ನವದೆಹಲಿ: ಭಾರತದಲ್ಲಿನ 1.14 ಲಕ್ಷಕ್ಕೂ ಹೆಚ್ಚಿನ ಸ್ಟಾರ್ಟ್ ಅಪ್ ಕಂಪನಿಗಳು ಇಲ್ಲಿಯವರೆಗೆ 12 ಲಕ್ಷ ಉದ್ಯೋಗವನ್ನು ಸೃಷ್ಟಿಸಿವೆ ಎಂದು ಹಣಕಾಸು ಸಚಿವಾಲಯ ಭಾರತದ ಆರ್ಥಿಕತೆಯ ವಿಮರ್ಶೆ ವರದಿಯಲ್ಲಿ ತಿಳಿಸಿದೆ.
'ದಿ ಇಂಡಿಯನ್ ಎಕನಾಮಿ: ಎ ರಿವ್ಯೂ' ಜನವರಿ 2024ರ ಶೀರ್ಷಿಕೆ ಅಡಿ ಆರ್ಥಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿರುವ ಸಮಗ್ರ ವಿಮರ್ಶೆ ವರದಿಯಲ್ಲಿ ಸರ್ಕಾರದಿಂದ ಸ್ಟಾರ್ಟ್‌ಅಪ್ ಇಂಡಿಯಾ ಕ್ರಮದ ಅಡಿ ಗುರುತಿಸಲಾಗಿರುವ 1.14 ಲಕ್ಷ ಸ್ಟಾರ್ಟ್ ಅಪ್ಗಳು ಅಕ್ಟೋಬರ್ 2023ರ ವರೆಗೆ 12ಲಕ್ಷಕ್ಕೂ ಹೆಚ್ಚು ಉದ್ಯೋಗವನ್ನು ಸೃಷ್ಟಿಸಿದೆ.
ಸರ್ಕಾರಿ ಸ್ವಾಮ್ಯದ ಇ ಕಾಮರ್ಸ್ ಫ್ಲಾಟ್ಫಾರ್ಮ್ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿಸಿ) ನವೆಂಬರ್ 2023ರ ವರೆಗೆ 63 ಲಕ್ಷ ಕ್ಕೂ ಹೆಚ್ಚು ವಹಿವಾಟು ಮಾಡಿದೆ ಎಂದು ವರದಿ ತಿಳಿಸಿದೆ.
2023ರಲ್ಲಿ ಮೌಲ್ಯಮಾಪನದ ವಿಷಯ, ಕೆಲವಯ ಐಪಿಒಗಳು, ನಿಯಂತ್ರಣಗಳ ಬದಲಾವಣೆ ಮತ್ತು ಸೂಕ್ಷ್ಮಆರ್ಥಿಕತೆ ಮತ್ತು ಭೌಗೋಳಿಕ ರಾಜಕೀಯ ಟ್ರೆಂಡ್ನಂತಹ ಜಾಗತಿಕ ಸವಾಲುಗಳ ನಡುವೆ ಭಾರತವೂ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಪೂರಕವಾದ ವ್ಯವಸ್ಥೆ ಹೊಂದಿರುವ ಮೂರನೇ ಅತಿದೊಡ್ಡ ದೇಶವಾಗಿದೆ. ಕಳೆದ ವರ್ಷ ದೇಶದಲ್ಲಿ 950 ಟೆಕ್ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸಲಾಗಿದೆ.
31 ಸಾವಿರ ಟೆಕ್ಸ್ಟಾರ್ಟ್ಅಪ್ಗಳ ಸಂಚಿತ ನಿಧಿಯು 70 ಬಿಲಿಯನ್ ಡಾಲರ್ ಅನ್ನು ಮೀರಲಿದೆ ಎಂದು ಜಿನ್ನೊವ್ ಸಹಯೋಗದ ನಸ್ಸ್ಕೊಮ್ನ ಇತ್ತೀಚಿನ ವರದಿ ತಿಳಿಸಿದೆ.
2023ರಲ್ಲಿ ಜಾಗತಿಕ ಆರ್ಥಿಕತೆ ಮತ್ತು ನಿಯಂತ್ರಣ ಸವಾಲಿನ ನಡುವೆ ಭಾರತದ ಟೆಕ್ ಸ್ಟಾರ್ಟ್‌ಅಪ್ ಉದ್ಯಮಗಳು, ಮೂಲಭೂತ ವ್ಯವಸ್ಥೆ, ಅವುಗಳ ಲಾಭ ಮತ್ತು ಬೆಳವಣಿಗೆ ವೃದ್ಧಿಗೆ ಆದ್ಯತೆ ನೀಡಿವೆ ಎಂದು ನಸ್ಸ್ಕೊಮ್ ಅಧ್ಯಕ್ಷ ಡೆಬ್ಜನಿ ತಿಳಿಸಿದ್ದಾರೆ.
2024ರಲ್ಲಿ ಟೆಕ್ ಸ್ಟಾರ್ಟ್ಅಪ್ಗಳ ಸಂಸ್ಥಾಪಕರು ಬಿ2ಬಿ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ವೆಚ್ಚವನ್ನು ಉತ್ತಮಗೊಳಿಸುವ ಮತ್ತು ಗರಿಷ್ಠ ಲಾಭವನ್ನು ಕೇಂದ್ರೀಕರಿಸುವ ಮಾಪನದ ಹಂತಗಳೊಂದಿಗೆ ಆದಾಯದ ಬೆಳವಣಿಗೆಯ ಹಾದಿಯನ್ನು ಮುಂದುವರಿಸಲು ನಿರೀಕ್ಷಿಸುತ್ತಾರೆ.
2024ರಲ್ಲಿ ಡೀಪ್ಫೇಕ್ ಕೂಡ ಹೂಡಿಕೆ ಕೂಡ ಮುಂದುವರೆಯಲಿದೆ. ಜೆನರೇಟಿವ್ ಎಐ, ಅಕ್ಸಲರೇಷನ್ನಂತಹ ಶೇ 70ರಷ್ಟು ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸಲಾಗುವುದು.
ಸಾಮಾನ್ಯವಾಗಿ ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗೆ ಹಣಕಾಸಿನ ಕೊರತೆ ನಡುವೆ ಕೃತಕ ಬುದ್ಧಿಮತ್ತೆ ಉಗಮವೂ ದೇಶದ ಉದ್ಯಮಿಗಳಿಗೆ ಹೊಸ ಅವಕಾಶ ನೀಡಿದೆ. ಈ ವಲಯಕ್ಕೆ ಕೇಂದ್ರದ ಬೆಂಬಲವು ಸಿಗುತ್ತಿದೆ. (ಐಎಎನ್ಎಸ್)
ಇದನ್ನೂ ಓದಿ: ಆರ್ಥಿಕ ಬೆಳವಣಿಗೆಯ ವಿಮರ್ಶೆ: ಮಹಿಳಾ ನೇತೃತ್ವದ ಅಭಿವೃದ್ಧಿ ಪ್ರಮುಖ ಆದ್ಯತೆ