಕೆಲವು ನಿರ್ದಿಷ್ಟ ಸಂಪರ್ಕಗಳಿಂದ ಓದದ ಮೆಸೇಜ್​ಗಳ ಬಗ್ಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ನಾವು ಆಗಾಗ್ಗೆ ಚಾಟ್ ಮಾಡುವ ಸಂಪರ್ಕಗಳ ಪಟ್ಟಿಯನ್ನು ಆಧರಿಸಿ ಆಂತರಿಕ ಅಲ್ಗಾರಿದಮ್ ನಮಗೆ ಈ ಅಧಿಸೂಚನೆಗಳನ್ನು ಕಳುಹಿಸುತ್ತದೆ. ಮಧ್ಯದಲ್ಲಿ ಕೆಲವು ಚಾಟ್‌ಗಳಿಂದಾಗಿ ನಾವು ಯಾರೊಂದಿಗೆ ಹೆಚ್ಚು ಚಾಟ್ ಮಾಡುತ್ತಿದ್ದೇವೆಯೋ ಅವರ ಸಂಪರ್ಕಗಳಿಂದ ಬಂದ ಸಂದೇಶಗಳನ್ನು ನಾವು ಮರೆತರೆ ಈ ವೈಶಿಷ್ಟ್ಯವು ನಮಗೆ ನೆನಪಿಸುತ್ತದೆ.

ಈ 'ಮೆಸೇಜ್​ ರಿಮೆಂಡರ್ಸ್​' ವೈಶಿಷ್ಟ್ಯವನ್ನು ಅದರ ಹಿಂದಿನ ಮಾದರಿಯನ್ನು ಅಪ್​ಡೇಟ್​ ಮಾಡುವುದರಿಂದ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಈ ವೈಶಿಷ್ಟ್ಯವು ಸ್ಟೆಟಸ್​ ಅಪ್​ಡೇಟ್ಸ್​ ರಿಮೈಂಡಿಂಗ್​ ನೋಟಿಫಿಕೇಶನ್​ಗಳನ್ನು ಒದಗಿಸುತ್ತಿತ್ತು. ಆದರೆ ಇತ್ತೀಚಿನ ಚಾಟ್‌ಗಳಲ್ಲಿ ಓದದಿರುವ ಸಂದೇಶಗಳನ್ನು ಟ್ರ್ಯಾಕ್ ಮಾಡಲು ಇದು ನಿಮಗೆ ಸಹಾಯ ಮಾಡಲಿದೆ ಎಂದು ಕಂಪನಿ ಹೇಳುತ್ತಿದೆ.

ಇದು ಯಾವಾಗ ಲಭ್ಯ? ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ. ಇದು ಈಗ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಎಲ್ಲರಿಗೂ ದೊರೆಯಲಿದೆ.

ಆ್ಯಕ್ಟಿವೇಟ್​ ಮಾಡುವುದು ಹೇಗೆ? ಈ ವೈಶಿಷ್ಟ್ಯವು ಎಲ್ಲರಿಗೂ ಲಭ್ಯವಾದ ನಂತರ, ನೀವು ಸೆಟ್ಟಿಂಗ್ಸ್​ಗೆ ಭೇಟಿ ನೀಡಿ. ಅಲ್ಲಿ ನೋಟಿಫಿಕೇಶನ್​ ಅನ್ನು ಆಯ್ದುಕೊಳ್ಳಿ. ಆಗ ನಿಮಗೆ ರಿಮೆಂಡರ್ಸ್​ ಎಂಬ ಆಪ್ಷನ್​ ಕಾಣಿಸುತ್ತದೆ. ಅದನ್ನು ಆಕ್ಟಿವೇಟ್​ ಮಾಡಿಕೊಳ್ಳುವುದರ ಮೂಲಕ ಇದರ ಲಾಭ ಪಡೆಯುತ್ತೀರಿ.

ಓದಿ: ವಾರ್ಷಿಕ ಯೋಜನೆ: ಜಿಯೋ, ಏರ್​ಟೆಲ್​, ವೊಡಾಫೋನ್​ಗೆ ಠಕ್ಕರ್​ ನೀಡಲಿದೆಯಾ ಬಿಎಸ್​ಎನ್​ಎಲ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.