ಬೆಂಗಳೂರು: ಗದಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಮಕ್ಕಳ ಆರೋಗ್ಯ ಕಾರ್ಯಕ್ರಮದಡಿ ನರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಸಲಾಗುವುದು.
ಹುದ್ದೆ ವಿವರ: ಒಟ್ಟು 12 ನರ್ಸ್ ಹುದ್ದೆಗಳು.
ವಿದ್ಯಾರ್ಹತೆ: ಅಭ್ಯರ್ಥಿಗಳು ಡಿಪ್ಲೊಮಾ ಇನ್ ಜಿಎನ್ಎಮ್. ಬಿಎಸ್ಸಿ ನರ್ಸಿಂಗ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳು ಕರ್ನಾಟಕ ಸರ್ಕಾರ ಮಾನ್ಯತೆಯಲ್ಲಿ ನರ್ಸಿಂಗ್ ವಿದ್ಯಾರ್ಹತೆ, ಮತ್ತು ನರ್ಸಿಂಗ್ ಕೌನ್ಸಿಲ್ ನೋಂದಣಿ ಹೊಂದಿರಬೇಕು.
ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 45 ವರ್ಷ ವಯೋಮಿತಿ ಮೀರಿರಬಾರದು.
ವೇತನ: ಮಾಸಿಕ 14,187 ರೂ ನಿಗದಿಸಲಾಗಿದೆ.
ಆಯ್ಕೆ: ಈ ಹುದ್ದೆಗಳನ್ನು ರೋಸ್ಟರ್ ಮತ್ತು ಮೆರಿಟ್ ಆಧಾರದ ಮೇಲೆ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜನವರಿ 16 ಕಡೇಯ ದಿನವಾಗಿದೆ.
ಈ ಹುದ್ದ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು gadag.nic.in ಭೇಟಿ ನೀಡಿ.
ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಪಿಯುಸಿ ಆದವರಿಗೆ ಹುದ್ದೆ; ಈ ಜಿಲ್ಲೆಗಳಲ್ಲಿ ಇದೆ ಅವಕಾಶ