ETV Bharat / technology

ಅಪರಿಚಿತ ಸಂಖ್ಯೆಯಿಂದ ಬರುವ ಮೆಸೇಜ್​ ಬ್ಲಾಕ್​: ವಾಟ್ಸ್​ಆ್ಯಪ್ ಹೊಸ ವೈಶಿಷ್ಟ್ಯ - WhatsApp New Feature

ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳನ್ನು ಬ್ಲಾಕ್ ಮಾಡುವ ವೈಶಿಷ್ಟ್ಯವೊಂದನ್ನು ವಾಟ್ಸ್‌ಆ್ಯಪ್ ಶೀಘ್ರದಲ್ಲೇ ಪರಿಚಯಿಸಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Aug 20, 2024, 5:13 PM IST

ಫೋನ್​ ನಂಬರ್ ಒಂದಿದ್ದರೆ ಸಾಕು, ಯಾವುದೇ ವಾಟ್ಸ್‌ಆ್ಯಪ್​ ಬಳಕೆದಾರರಿಗೆ ಯಾರು ಬೇಕಾದರೂ ವಾಟ್ಸ್‌ಆ್ಯಪ್ ಮೆಸೇಜ್ ಕಳುಹಿಸಬಹುದು. ಆದರೆ ಈ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುವ ಕೆಲವರು ಅಪರಿಚಿತರಿಗೆ ಸ್ಪ್ಯಾಮ್ ಮೆಸೇಜು, ಫಿಶಿಂಗ್ ಮೆಸೇಜುಗಳನ್ನು ಕಳುಹಿಸುತ್ತಿರುತ್ತಾರೆ. ಇದು ಮೆಸೇಜು ಪಡೆದವರಿಗೆ ತೀರಾ ಕಿರಿಕಿರಿ ಉಂಟುಮಾಡುತ್ತದೆ. ಅಲ್ಲದೆ ಫಿಶಿಂಗ್ ಮೆಸೇಜುಗಳಲ್ಲಿನ ಲಿಂಕ್ ಕ್ಲಿಕ್ ಮಾಡಿ ಅನೇಕರು ಮೋಸ ಹೋಗುತ್ತಾರೆ.

ಸದ್ಯ ಇದಕ್ಕೆಲ್ಲ ಅಂತ್ಯ ಹಾಡಲು ಸಜ್ಜಾಗಿರುವ ವಾಟ್ಸ್‌ಆ್ಯಪ್​ ಹೊಸದೊಂದು ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಯಾವುದೇ ಅಪರಿಚಿತ ಸಂಖ್ಯೆಯಿಂದ ಮೆಸೇಜುಗಳು ಬಾರದಂತೆ ಈ ವೈಶಿಷ್ಟ್ಯ ತಡೆಯಲಿದೆ.

ಆಂಡ್ರಾಯ್ಡ್ ವಾಟ್ಸ್‌ ಆ್ಯಪ್​ ಬೀಟಾದ ಇತ್ತೀಚಿನ ಆವೃತ್ತಿಯಲ್ಲಿ (2.24.17.24) ಈ ಹೊಸ ವೈಶಿಷ್ಟ್ಯವನ್ನು ಅಳವಡಿಸಿ ಪರಿಶೀಲಿಸಲಾಗುತ್ತಿದೆ. ಇದು ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳನ್ನು ನಿರ್ಬಂಧಿಸಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವನ್ನು ಬಳಕೆದಾರರು ಸ್ವತಃ ತಾವಾಗಿಯೇ ಸಕ್ರಿಯಗೊಳಿಸಬೇಕಾಗುತ್ತದೆ. ಒಮ್ಮೆ ಸಕ್ರಿಯಗೊಳಿಸಿದ ನಂತರ, ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು ನಿರ್ದಿಷ್ಟ ಪ್ರಮಾಣವನ್ನು ಮೀರಿದರೆ ವಾಟ್ಸ್​ ಆ್ಯಪ್​ ಸ್ವಯಂಚಾಲಿತವಾಗಿ ಅವುಗಳನ್ನು ನಿರ್ಬಂಧಿಸುತ್ತದೆ.

ವಾಬೀಟಾ ಇನ್ಫೋ ವೆಬ್​ಸೈಟ್​ ಮೊದಲ ಬಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವೈಶಿಷ್ಟ್ಯವು ಬಳಕೆದಾರರಿಗೆ ವಾಟ್ಸ್‌ಆ್ಯಪ್​ನಲ್ಲಿ ಸ್ಪ್ಯಾಮ್ ಸಂದೇಶಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುವುದಲ್ಲದೆ, ಅನಗತ್ಯ ಸಂದೇಶಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುವ ಮೂಲಕ ನಿಮ್ಮ ಸ್ಮಾರ್ಟ್​ಫೋನ್​ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಅಪರಿಚಿತ ಸಂಖ್ಯೆಯಿಂದ ಆರಂಭದ ಕೆಲ ಸಂದೇಶಗಳು ಆ್ಯಪ್​ನಿಂದ ಸ್ವೀಕರಿಸಲ್ಪಡುತ್ತವೆ. ಆದರೆ ಆ ಸಂಖ್ಯೆಯಿಂದ ಒಂದೇ ಸಮನೆ ಸಂದೇಶಗಳು ಬರಲಾರಂಭಿಸಿದರೆ ಅದನ್ನು ಸ್ಪ್ಯಾಮ್ ಎಂದು ಪರಿಗಣಿಸಿ ವಾಟ್ಸ್‌ಆ್ಯಪ್​ ಆ ನಂಬರನ್ನು ಸ್ವಯಂಚಾಲಿತವಾಗಿ ಬ್ಲಾಕ್ ಮಾಡುತ್ತದೆ. ವಾಟ್ಸ್‌ಆ್ಯಪ್​ ಈಗಾಗಲೇ ಆಡಿಯೋ ಮತ್ತು ವೀಡಿಯೊ ಕರೆಗಳಿಗೆ ಇದೇ ರೀತಿಯ ವೈಶಿಷ್ಟ್ಯವನ್ನು ಹೊಂದಿದೆ. ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆ್ಯಪ್​ ಕರೆ ಬಂದಾಗ ಅದು ಸ್ವಯಂಚಾಲಿತವಾಗಿಯೇ ಸೈಲೆನ್ಸ್​ ಆಗುತ್ತದೆ.

ವಾಟ್ಸ್‌ಆ್ಯಪ್​ ಇದು ಸ್ಮಾರ್ಟ್​ಫೋನ್​ಗಳಲ್ಲಿ ಉಚಿತವಾಗಿ ಡೌನ್​ಲೋಡ್ ಮಾಡಿಕೊಂಡು ಬಳಸಲಾಗುವ ಮೆಸೆಂಜರ್ ಅಪ್ಲಿಕೇಶನ್ ಆಗಿದೆ. ಇಂಟರ್​ನೆಟ್​ ಮೂಲಕ ವಾಟ್ಸ್​ ಆ್ಯಪ್​ನಲ್ಲಿ ಸಂದೇಶಗಳು, ಚಿತ್ರಗಳು, ಆಡಿಯೋ ಅಥವಾ ವೀಡಿಯೊವನ್ನು ಕಳುಹಿಸಬಹುದು. ಕಂಪ್ಯೂಟರ್​ನ ಡೆಸ್ಕ್​​ಟಾಪ್​ ಬ್ರೌಸರ್​ ಮೂಲಕವೂ ವಾಟ್ಸ್‌ ಆ್ಯಪ್​ ಬಳಸಬಹುದು. ವಾಟ್ಸ್‌ಆ್ಯಪ್ ಸದ್ಯ ಭಾರತದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್​ಪಾರ್ಮ್ ಆಗಿದೆ.

ಇದನ್ನೂ ಓದಿ: '2035ಕ್ಕೆ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ, 2040ಕ್ಕೆ ಚಂದ್ರನ ಮೇಲೆ ಭಾರತೀಯನ ಪಾದಾರ್ಪಣೆ' - India to set Space Station

ETV Bharat Logo

Copyright © 2024 Ushodaya Enterprises Pvt. Ltd., All Rights Reserved.