ಹೈದರಾಬಾದ್: ಐಫೋನ್ ಪ್ರಿಯರಿಗೊಂದು ಗುಡ್ ನ್ಯೂಸ್ ಬರಲಿದೆ. ಮಾಧ್ಯಮ ವರದಿಯ ಪ್ರಕಾರ, ಆ್ಯಪಲ್ ತನ್ನ ಐಫೋನ್ 16 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಆ್ಯಪಲ್ ಕಂಪನಿ ತನ್ನ ಇತ್ತೀಚಿನ ಐಫೋನ್ 16 ಸರಣಿಯನ್ನು ಸೆಪ್ಟೆಂಬರ್ 10 ರಂದು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಹೊಸ iPhone 16 ಸರಣಿಯು ಒಂದು ವರ್ಷದ ಹಿಂದೆ ಬಿಡುಗಡೆಯಾದ iPhone 15 ಶ್ರೇಣಿಯ ಸುಧಾರಿತ ಆವೃತ್ತಿಯಾಗಲಿದೆ.
ಆಪಲ್ ವಾಚ್, ಏರ್‌ಪಾಡ್ಸ್ ಲಭ್ಯ: ಐಫೋನ್ 16 ಸರಣಿಯ ಬಿಡುಗಡೆಯೊಂದಿಗೆ, ಆಪಲ್ ಹೊಸ ಆಪಲ್ ವಾಚ್ ಮತ್ತು ಹೊಸ ಏರ್‌ಪಾಡ್ಸ್ ಮಾದರಿಗಳನ್ನು ಈ ಉದ್ಘಾಟನಾ ಸಮಾರಂಭದಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಐಫೋನ್ 16 ಪ್ರೊ ಮಾದರಿಯು ಸ್ವಲ್ಪ ದೊಡ್ಡ ಡಿಸ್‌ಪ್ಲೇ ಹೊಂದುವ ನಿರೀಕ್ಷೆಯಿದೆ. ಆದರೆ, ಕಂಪನಿಯು ತನ್ನ ಹ್ಯಾಂಡ್‌ಸೆಟ್ ಮೀಸಲಾದ 'ಕ್ಯಾಪ್ಚರ್' ಬಟನ್‌ನೊಂದಿಗೆ ಸಜ್ಜುಗೊಳಿಸಬಹುದು.
ನಾಲ್ಕು ಮಾದರಿಗಳನ್ನು ಒಳಗೊಂಡಿರುವ ಐಫೋನ್ 16: ವರದಿ ಪ್ರಕಾರ, ಆ್ಯಪಲ್ ಸೆಪ್ಟೆಂಬರ್ 10 ರಂದು ಈವೆಂಟ್‌ನಲ್ಲಿ ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ವರ್ಷ ಕಂಪನಿಯು ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡಬಹುದು ಎಂದು ಹಿಂದಿನ ವರದಿಗಳು ಬಹಿರಂಗಪಡಿಸಿವೆ. ಇದರಲ್ಲಿ iPhone 16, iPhone 16 Plus, iPhone 16 Pro ಮತ್ತು iPhone 16 Pro Max ಸೇರಿವೆ.
ಕ್ಯಾಪ್ಚರ್ ಬಟನ್ ಲಭ್ಯ: ಇದರ ಹೊರತಾಗಿ ಆ್ಯಪಲ್ ತನ್ನ ಹೊಸ ಐಫೋನ್ 16 ಸರಣಿಯನ್ನು ಕ್ಯಾಪ್ಚರ್ ಬಟನ್‌ನೊಂದಿಗೆ ಸಜ್ಜುಗೊಳಿಸಬಹುದು. ಇದನ್ನು ತ್ವರಿತವಾಗಿ ಫೋಟೋಗಳನ್ನು ಸೆರೆಹಿಡಿಯಲು ಬಳಸಬಹುದಾಗಿದೆ. ದುಬಾರಿ iPhone 16 Pro ಮತ್ತು iPhone 16 Pro Max ಮಾದರಿಗಳು ನವೀಕರಿಸಿದ ಅಲ್ಟ್ರಾ- ವೈಡ್ ಆಂಗಲ್ ಕ್ಯಾಮೆರಾ, 0.2-ಇಂಚಿನ ದೊಡ್ಡ ಡಿಸ್‌ಪ್ಲೇ ಮತ್ತು ಅವುಗಳ ಪೂರ್ವವರ್ತಿಗಳಿಗಿಂತ ದೀರ್ಘಾವಧಿ ಬ್ಯಾಟರಿ ಹೊಂದಿರಬಹುದು.
‘ಸಿರಿ’ಯ ಹೊಸ ಆವೃತ್ತಿ ಸಿಗಬಹುದು: ಕಂಪನಿಯ ಅಸ್ತಿತ್ವದಲ್ಲಿರುವ iPhone 15 Pro ಮತ್ತು iPhone 15 Pro Max ಅನ್ನು ಈ ವರ್ಷದ ನಂತರ ಇಂಟೆಲಿಜೆನ್ಸ್ ವೈಶಿಷ್ಟ್ಯಗಳಿಗಾಗಿ ಅಪ್‌ಗ್ರೇಡ್ ಮಾಡಬಹುದು. iPhone 16 ಶ್ರೇಣಿಯ ಎಲ್ಲ ನಾಲ್ಕು ಮಾದರಿಗಳು Apple ನ ಹೊಸ ಆನ್-ಡಿವೈಸ್ AI ತಂತ್ರಜ್ಞಾನ ಮತ್ತು ‘ಸಿರಿ’ಯ ಹೊಸ ಆವೃತ್ತಿಯೊಂದಿಗೆ ಬರಬಹುದು. ಈ ನವೀಕರಣಗಳು ಆಪಲ್ ತನ್ನ ಹೊಸ ಸ್ಮಾರ್ಟ್‌ಫೋನ್ ಮಾದರಿಗಳ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮಾಧ್ಯಮ ವರದಿ ಪ್ರಕಾರ, ಆ್ಯಪಲ್ ಮುಂದಿನ ಸಮಾರಂಭದಲ್ಲಿ ಹೊಸ ಏರ್‌ಪಾಡ್ಸ್ ಮತ್ತು ಆಪಲ್ ವಾಚ್ ಮಾದರಿಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಕಂಪನಿಯ ಟ್ರೂಲೀ ವೈರ್‌ಲೆಸ್ ಸ್ಟಿರಿಯೊ (TWS) ಹೆಡ್‌ಸೆಟ್‌ಗಳು ಬಜೆಟ್ ಮತ್ತು ಮಿಡ್‌ರೇಂಜ್ ಆಯ್ಕೆಗಳಲ್ಲಿ ಬರಬಹುದು. ಎರಡನೆಯದು ಉನ್ನತ - ಮಟ್ಟದ ಏರ್‌ಪಾಡ್ಸ್ ಪ್ರೊ (ಎರಡನೇ ತಲೆಮಾರಿನ) ಮಾದರಿಗಳಂತಹ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸಪೋರ್ಟ್ದೊಂದಿಗೆ ಬರಬಹುದು. ಮತ್ತೊಂದೆಡೆ, ಇತ್ತೀಚಿನ ವರದಿಗಳ ಪ್ರಕಾರ, ಆ್ಯಪಲ್ ವಾಚ್ ಸರಣಿ 10 ದೊಡ್ಡ ಸ್ಕ್ರೀನ್ ಅನ್ನು ಹೊಂದಿರುತ್ತದೆ. ಆದರೆ ಅದರ ಹೊರ ಭಾಗದ ವಿನ್ಯಾಸ ಹಿಂದಿನ ಮಾದರಿಗಿಂತ ಸ್ಲಿಮ್ ಆಗಿರುತ್ತದೆ ಎಂದು ಮಾಧ್ಯಮ ವರದಿಗಳು ಬಹಿರಂಗ ಪಡಿಸಿವೆ.