ETV Bharat / technology

ಏಲಿಯನ್‌ಗಳು ಇರುವುದು ನಿಜ: ನಮ್ಮ- ಅವರ ನಡುವೆ ಯುದ್ಧ ಅನಿವಾರ್ಯ! - ಶಾಕಿಂಗ್​ ಹೇಳಿಕೆ ನೀಡಿದ ಇಸ್ರೋ ಅಧ್ಯಕ್ಷ - ISRO CHAIRMAN ON ALIENS - ISRO CHAIRMAN ON ALIENS

ISRO Chairman On Aliens: ಏಲಿಯನ್​ಗಳು ಭೂಮಿಯ ಮೇಲೆ ಇಲ್ಲದಿರಬಹುದು. ಆದರೆ ಸೌರಮಂಡದಲ್ಲಿ ಎಲ್ಲೋ ಅನ್ಯಗ್ರಹ ಜೀವಿಗಳು ಇರಬಹುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಅಭಿಪ್ರಾಯಪಟ್ಟಿದ್ದಾರೆ.

ISRO CHIEF SOMANTH INTERVIEW  ISRO CHAIRMAN SOMANTH ON ALIEN  ISRO CHIEF ON ALIENS
ಏಲಿಯನ್‌ಗಳು ಇರುವುದು ನಿಜ (ANI, Getty Images)
author img

By ETV Bharat Tech Team

Published : Aug 26, 2024, 2:57 PM IST

ISRO Chairman On Aliens : ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಏಲಿಯನ್​ಗಳ ಅಸ್ತಿತ್ವದ ಬಗ್ಗೆ ಕುತೂಹಲಕಾರಿಯಾಗಿ ಮಾತನಾಡಿದ್ದಾರೆ. ಭೂಮಿಯ ಮೇಲೆ ಮಾತ್ರವಲ್ಲದೆ ವಿಶ್ವದಲ್ಲಿ ಎಲ್ಲಾದ್ರೂ ಅನ್ಯಗ್ರಹ ಜೀವಿಗಳು ಅಸ್ತಿತ್ವದಲ್ಲಿರಬಹುದು ಎಂದು ನಂಬಲಾಗಿದೆ. ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ಇಸ್ರೋ ಅಧ್ಯಕ್ಷರು ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದರು.

ನೂರು ವರ್ಷಗಳಲ್ಲಿ ಬೆಳೆದ ತಂತ್ರಜ್ಞಾನ: ನೂರು ವರ್ಷಗಳ ಹಿಂದಿನ ತಂತ್ರಜ್ಞಾನಕ್ಕೆ ಹೋಲಿಸಿದರೆ ಭೂಮಿಯ ಮೇಲಿನ ತಂತ್ರಜ್ಞಾನ ಅಗಾಧವಾಗಿ ಬೆಳೆದಿದೆ. ಈ ಕ್ಷಿಪ್ರ ಬೆಳವಣಿಗೆಯು ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಯೋಚಿಸಲು ಕಾರಣವಾಗಿದೆ. ಭೂಮಿಯ ಮೇಲಿನ ಮಾನವರು ಸೇರಿದಂತೆ ವಿಶ್ವದಲ್ಲಿರುವ ಎಲ್ಲಾ ಜೀವಿಗಳು ಕಳೆದ ನೂರು ವರ್ಷಗಳಲ್ಲಿ ವಿಕಸನಗೊಂಡಿವೆ. ಕೆಲವು ಜಾತಿಗಳು ತಂತ್ರಜ್ಞಾನದಲ್ಲಿ ಮನುಷ್ಯರಿಗಿಂತ ಮುಂದಿರಬಹುದು. ಇತರರು ಹಿಂದೆ ಇದ್ದಾರೆ. ಭೂಮಿಯ ಹೊರತಾಗಿ ಬೇರೆಲ್ಲಾದರೂ 1000 ವರ್ಷ ಮುಂದುವರಿದಿರಬಹುದು ಅಥವಾ 200 ವರ್ಷ ಹಿಂದೆ ಇರಬಹುದು. ಮುಂದಿನ 1000 ವರ್ಷಗಳಲ್ಲಿ ತಂತ್ರಜ್ಞಾನವು ಜಾಗತಿಕವಾಗಿ ಹೆಚ್ಚಾಗುತ್ತದೆ. 1000 ವರ್ಷಗಳ ಸುಧಾರಿತ ತಂತ್ರಜ್ಞಾನವು ಈಗಾಗಲೇ ಭೂಮಿಯ ಹೊರತಾಗಿ ಬೇರೆಡೆ ಅಸ್ತಿತ್ವದಲ್ಲಿರಬಹುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ?: ಇಸ್ರೋ ಅಧ್ಯಕ್ಷ ಸೋಮನಾಥ್ ಕೂಡ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ಆಗುವ ಅಪಾಯಗಳ ಬಗ್ಗೆ ವಿವರಿಸಿದ್ದಾರೆ. ಭೂಮಿಯ ಮೇಲಿನ ಜೀವಕ್ಕೆ ಹೋಲಿಸಿದರೆ ಅನ್ಯಗ್ರಹ ಜೀವಿಗಳು ಸಂಪೂರ್ಣ ಭಿನ್ನವಾಗಿವೆ. ಬಹುಶಃ ಅದರ ದೇಹವು ಜೀನೋಮಿಕ್, ಪ್ರೋಟೀನ್ ಆಧಾರಿತವಾಗಿದೆ. ಈ ಹಿನ್ನೆಲೆಯಲ್ಲಿ ಮಾನವ ಮತ್ತು ಅನ್ಯಗ್ರಹ ಜೀವಿಗಳ ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ. ಮೇಲುಗೈಗಾಗಿ ಹೋರಾಟ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಭವಿಷ್ಯ ನುಡಿದಿದ್ದಾರೆ.

ಅನ್ಯಗ್ರಹ ಜೀವಿಗಳ ಬಗ್ಗೆ ಊಹಾಪೋಹ: ಏಲಿಯನ್​ಗಳ ಬಗ್ಗೆ ಈಗಾಗಲೇ ಹಲವು ಊಹಾಪೋಹಗಳಿವೆ. ಈ ವಿಶ್ವದಲ್ಲಿ ಎಲ್ಲೋ ಅನ್ಯಗ್ರಹ ಜೀವಿಗಳು ಇರಬಹುದೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಅಂತಹ ಸಾಧ್ಯತೆ ಇಲ್ಲ ಎಂದು ನಿರಾಕರಿಸುತ್ತಾರೆ. ಏಲಿಯನ್​ಗಳ ಮಾಹಿತಿಗಳನ್ನು ದೊಡ್ಡಣ್ಣ ಮರೆಮಾಚುತ್ತಿದ್ದಾನೆ ಎಂಬ ಆರೋಪಗಳಿವೆ. ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇದೆ ಎಂಬ ಸುದ್ದಿ ಇತ್ತು. ಈ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಏಲಿಯನ್​ಗಳ ಅಸ್ತಿತ್ವದ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದರು.

ಓದಿ: ನಾಗರಿಕರಿಗೆ ಸುವರ್ಣಾವಕಾಶ: ಈ ದಿನಾಂಕದವರೆಗೆ ಆಧಾರ ಕಾರ್ಡ್​ ಅಪ್​ಡೇಟ್​ ಉಚಿತ.. ಉಚಿತ!! - Aadhaar Card Free Update

ETV Bharat Logo

Copyright © 2025 Ushodaya Enterprises Pvt. Ltd., All Rights Reserved.