ETV Bharat / technology

ಹೈ-ಎಂಡ್​ ಗೇಮಿಂಗ್​ಗಾಗಿ ಎರಡು ಹೊಸ ಚಿಪ್​ಸೆಟ್​ ಬಿಡುಗಡೆ ಮಾಡಿದ ಮೀಡಿಯಾಟೆಕ್ - Mediatek Launches Chipsets - MEDIATEK LAUNCHES CHIPSETS

ಪ್ರಮುಖ ಚಿಪ್ ತಯಾರಕ ಕಂಪನಿ ಮೀಡಿಯಾಟೆಕ್ ಎರಡು ಹೊಸ ಚಿಪ್​ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಎರಡು ಹೊಸ ಚಿಪ್​ಸೆಟ್​ ಬಿಡುಗಡೆ ಮಾಡಿದ ಮೀಡಿಯಾಟೆಕ್
ಮೀಡಿಯಾಟೆಕ್ (IANS)
author img

By ETV Bharat Karnataka Team

Published : May 30, 2024, 12:33 PM IST

ನವದೆಹಲಿ: ಕಂಪ್ಯೂಟರ್ ಚಿಪ್ ತಯಾರಕ ಕಂಪನಿ ಮೀಡಿಯಾಟೆಕ್ ಗುರುವಾರ ಹೈಟೆಕ್ ಮೊಬೈಲ್ ಗೇಮಿಂಗ್​​ಗಾಗಿ ಡೈಮೆನ್ಸಿಟಿ 7300 ಮತ್ತು ಡೈಮೆನ್ಸಿಟಿ 7300 ಎಕ್ಸ್ ಎಂಬ 4 ಎನ್ಎಂ ಚಿಪ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಡೈಮೆನ್ಸಿಟಿ 7300 ಚಿಪ್​​ಸೆಟ್​ಗಳು ಮಲ್ಟಿಟಾಸ್ಕಿಂಗ್, ಉತ್ತಮ ಛಾಯಾಗ್ರಹಣ, ವೇಗವರ್ಧಿತ ಗೇಮಿಂಗ್ ಮತ್ತು ಎಐ-ವರ್ಧಿತ ಕಂಪ್ಯೂಟಿಂಗ್​​ಗಾಗಿ ತಯಾರಿಸಲಾಗಿದ್ದರೆ, ಡೈಮೆನ್ಸಿಟಿ 7300 ಎಕ್ಸ್ ಅನ್ನು ಫ್ಲಿಪ್-ಶೈಲಿಯ ಮಡಚಬಹುದಾದ ಸಾಧನಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದು ಡ್ಯುಯಲ್ ಡಿಸ್ ಪ್ಲೇಗಳಿಗೆ ಬೆಂಬಲ ನೀಡುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

"ಇತ್ತೀಚಿನ ಎಐ ಆವಿಷ್ಕಾರಗಳು ಮತ್ತು ಸಂಪರ್ಕ ವೈಶಿಷ್ಟ್ಯಗಳನ್ನು ಸಂಯೋಜಿಸಲು ಮೀಡಿಯಾಟೆಕ್ ಡೈಮೆನ್ಸಿಟಿ 7300 ಚಿಪ್​ಗಳು ಪ್ರಮುಖ ಪಾತ್ರ ವಹಿಸಲಿವೆ. ಇದರಿಂದಾಗಿ ಗ್ರಾಹಕರು ತಡೆರಹಿತವಾಗಿ ಸ್ಟ್ರೀಮ್ ಮಾಡಬಹುದು ಮತ್ತು ಗೇಮಿಂಗ್ ಮಾಡಬಹುದು" ಎಂದು ಮೀಡಿಯಾಟೆಕ್​ನ ವೈರ್​ಲೆಸ್ ಸಂವಹನ ವ್ಯವಹಾರದ ಉಪ ಪ್ರಧಾನ ವ್ಯವಸ್ಥಾಪಕ ಡಾ.ಯೆಂಚೀ ಲೀ ಹೇಳಿದರು.

ಎರಡೂ ಚಿಪ್ ಸೆಟ್ ಗಳು ಆಕ್ಟಾ-ಕೋರ್ ಸಿಪಿಯು ಅನ್ನು ಹೊಂದಿದ್ದು, 4 ಪಟ್ಟು ಆರ್ಮ್ ಕಾರ್ಟೆಕ್ಸ್-ಎ 78 ಕೋರ್​ಗಳನ್ನು ಒಳಗೊಂಡಿವೆ. ಇವು 2.5 ಗಿಗಾಹರ್ಟ್ಸ್‌ವರೆಗೆ ಕಾರ್ಯನಿರ್ವಹಿಸುತ್ತವೆ ಮತ್ತು 4 ಎಕ್ಸ್ ಆರ್ಮ್ ಕಾರ್ಟೆಕ್ಸ್-ಎ 55 ಕೋರ್​ಗಳೊಂದಿಗೆ ಜೋಡಿಸಲ್ಪಟ್ಟಿವೆ.

ಇತರ ಕಂಪನಿಯ ಇದೇ ಮಾದರಿಯ ಚಿಪ್​ಸೆಟ್​ಗಳಿಗೆ ಹೋಲಿಸಿದರೆ, ಡೈಮೆನ್ಸಿಟಿ 7300 ಸರಣಿಯು ಶೇಕಡಾ 20ರಷ್ಟು ವೇಗದ ಎಫ್​ಪಿಎಸ್ ಮತ್ತು ಶೇಕಡಾ 20ರಷ್ಟು ಸುಧಾರಿತ ಇಂಧನ ದಕ್ಷತೆಯನ್ನು ನೀಡುತ್ತದೆ. ಡೈಮೆನ್ಸಿಟಿ 7300 ಚಿಪ್​ಸೆಟ್​ಗಳು ಮೀಡಿಯಾಟೆಕ್ ಇಮೇಜಿಂಗ್ 950 ಯೊಂದಿಗೆ ಸುಧಾರಿತ ಛಾಯಾಗ್ರಹಣದ ಅನುಭವವನ್ನು ಸಹ ನೀಡುತ್ತವೆ. ಇದು ಪ್ರೀಮಿಯಂ-ಗ್ರೇಡ್ 12-ಬಿಟ್ ಎಚ್​ಡಿಆರ್ -ಐಎಸ್​ಪಿಯೊಂದಿಗೆ 200 ಎಂಪಿ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದೆ.

ಫೇಸ್ ಡಿಟೆಕ್ಷನ್ (ಎಚ್​ಡಬ್ಲ್ಯೂಎಫ್​ಡಿ) ಮತ್ತು ವೀಡಿಯೊ ಎಚ್​ಡಿಆರ್ ಒದಗಿಸುವ ಹೊಸ ಹಾರ್ಡ್​ವೇರ್​ ಎಂಜಿನ್​ಗಳೊಂದಿಗೆ ವರ್ಧಿತವಾದ ಡೈಮೆನ್ಸಿಟಿ 7300 ಬಳಕೆದಾರರಿಗೆ ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ತಿಳಿಸಿದೆ.

ಮೀಡಿಯಾಟೆಕ್ ತೈವಾನ್​ನ ಪ್ರಮುಖ ಚಿಪ್ ತಯಾರಕ ಕಂಪನಿಯಾಗಿದ್ದು, ಸ್ಮಾರ್ಟ್​ಫೋನ್​ಗಳು, ಫ್ಲಾಟ್-ಸ್ಕ್ರೀನ್ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಿಗೆ ಅಗತ್ಯವಾದ ದೊಡ್ಡ ಪ್ರಮಾಣದ ಪ್ರೊಸೆಸರ್​ಗಳನ್ನು ಒದಗಿಸುತ್ತದೆ. ಕಡಿಮೆ ಬೆಲೆಯ ಚಿಪ್​ಗಳನ್ನು ಪೂರೈಸುವುದು ಕಂಪನಿಯ ಹೆಗ್ಗಳಿಕೆಯಾಗಿದೆ.

ಇದನ್ನೂ ಓದಿ : 50 MP ಕ್ಯಾಮೆರಾದೊಂದಿಗೆ ಸ್ಯಾಮ್​ಸಂಗ್ Galaxy F 55 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - Samsung launches Galaxy F55

ETV Bharat Logo

Copyright © 2025 Ushodaya Enterprises Pvt. Ltd., All Rights Reserved.