ETV Bharat / technology

5 ವರ್ಷಗಳಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಮಹತ್ತರ ಪ್ರಗತಿ: ಕೇಂದ್ರ ಸರ್ಕಾರ - ಬಾಹ್ಯಾಕಾಶ ಸಂಶೋಧನೆ

ಭಾರತೀಯ ಬಾಹ್ಯಾಕಾಶ ಯೋಜನೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಮಹತ್ತರ ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

Indian space programme touched several new highs in past 5 years: Govt

author img

By ETV Bharat Karnataka Team

Published : Feb 9, 2024, 12:25 PM IST

ನವದೆಹಲಿ: ಕಳೆದ 5 ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನೆ ಹಲವಾರು ಹೊಸ ಮಜಲುಗಳಿಗೆ ಏರಿದೆ ಮತ್ತು ದೇಶೀಯ ಕೈಗಾರಿಕೆಗಳ ಗಣನೀಯ ಕೊಡುಗೆಯೊಂದಿಗೆ ವಿಶಿಷ್ಟ ಸಾಧನೆಗಳನ್ನು ಮಾಡಲಾಗಿದೆ ಎಂದು ಗುರುವಾರ ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

ಎಲ್​ವಿಎಂ 3 ಮತ್ತು ಪಿಎಸ್ಎಲ್​ವಿ ವಾಣಿಜ್ಯ ಉಡಾವಣೆಗಳು, ಎಸ್ಎಸ್ಎಲ್​ವಿ ಅಭಿವೃದ್ಧಿ, ಭೂ ವೀಕ್ಷಣಾ ಉಪಗ್ರಹಗಳು, ನ್ಯಾವಿಗೇಷನ್ ಉಪಗ್ರಹ, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮತ್ತು ರೋವಿಂಗ್, ಸೂರ್ಯನನ್ನು ಅಧ್ಯಯನ ಮಾಡುವ ಮಿಷನ್ (ಆದಿತ್ಯ- ಎಲ್ 1) ಮತ್ತು ಮಾನವ ಬಾಹ್ಯಾಕಾಶ ಹಾರಾಟಗಳು ಕಳೆದ ಐದು ವರ್ಷಗಳ ಪ್ರಮುಖ ಸಾಧನೆಗಳಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಉತ್ತೇಜಿಸುವ ಸಲುವಾಗಿ ಸ್ಟಾರ್ಟ್ ಅಪ್​​ಗಳನ್ನು ಪ್ರೋತ್ಸಾಹಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಡಿಜಿಟಲ್ ಪ್ಲಾಟ್ ಫಾರ್ಮ್​ನಲ್ಲಿ ನೋಂದಾಯಿತ ಸ್ಟಾರ್ಟ್ ಅಪ್ ಗಳ ಒಟ್ಟು ಸಂಖ್ಯೆ 189 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ ಅವರು, ಭಾರತೀಯ ಬಾಹ್ಯಾಕಾಶ ನೀತಿ 2023 ಮತ್ತು ಖಾಸಗಿ ವಲಯವನ್ನು ಉತ್ತೇಜಿಸಲು ಇನ್-ಸ್ಪೇಸ್ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಶ್ಲಾಘಿಸಿದರು.

ಇನ್-ಸ್ಪೇಸ್ ಜಾರಿಗೆ ತಂದ ವಿವಿಧ ಯೋಜನೆಗಳಲ್ಲಿ ಸೀಡ್ ಫಂಡಿಂಗ್ ಯೋಜನೆ, ಬೆಲೆ ಬೆಂಬಲ ನೀತಿ, ಮಾರ್ಗದರ್ಶನ ಬೆಂಬಲ, ಎನ್​ಜಿಇಗಳಿಗಾಗಿ ವಿನ್ಯಾಸ ಪ್ರಯೋಗಾಲಯ, ಬಾಹ್ಯಾಕಾಶ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ, ಇಸ್ರೋ ಸೌಲಭ್ಯ ಬಳಕೆಗೆ ಅವಕಾಶ, ಎನ್​ಜಿಇಗಳಿಗೆ ತಂತ್ರಜ್ಞಾನ ವರ್ಗಾವಣೆ ಮುಂತಾದವು ಸೇರಿವೆ.

"ಬಾಹ್ಯಾಕಾಶ ಯೋಜನೆಗಳು ಮತ್ತು ಎನ್​ಜಿಇಗಳು ಕಲ್ಪಿಸಿರುವ ಅಪ್ಲಿಕೇಶನ್​ಗಳ ಸಾಕ್ಷಾತ್ಕಾರಕ್ಕೆ ಅಗತ್ಯ ಬೆಂಬಲ ಒದಗಿಸಲು ಇನ್ -ಸ್ಪೇಸ್ ಸರ್ಕಾರೇತರ ಘಟಕಗಳೊಂದಿಗೆ (ಎನ್​ಜಿಇ) ಸುಮಾರು 51 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ. ಇದು ಉಡಾವಣಾ ವಾಹನಗಳು ಮತ್ತು ಉಪಗ್ರಹಗಳ ಉತ್ಪಾದನೆಯಲ್ಲಿ ಉದ್ಯಮದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ" ಎಂದು ಸಚಿವರು ಹೇಳಿದರು.

ಇಸ್ರೋ ಪ್ರಸ್ತುತ ಡೀಪ್ ಸ್ಪೇಸ್ ಪ್ರೋಬ್​ಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಹೊಂದಿಲ್ಲ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ "ಮೇಕ್ ಇನ್ ಇಂಡಿಯಾ" ಉಪಕ್ರಮವು ದೇಶೀಯ ಉತ್ಪಾದನೆ, ನಾವೀನ್ಯತೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವ ಕಾರ್ಯತಂತ್ರದ ವಿಧಾನವಾಗಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ : ಚಂದ್ರನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಚೀನಾ ಉಪಗ್ರಹ ತಂದ ಅವಶೇಷಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.