ETV Bharat / entertainment

ಪ್ರಭಾಸ್ ಜೊತೆ ಹೊಂಬಾಳೆ ಫಿಲ್ಮ್ಸ್​ನ​​ 3 ಸಿನಿಮಾ ಘೋಷಣೆ: ಬಿಡುಗಡೆಗೂ ಮುಹೂರ್ತ ಫಿಕ್ಸ್​, 'ಸಲಾರ್​ 2' ಮೊದಲ ಚಿತ್ರ - REBEL STAR PRABHAS

ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​​ ಅವರೊಂದಿಗೆ ಮೂರು ಹೊಸ ಸಿನಿಮಾಗಳನ್ನು ಘೋಷಿಸಿದೆ.

Rebel star Prabhas
ರೆಬೆಲ್ ಸ್ಟಾರ್ ಪ್ರಭಾಸ್​ (Photo Source: ETV Bharat)
author img

By ETV Bharat Entertainment Team

Published : Nov 8, 2024, 2:34 PM IST

'ಹೊಂಬಾಳೆ ಫಿಲ್ಮ್ಸ್'​​​, ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ. ಈಗಾಗಲೇ ಹಲವು ಹಿಟ್​ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದೆ. ವಿಶೇಷವಾಗಿ, ಕೆಜಿಎಫ್​, ಕಾಂತಾರ, ಸಲಾರ್​ ನಂತಹ ಸಿನಿಮಾಗಳಿಂದ ಸಾಕಷ್ಟು ಹೆಸರು ಮಾಡಿದೆ. ಇದೀಗ ಪ್ಯಾನ್​ ಇಂಡಿಯಾ ಸೂಪರ್ ಸ್ಟಾರ್​ ಪ್ರಭಾಸ್​​ ಅವರೊಂದಿಗೆ ಮೂರು ಹೊಸ ಸಿನಿಮಾಗಳನ್ನು ಘೋಷಿಸಿದೆ.

ಹೊಂಬಾಳೆ ಫಿಲ್ಮ್ಸ್​​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿದೆ. ''ಭಾರತೀಯ ಸಿನಿಮಾವನ್ನು ಆಚರಿಸುವ ಮತ್ತು ಅದನ್ನು ಜಗತ್ತಿಗೆ ಒದಗಿಸುವ ಗುರಿಯನ್ನು ಹೊಂದಿರುವ ಮೂರು ಸಿನಿಮಾಗಳನ್ನು ರೆಬೆಲ್ ಸ್ಟಾರ್ ಅವರೊಂದಿಗೆ ಸೇರಿ ಮಾಡಲು ನಾವು ಬಹಳ ಹೆಮ್ಮೆಪಡುತ್ತೇವೆ. ಇದು ಮರೆಯಲಾಗದ ಅದ್ಭುತ ಸಿನಿ ಅನುಭವಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯ ಘೋಷಣೆ. ಮುಂದಿನ ಮಾರ್ಗ ಅಪರಿಮಿತ. ಈ ಪ್ರಯಾಣ ಸಲಾರ್​ 2 ಜೊತೆ ಪ್ರಾರಂಭವಾಗುತ್ತಿದ್ದು, ಸಿದ್ಧರಾಗಿ'' ಎಂದು ಬರೆದುಕೊಂಡಿದ್ದಾರೆ. ಸಲಾರ್​ 2 ಸೇರಿ ಮತ್ತೆರಡು ಹೊಸ ಚಿತ್ರಗಳನ್ನು ಅನೌನ್ಸ್​​ ಮಾಡಲಾಗಿದೆ. 2026, 2027, 2028ಕ್ಕೆ ಈ ಸಿನಿಮಾಗಳು ಬಿಡುಗಡೆ ಆಗಲಿದೆ. ನಿಗದಿತ ದಿನಾಂಕ ಇನ್ನಷ್ಟೇ ರಿವೀಲ್​ ಆಗಬೇಕಿದೆ.

ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಸಾಕಷ್ಟು ಖ್ಯಾತಿ ಹೊಂದಿರುವ ಪ್ರಭಾಸ್ ಅವರು ಹೊಂಬಾಳೆ ಫಿಲ್ಮ್ಸ್ ಜೊತೆಗೆ ಮೂರು ಬಿಗ್​ ಪ್ರಾಜೆಕ್ಟ್​ಗೆ ಸಹಿ ಹಾಕಿದ್ದಾರೆ. ಆ್ಯಕ್ಷನ್-ಪ್ಯಾಕ್ಡ್ ''ಸಲಾರ್ 2'' ಮಹತ್ವದ ಪ್ರಾಜೆಕ್ಟ್​ಗಳಲ್ಲೊಂದು. 2023ರ ಕೊನೆಗೆ ತೆರೆಕಂಡ ಈ ಚಿತ್ರದ ಸೀಕ್ವೆಲ್​​​ ಬರೋದು ನಿಮಗೆ ತಿಳಿದಿರುವ ವಿಚಾರವೇ. ಇಂದು ಅನೌನ್ಸ್ ಮಾಡಿರುವ ಮೂರು ಸಿನಿಮಾಗಳಲ್ಲಿ ಸಲಾರ್​ 2 ಕೂಡಾ ಒಂದು. ಬಹುನಿರೀಕ್ಷಿತ ಸಲಾರ್ 2 ಮತ್ತು ಎರಡು ಹೆಚ್ಚುವರಿ ಸಿನಿಮಾಗಳನ್ನೊಳಗೊಂಡಿರುವ ಈ ಒಪ್ಪಂದವು ಪ್ರಭಾಸ್ ಮತ್ತು ಹೊಂಬಾಳೆ ಸಂಸ್ಥೆಗಳೆರಡಕ್ಕೂ ಹೊಸ ಅಧ್ಯಾಯದ ಆರಂಭವನ್ನು ಸೂಚಿಸಿದೆ. ಈ ಸಿನಿಮಾಗಳು ಕ್ರಮವಾಗಿ 2026, 2027 ಮತ್ತು 2028ರಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ.

ರಾಕಿಂಗ್​ ಸ್ಟಾರ್​ ಯಶ್ ಅಭಿನಯದ ಕೆಜಿಎಫ್​​ ಮತ್ತು ರಿಷಬ್ ಶೆಟ್ಟಿ ಸಾರಥ್ಯದ ಕಾಂತಾರ ಸೇರಿದಂತೆ ಹಲವು ಬ್ಲಾಕ್​ಬಸ್ಟರ್​​ ಸಿನಿಮಾಗಳೊಂದಿಗೆ ಭಾರತೀಯ ಚಿತ್ರರಂಗದಲ್ಲಿ ಪವರ್​ಫುಲ್​​, ಪಾಪ್ಯುಲರ್​ ಸಿನಿಮಾ ಪ್ರೊಡಕ್ಷನ್​​ ಹೌಸ್​ ಆಗಿ ಗುರುತಿಸಿಕೊಂಡ ಹೊಂಬಾಳೆ ಫಿಲ್ಮ್ಸ್ ಈ ಪಾರ್ಟ್​​ನರ್​​ಶಿಪ್​ ಮೂಲಕ ತನ್ನ ಗಡಿಯನ್ನು ವಿಸ್ತರಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ಕರುನಾಡಿನಲ್ಲಿ ಕಮರ್ಷಿಯಲ್​ ಸಿನಿಮಾವನ್ನು ಮರುವ್ಯಾಖ್ಯಾನಿಸಿದ್ದು ಮಾತ್ರವಲ್ಲದೇ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಕೆಜಿಎಫ್​ ಚಾಪ್ಟರ್​ 3 ಮತ್ತು ಕಾಂತಾರ 2 ಈಗಾಗಲೇ ಸಂಸ್ಥೆ ಕೈಯಲ್ಲಿದೆ. ಇದೀಗ ಪ್ರಭಾಸ್ ಅವರೊಂದಿಗಿನ ಈ ಒಪ್ಪಂದ ಅಭಿಮಾನಿಗಳ ನಿರೀಕ್ಷೆಗಳನ್ನು ದ್ವಿಗುಣಗೊಳಿಸಿದೆ.

ಇದನ್ನೂ ಓದಿ: 'ನವಗ್ರಹ' ಮರು ಬಿಡುಗಡೆ: ಸೆಲೆಬ್ರೇಷನ್​ ವಿಡಿಯೋ ನೋಡಿ; ದರ್ಶನ್ ಬಗ್ಗೆ ನಟ ನಾಗೇಂದ್ರ ಹೇಳಿದ್ದಿಷ್ಟು

ಈ ಒಪ್ಪಂದದ ಅಡಿಯಲ್ಲಿ ಬರುವ ಮೊದಲ ಚಿತ್ರ 'ಸಲಾರ್ 2'. ಕೆಜಿಎಫ್​​ ಸರಣಿ ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರಶಾಂತ್ ನೀಲ್ ಅವರೇ ಈ ಸೀಕ್ವೆಲ್​ ಮುಂದುವರಿಸಲಿದ್ದಾರೆ.. ಸಲಾರ್ 1 ಈಗಾಗಲೇ ಹೈ ಆಕ್ಷನ್ ಮತ್ತು ಕಥೆ ರವಾನಿಸಿದ ಶೈಲಿಯೊಂದಿಗೆ ಪ್ರೇಕ್ಷಕರನ್ನು ತಲುಪಿದ್ದು, ಅಭಿಮಾನಿಗಳು ಸೀಕ್ವೆಲ್​​ಗೆ ಕಾತುರದಿಂದ ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಲಾರ್ ಭಾಗ 2ರ ಮೇಲಿನ ನಿರೀಕ್ಷೆಗಳು ಹೆಚ್ಚಿದ್ದು, ಇನ್ನೆರಡು ಸಿನಿಮಾಗಳ ಟೈಟಲ್​ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: 'ಬಘೀರ' ಸಕ್ಸಸ್​ ಮೀಟ್​​ ವಿಡಿಯೋ ರಿಲೀಸ್​​: ಈವರೆಗಿನ ಕಲೆಕ್ಷನ್​ ಡೀಟೆಲ್ಸ್​​ ಹೀಗಿದೆ

ಬಾಹುಬಲಿ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ ಪ್ರಭಾಸ್, ಹಲವು ಬಿಗ್​ ಪ್ರಾಜೆಕ್ಟ್​ಗಳನ್ನೊಳಗೊಂಡಿದ್ದಾರೆ. ಸದ್ಯ ಬ್ಯುಸಿ ಶೆಡ್ಯೂಲ್​ ಹೊಂದಿದ್ದಾರೆ. ದಿ ರಾಜಾ ಸಾಬ್, ಸ್ಪಿರಿಟ್, ಕಲ್ಕಿ 2 ಮತ್ತು ಫೌಜಿ ಚಿತ್ರಗಳ ಶೂಟಿಂಗ್​ ಸಾಗಿದೆ. ಈ ಸಾಲಿನಲ್ಲಿ ಬಂದ ಕಲ್ಕಿ 2898 ಎಡಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಇಡೀ ಭಾರತದಾದ್ಯಂತ ದೊಡ್ಡ ಮಟ್ಟದ ಸ್ಟಾರ್​ಡಮ್​ ಹೊಂದಿದ್ದು, ಅವರ ಮುಂದಿನ ಚಿತ್ರಗಳಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.