Honda CB300F Flex-Fuel Launched: ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ದೇಶದಲ್ಲಿ ಮೊದಲ ಫ್ಲೆಕ್ಸ್ ಇಂಧನ ಬೈಕ್ ಬಿಡುಗಡೆ ಮಾಡಿದೆ. ಹೋಂಡಾ ಇದನ್ನು CB300F ಹೆಸರಿನಲ್ಲಿ ಮಾರುಕಟ್ಟೆಗೆ ತಂದಿದೆ. ಈ ಹೊಸ ಹೋಂಡಾ ಫ್ಲೆಕ್ಸ್ ಫ್ಯೂಯಲ್ ಬೈಕ್ನ ಬುಕ್ಕಿಂಗ್ ಈಗಾಗಲೇ ಮಾರುಕಟ್ಟೆಯಲ್ಲಿ ಪ್ರಾರಂಭವಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಬೈಕ್ಗಳು ಅಕ್ಟೋಬರ್ ಕೊನೆಯ ವಾರದಿಂದ ಹೋಂಡಾ ಬಿಗ್ ವಿಂಗ್ ಡೀಲರ್ಶಿಪ್ಗಳಲ್ಲಿ ಲಭ್ಯವಿರುತ್ತವೆ. ಈ ಸಂದರ್ಭದಲ್ಲಿ ಫ್ಲೆಕ್ಸಿ ಇಂಧನ ಎಂದರೇನು? ಈ ಬೈಕ್ನ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳು ಇಂತಿವೆ.
ಹೋಂಡಾ CB300F ಫ್ಲೆಕ್ಸ್ ಇಂಧನ ವೈಶಿಷ್ಟ್ಯಗಳು:
- ಎಂಜಿನ್: 293.52 ಸಿಸಿ
- ಟಾರ್ಕ್: 25.6 Nm
- ಕರ್ಬ್ ತೂಕ: 153 ಕೆಜಿ
- ಪವರ್: 24.4 ಪಿಎಸ್
- ಮೈಲೇಜ್: 30 ಕೆಎಂಪಿಎಲ್
- ಬ್ರೇಕ್ಗಳು: ಡಬಲ್ ಡಿಸ್ಕ್
ಹೋಂಡಾ CB300F ಬೈಕ್ನ ಕಲರ್ಗಳು:
- ಸ್ಪೋರ್ಟ್ಸ್ ರೆಡ್
- ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್
ಹೋಂಡಾ CB300F ಬೈಕ್ನ ಬೆಲೆ:
- ಕಂಪನಿಯು ಹೊಸ ಹೋಂಡಾ CB300F ಫ್ಲೆಕ್ಸ್ ಫ್ಯುಯಲ್ ಮೋಟಾರ್ಸೈಕಲ್ ಬೆಲೆಯನ್ನು 1.70 ಲಕ್ಷ ರೂ. (ಎಕ್ಸ್ ಶೋ ರೂಂ) ಎಂದು ನಿಗದಿಪಡಿಸಿದೆ.
ಫ್ಲೆಕ್ಸಿ ಇಂಧನ ಎಂದರೇನು?: ಒಂದಕ್ಕಿಂತ ಹೆಚ್ಚು ಇಂಧನ ಮಿಶ್ರಣವನ್ನು ಫ್ಲೆಕ್ಸ್ ಇಂಧನ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಮೋಟಾರ್ಸೈಕಲ್ಗಳು ಪೆಟ್ರೋಲ್ + ಎಥೆನಾಲ್ ಅಥವಾ ಮೆಥನಾಲ್ನಲ್ಲಿ ಚಲಿಸುತ್ತವೆ. ಕಂಪನಿಯ ಎಂಡಿ ಮತ್ತು ಸಿಇಒ ತ್ಸುತ್ಸುಮು ಒಟಾನಿ ಈ ಮಾದರಿಯ ಬೈಕ್ ತರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಅವರ ಪಯಣದಲ್ಲಿ ಹೊಸ ಮೈಲಿಗಲ್ಲು ಎಂದರು. ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೊರಸೂಸುವಿಕೆ ಕಡಿಮೆ ಮಾಡುವ ಭಾಗವಾಗಿ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.
ಓದಿ: ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದ ಮಹೀಂದ್ರ; ಇದರಲ್ಲಿದೆ ಹಲವು ವಿಶೇಷತೆ