ಕೋಝಿಕ್ಕೋಡ್ (ಕೇರಳ): ಡಿಜಿಟಲ್ ಜಗತ್ತಿನಲ್ಲಿ ಇಂದು ಜನರು ಚಿಲ್ಲರೆಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಡಿಜಿಟಲ್ ಪಾವತಿ ಹೊರತಾಗಿಯೂ ಅನೇಕ ಬಾರಿ ಚಿಲ್ಲರೆಗಾಗಿ ಪರಿತಪಿಸಬೇಕಾಗುತ್ತದೆ. ಈ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಿಂದ ಫೆಡರಲ್ ಬ್ಯಾಂಕ್ ಹೊಸ ಯೋಜನೆ ಚಾಲನೆಗೆ ತಂದಿದೆ. ಅದುವೇ ಕ್ಯೂಆರ್ ಕೋಡ್ ಆಧಾರಿತ ನಾಣ್ಯದ ವೆಂಡಿಂಗ್ ಮಷಿನ್. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಪುಥಿಯಾರಾ ಶಾಖೆಯಲ್ಲಿ ಇದನ್ನು ಅಳವಡಿಸಲಾಗಿದೆ. ಇದರಲ್ಲಿ 1, 2, 5, 10 ರೂ. ನಾಣ್ಯಗಳು ಲಭ್ಯವಿವೆ. ನಾಣ್ಯ ಬೇಕು ಎನ್ನುವವರು ಇಲ್ಲಿನ ವೆಂಡಿಂಗ್ ಮಷಿನ್ನಿಂದ ಸುಲಭವಾಗಿ ಪಡೆಯಬಹುದು. ಈ ಮಷಿನ್ನಿಂದ ಕೂಡ ಎಟಿಎಂನಂತೆ ಹಣ ಪಡೆಯುವಂತೆ ಸುಲಭವಾಗಿ ನಾಣ್ಯವನ್ನು ಪಡೆಯಬಹುದಾಗಿದ್ದು, ಸಾಮಾನ್ಯ ಜನರು ಸುಲಭವಾಗಿ ಬಳಕೆ ಮಾಡಬಹುದು.
ಏನಿದು ಕ್ಯೂಆರ್ ಕೋಡ್ ಆಧಾರಿತ ವೆಂಡಿಂಗ್ ಮಷಿನ್; ಕ್ಯಾಶ್ಲೆಸ್ ನಾಣ್ಯವನ್ನು ನೀಡುವ ವ್ಯವಸ್ಥೆ ಇದಾಗಿದ್ದು, ಇದಕ್ಕಾಗಿ ಗ್ರಾಹಕರು ತಮ್ಮ ಮೊಬೈಲ್ ಮೂಲಕವಾಗಿ ಕ್ಯೂಆರ್ ಕೋಡ್ ಮೂಲಕ ಯುಪಿಐ ವಹಿವಾಟು ಮಾಡಬಹುದಾಗಿದೆ. ಜನರಿಗೆ ನಾಣ್ಯದ ಕೊರತೆ ಸಮಸ್ಯೆ ಪರಿಹಾರವಾಗಲಿ ಎಂಬ ಗುರಿಯೊಂದಿಗೆ ಈ ಕ್ಯೂ ಆರ್ ಕೋಡ್ ಆಧಾರಿತ ನಾಣ್ಯದ ವೆಂಡಿಂಗ್ ಮೆಷಿನ್ಗೆ ಚಾಲನೆ ನೀಡಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಾವತಿಯನ್ನು ಮಾಡಬಹುದಾಗಿದೆ. ಮಷಿನ್ ಮೂಲಕ ನಾಣ್ಯಗಳು ಲಭ್ಯವಾಗಿದೆ.
ನಾಣ್ಯದ ವೆಂಡಿಂಗ್ ಮಷಿನ್ ಎಂಬುದು ಹೊಸ ವಿಷಯವಲ್ಲ. ಈ ಹಿಂದೆ ನೋಟುಗಳನ್ನು ಪಡೆದು ನಾಣ್ಯವನ್ನು ಪಡೆಯಬಹುದಾಗಿತ್ತು. ಆದರೆ, ಇದೀಗ ಕ್ಯೂಆರ್ ಕೋಡ್ ಆಧಾರಿತದ ಕಾಯಿನ್ ವೆಂಡಿಂಗ್ ಮಷಿನ್ ಅಲ್ಲಿ ನೋಟುಗಳನ್ನು ಪಡೆಯದೇ ಕ್ಯೂಆರ್ ಕೋಡ್ ಮೂಲಕ ಮಾತ್ರವೇ ಹಣ ಪಡೆಯಬೇಕು. ಆರ್ಬಿಐ 2023ರಲ್ಲಿಯೇ ಈ ರೀತಿಯ ಕ್ಯೂಆರ್ ಕೋಡ್ ಆಧಾರಿತ ನಾಣ್ಯದ ವೆಂಡಿಂಗ್ ಮಷಿನ್ ಅನ್ನು ಪರಿಚಯಿಸಲು ನಿರ್ಧರಿಸಿತು. ಇದೀಗ ಕೋಝಿಕ್ಕೋಡ್ನ ಫೆಡರಲ್ ಬ್ಯಾಂಕ್ನಲ್ಲಿ ಇದನ್ನು ಅಳವಡಿಸಲಾಗಿದೆ.
ಹೇಗೆ ಕಾರ್ಯ ನಿರ್ವಹಿಸಲಿದೆ: ಫೆಡ್ ಸ್ಟುಡಿಯೋದಲ್ಲಿ ಇದನ್ನು ಅಳವಡಿಕೆ ಮಾಡಲಾಗಿದ್ದು, ಇದು ಬ್ಯಾಂಕ್ ಮುಂದೆ ಇದೆ. ಇಲ್ಲಿ ಪರದೆ ಮೇಲೆ ಕಾಣುವ ಅಗತ್ಯವಿರುವ ಮೌಲ್ಯದ ಮೇಲೆ ಹಣ ಪಡೆಯಬಹುದಾಗಿದೆ. ಕ್ಯೂಆರ್ ಕೋಡ್ ಅನ್ನು ಮುಂದಿನ ಸ್ಕ್ರೀನ್ನಲ್ಲಿ ಕಾಣುವ ಮೌಲ್ಯಗಳ ಆಧಾರದ ಮೇಲೆ ಹಣವನ್ನು ಆಯ್ಕೆ ಮಾಡಬಹುದು. ಒಮ್ಮೆ ಡಿಜಿಟಲ್ ಪಾವತಿ ಆ್ಯಪ್ ತೆರೆದಾಗ, ಕ್ಯೂಆರ್ ಕೋಡ್ ಅನ್ನು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ಮೂಲಕ ಮಾಡಬಹುದು. ಗ್ರಾಹಕರು ಬ್ಯಾಂಕ್ ಮೂಲಕ ಹಣ ಪಡೆಯಬಹುದಾಗಿದೆ. ಸದ್ಯ ಒಂದು, ಎರಡು ರೂ. ಸೇರಿದಂತೆ ದೊಡ್ಡ ಪ್ರಮಾಣದ ಹಣ ಪಡೆಯಬಹುದು. ಸದ್ಯ ಇದರಲ್ಲಿ ಹೆಚ್ಚಿನ ಫಲಾನುಭವಿಗಳು ಬಸ್ ಚಾಲಕರು ಮತ್ತು ಅಂಗಡಿಯವರಾಗಿದ್ದಾರೆ. ಇನ್ನು ಬಸ್ಗೆ ಓಡಾಡುವ ವಿದ್ಯಾರ್ಥಿಗಳು ಇದೀಗ ಈ ಮಷಿನ್ನಿಂದ ಚಿಲ್ಲರೆ ಸಮಸ್ಯೆಗೆ ಮುಕ್ತಿ ಪಡೆದಿದ್ದಾರೆ.
ಇದನ್ನೂ ಓದಿ: ಡಾನಾ ಚಂಡಮಾರುತ ಅಬ್ಬರ: ಒಡಿಶಾದಲ್ಲಿ ಹಾನಿ, ಪಶ್ಚಿಮ ಬಂಗಾಳದಲ್ಲಿ ಎರಡು ಸಾವು