WagonR Waltz Launched: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ತನ್ನ ವಾಹನ ಪೋರ್ಟ್‌ಫೋಲಿಯೊವನ್ನು ಅಪ್ಡೇಟ್ ಮಾಡಿದೆ. ಪ್ರಸಿದ್ಧ ಹ್ಯಾಚ್‌ಬ್ಯಾಕ್ ಕಾರು ವ್ಯಾಗನ್ಆರ್‌ನ ಹೊಸ ವಾಲ್ಟ್ಜ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು ಹೊಸ ವ್ಯಾಗನ್ಆರ್ ವಾಲ್ಟ್ಜ್‌ನಲ್ಲಿ ಕೆಲವು ಕಾಸ್ಮೆಟಿಕ್ ಲುಕ್ಗಳನ್ನು ನೀಡಿದ್ದು, ಇದು ಸಾಮಾನ್ಯ ಮಾದರಿಗಿಂತ ಉತ್ತಮವಾಗಿದೆ. ಆಕರ್ಷಕ ನೋಟ ಮತ್ತು ಶಕ್ತಿಶಾಲಿ ಎಂಜಿನ್ ಹೊಂದಿರುವ ಈ ಫ್ಯಾಮಿಲಿ ಕಾರಿನ ಆರಂಭಿಕ ಬೆಲೆ 5.65 ಲಕ್ಷ ರೂ. (ಎಕ್ಸ್ ಶೋ ರೂಂ) ಇಂದ ಆರಂಭಗೊಳ್ಳುತ್ತದೆ.
ಹೊಸ ವ್ಯಾಗನ್ಆರ್ ವಾಲ್ಟ್ಜ್ ಹೇಗಿದೆ: ಕಂಪನಿಯು ವ್ಯಾಗನ್ಆರ್ ವಾಲ್ಟ್ಜ್ ಆವೃತ್ತಿಯನ್ನು LXi, VXi ಮತ್ತು ZXi ಎಂಬ ಮೂರು ರೂಪಾಂತರಗಳಲ್ಲಿ ಪರಿಚಯಿಸಿದೆ. ಇದು ನವೀಕರಿಸಿದ ಕ್ರೋಮ್ ಫ್ರಂಟ್ ಗ್ರಿಲ್, ಕ್ರೋಮ್ ಗಾರ್ನಿಶ್‌ನೊಂದಿಗೆ ಫಾಗ್ ಲ್ಯಾಂಪ್‌ಗಳು, ವೀಲ್ ಆರ್ಚ್ ಕ್ಲಾಡಿಂಗ್, ಸೈಡ್ ಸ್ಕರ್ಟ್ಸ್, ಸೈಡ್ ಬಾಡಿ ಮೋಲ್ಡಿಂಗ್ ಸೇರಿದಂತೆ ಇತ್ಯಾದಿಗಳನ್ನು ಒಳಗೊಂಡಿದೆ. ಈ ಹೊಸ ಅಂಶಗಳು ಕಾರಿನ ಹೊರಭಾಗಕ್ಕೆ ಹೆಚ್ಚು ಸ್ಪೋರ್ಟಿ ಲುಕ್ ನೀಡಲು ಸಹಾಯ ಮಾಡುತ್ತವೆ.
ಕಂಪನಿಯು ಕಾರಿನ ಒಳಗಿನ ಕ್ಯಾಬಿನ್‌ನಲ್ಲಿ ಕೆಲವು ಅಪ್ಡೇಟ್ಗಳನ್ನು ಸಹ ಮಾಡಿದೆ. ಇದರಲ್ಲಿ ಹೊಸ ಫ್ಲೋರ್ ಮ್ಯಾಟ್‌ಗಳು ಮತ್ತು ಸೀಟ್ ಕವರ್‌ಗಳನ್ನು ಬಳಸಲಾಗಿದೆ. ಇದಲ್ಲದೆ, 6.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಸ ಸ್ಪೀಕರ್‌ಗಳು, ಭದ್ರತಾ ವ್ಯವಸ್ಥೆ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾದಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ವೈಶಿಷ್ಟ್ಯಗಳನ್ನು ಸೇರಿಸಿದ ನಂತರ, ಅದರ ಕ್ಯಾಬಿನ್ ಸ್ವಲ್ಪ ನವೀಕರಿಸಲಾಗಿದೆ.
ಪವರ್ ಮತ್ತು ಮೈಲೇಜ್: ಕಂಪನಿಯು ವ್ಯಾಗನ್ಆರ್ ವಾಲ್ಟ್ಜ್ ಆವೃತ್ತಿಯನ್ನು 1.2 ಲೀಟರ್ ಪೆಟ್ರೋಲ್ ಮತ್ತು 1.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಪರಿಚಯಿಸಿದೆ. ದೊಡ್ಡ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಲಭ್ಯವಿದೆ. ಇದಲ್ಲದೆ, ಈ ಕಾರನ್ನು ಕಂಪನಿಯ ಸಿಎನ್‌ಜಿ ರೂಪಾಂತರದಲ್ಲೂ ಪರಿಚಯಿಸಲಾಗಿದೆ. ಕಂಪನಿಯು ತನ್ನ ಪೆಟ್ರೋಲ್ ರೂಪಾಂತರವು 25.19 km/ಲೀಟರ್ ಮೈಲೇಜ್ ನೀಡಿದ್ರೆ, CNG ರೂಪಾಂತರವು 33.48 km/kg ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸುರಕ್ಷತಾ ವೈಶಿಷ್ಟ್ಯಗಳು: WagonR Waltz ಗೆ ಕೆಲವು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಈ ಕಾರು ಈಗ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಅನ್ನು ಹೊಂದಿದೆ. ಇದನ್ನು ಹೊರತುಪಡಿಸಿ, ಇತರ ವೈಶಿಷ್ಟ್ಯಗಳು ಮೊದಲಿನಂತೆಯೇ ಇವೆ. ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, ವೇಗ ಮಿತಿ ಎಚ್ಚರಿಕೆ ಸೇರಿದಂತೆ ಇತರೆ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಓದಿ: ಇಂದಿನಿಂದ ಐಫೋನ್ 16 ಮಾರುಕಟ್ಟೆಯಲ್ಲಿ ಲಭ್ಯ; ಆ್ಯಪಲ್ ಸ್ಟೋರ್ಗಳ ಮುಂದೆ ಜನರ ಕ್ಯೂ! - iPhone 16 Sale