ETV Bharat / technology

2035 ರಲ್ಲಿ ಬಾಹ್ಯಾಕಾಶ ನಿಲ್ದಾಣ, 2040ರ ವೇಳೆಗೆ ಚಂದ್ರನ ಮೇಲೆ ಭಾರತೀಯರು: ಕೇಂದ್ರ ಸರ್ಕಾರದ ಯೋಚನೆ - ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ

ಚಂದ್ರಯಾನ, ಸಮುದ್ರಯಾನ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಸಚಿವಾಲಯವು ಬುಧವಾರ ಮಾಹಿತಿ ಹಂಚಿಕೊಂಡಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ((ಸಾಂದರ್ಭಿಕ ಚಿತ್ರ) ETV Bharat)
author img

By ANI

Published : Dec 11, 2024, 7:36 PM IST

ನವದೆಹಲಿ: 2035ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದಲಿದೆ. 2040 ರ ವೇಳೆಗೆ ಭಾರತೀಯರು ಚಂದ್ರನ ಮೇಲೆ ಕಾಲಿಡಲಿದ್ದಾರೆ. ಈ ಕುರಿತ ಸಂಶೋಧನೆಗಳು ತ್ವರಿತಗತಿಯಲ್ಲಿ ಸಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸಿದೆ. ನಮ್ಮ ದೇಶವು ಯುರೋಪಿಯನ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ 260 ಮಿಲಿಯನ್ ಯುರೋಗಳನ್ನು ಗಳಿಸಿದೆ ಎಂದು ಹೇಳಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಸಚಿವಾಲಯವು ಕೈಗೊಂಡಿರುವ ಪ್ರತಿಷ್ಠಿತ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಮಹತ್ತರ ಸಾಧನೆ ಮಾಡಿರುವ ಭಾರತ ಇದೀಗ, ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದತ್ತ ದಿಟ್ಟ ಹೆಜ್ಜೆ ಇಟ್ಟಿದೆ. 2035ರ ವೇಳೆಗೆ ಇದು ಸಾಕಾರವಾಗಲಿದೆ ಎಂದು ಹೇಳಿದರು.

ಗಗನ, ಸಮುದ್ರಯಾನದ ತಯಾರಿ: ಭಾರತದ ಮಾನವಸಹಿತ 'ಗಗನಯಾನ ಯೋಜನೆ'ಯ ವಿವರಗಳನ್ನು ಬಹಿರಂಗಪಡಿಸಿದ ಸಚಿವರು, 2025 ರ ಅಂತ್ಯ ಅಥವಾ 2026 ರ ಆರಂಭದಲ್ಲಿ ಮೊದಲ ಭಾರತೀಯ ಗಗನಯಾತ್ರಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಎಂದರು.

ಭಾರತದ ಮೊದಲ ಮಾನವಸಹಿತ ಸಾಗರ ಕಾರ್ಯಾಚರಣೆಯಾದ 'ಸಮುದ್ರಯಾನ'ದ ಭಾಗವಾಗಿ ಮತ್ಸ್ಯ - 6000 ಜಲಾಂತರ್ಗಾಮಿ ನೌಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ನೌಕೆಯಲ್ಲಿ ಮೂವರು ಸಮುದ್ರದಲ್ಲಿ ಗರಿಷ್ಠ 6 ಕಿ.ಮೀ ಆಳದವರೆಗೂ ತಲುಪಬಹುದಾಗಿದೆ. ಇದರಿಂದ ಜಲ ರಹಸ್ಯವನ್ನು ಅಧ್ಯಯನ ಮಾಡಬಹುದು ಎಂದು ಅವರು ಹೇಳಿದರು.

ಇದು ಮಾನವಸಹಿತ ಜಲಾಂತರ್ಗಾಮಿ ನೌಕೆಯಾಗಿದ್ದು, ಸಮುದ್ರತಳದ ಅನ್ವೇಷಣೆಗೆ ನೆರವಾಗಲಿದೆ. ಚೆನ್ನೈನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ಈ ನೌಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಬಾಹ್ಯಾಕಾಶ ನಿಲ್ದಾಣ ಹೊಂದಿರುವ ದೇಶಗಳು: ಅಮೆರಿಕ, ರಷ್ಯಾ, ಜಪಾನ್ ಮತ್ತು ಕೆನಡಾ ಪಾಲುದಾರಿಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 1998 ರಲ್ಲಿ ಸ್ಥಾಪಿಸಲಾಗಿದೆ. ಚೀನಾ ತನ್ನದೇ ಆದ ಪ್ರತ್ಯೇಕ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿದೆ. 2035ರ ವೇಳೆಗೆ ಭಾರತವೂ ಆ ಪಟ್ಟಿಗೆ ಸೇರಲಿದೆ.

ಪರಮಾಣು ಶಕ್ತಿಯೂ ಹೆಚ್ಚಳ: ಭಾರತದ ಪರಮಾಣುಶಕ್ತಿಯು ಕಳೆದ ಒಂದು ದಶಕದಲ್ಲಿ ದುಪ್ಪಟ್ಟಾಗಿದೆ. 2031 ರ ಹೊತ್ತಿಗೆ ಇದು ಮೂರು ಪಟ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಇದೇ ವೇಳೆ ಮಾಹಿತಿ ನೀಡಿದರು.

2014 ರಲ್ಲಿ ದೇಶದ ಪರಮಾಣ ಶಕ್ತಿಯು 4,780 ಮೆಗಾವ್ಯಾಟ್​​ ಸಾಮರ್ಥ್ಯವಿತ್ತು. 2024 ರಲ್ಲಿ 8,081 ಮೆಗಾವ್ಯಾಟ್​​ಗೆ ಹೆಚ್ಚಳವಾಗಿದೆ. 2031-32 ರ ವೇಳೆಗೆ ಅಣುಶಕ್ತಿಯ ಉತ್ಪಾದನೆ 22,480 ಮೆಗಾವ್ಯಾಟ್​ಗೆ ಹೆಚ್ಚಲಿದೆ ಎಂದು ಸದನಕ್ಕೆ ಸಚಿವರು ತಿಳಿಸಿದರು.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ನಕ್ಸಲೀಯರಿಂದ ಬಿಜೆಪಿ ಕಾರ್ಯಕರ್ತನ ಹತ್ಯೆ: ವಾರದಲ್ಲಿ 5ನೇ ಘಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.