ETV Bharat / state

ಬಿಜೆಪಿ ನಾಯಕರಿಂದ ಅವಾಚ್ಯ ಶಬ್ದ ಬಳಕೆ ಆರೋಪ: ಆರ್​ಎಸ್​ಎಸ್​ ಕಚೇರಿಗೆ​ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತರು - LETTER TO RSS OFFICE

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಮುನಿರತ್ನ ಮತ್ತು ಎಂಎಲ್​ಸಿ ಸಿ.ಟಿ.‌ರವಿ ಬಳಸಿರುವ ಪದಗಳ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ಆರ್​ಎಸ್ಎಸ್ ಕಚೇರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್​ ಕಾರ್ಯಕರ್ತರು
ಕಾಂಗ್ರೆಸ್​ ಕಾರ್ಯಕರ್ತರು (ETV Bharat)
author img

By ETV Bharat Karnataka Team

Published : Jan 6, 2025, 3:25 PM IST

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ, ಆರ್. ಅಶೋಕ್, ಸಿ.ಟಿ.ರವಿ, ಮುನಿರತ್ನ ಬಳಸಿರುವ ಪದ ಹಾಗೂ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಆರ್​ಎಸ್​ಎಸ್ ಕಚೇರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.‌ ಚಾಮರಾಜಪೇಟೆಯ ಕೇಶವ ಕೃಪಾ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ಪತ್ರವನ್ನು ಸಲ್ಲಿಕೆ ಮಾಡಿದರು.

ಪತ್ರದಲ್ಲಿ ಏನಿದೆ?: "ಪತ್ರದಲ್ಲಿ ಸದಾ ವತ್ಸಲೇ ಮಾತೃಭೂಮಿ ಎಂಬ ನಿಮ್ಮ ಮಾತು ಹಾಗೂ ತಾಯಂದಿರಿಗೆ ನೀಡುವ ಗೌರವದ ಬಗ್ಗೆ ಈಗ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಆರ್​ಎಸ್​ಎಸ್ ಶಿಸ್ತಿನ ಸಿಪಾಯಿಗಳು ಇದಕ್ಕೆ ಸ್ಪಷ್ಟನೆ ನೀಡಬೇಕು. ರಾಷ್ಟ್ರೀಯ ಸ್ವಯಂಸೇವಾ ಸಂಘವೆಂದರೆ ಅದು ಆರ್​​ಎಸ್ಎಸ್ ಎಂದು ಎಲ್ಲರಿಗೂ ತಿಳಿದಿದೆ" ಎಂದು ಹೇಳಿದ್ದಾರೆ.

"ನಾನು ಆರ್​ಎಸ್​ಎಸ್​ನ ಶಿಸ್ತಿನ ಸಿಪಾಯಿಗಳು, ಸ್ವಯಂ ಸೇವಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಬಿಜೆಪಿ ನಾಯಕರಾದ ಸಿ.ಟಿ.ರವಿ ಮತ್ತು ಆರ್.ಅಶೋಕ್ ರವರ ಬಾಯಲ್ಲಿ ಬರುತ್ತಿರುವ ಅತ್ಯಂತ ಕೆಟ್ಟ ಪದಗಳು ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರಿಗೆ ಶಾಖೆಗಳಲ್ಲಿ ಇಂತಹ ತರಬೇತಿಯನ್ನು ನೀಡಿದ್ದೀರಾ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಈ ಪತ್ರದ ಮೂಲಕ ಕೋರುತ್ತಿದ್ದೇವೆ" ಎಂದು ಉಲ್ಲೇಖಿಸಿದ್ದಾರೆ.

"ಭಾರತೀಯ ಜನತಾ ಪಕ್ಷ ಪ್ರತಿ ಸಂದರ್ಭದಲ್ಲಿ ಎಲ್ಲಾ ಸಭೆಗಳಲ್ಲೂ ನಾವು ಆರ್​​ಎಸ್​ಎಸ್​ನಲ್ಲಿ ತರಬೇತಿಯನ್ನು ಪಡೆದಿದ್ದೇವೆ ಎಂಬ ಮಾತನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಾಗಾದರೆ ಭಾರತೀಯ ಜನತಾ ಪಕ್ಷದ ನಾಯಕರುಗಳು ಇತ್ತೀಚಿನ ದಿನಗಳಲ್ಲಿ ಇಡೀ ರಾಷ್ಟ್ರಕ್ಕೆ ಆರ್​ಎಸ್​ಎಸ್​ನ ಕಟ್ಟಾಳುಗಳಾದ ಸಿ.ಟಿ.ರವಿ ವಿಧಾನ ಪರಿಷತ್​ನಲ್ಲಿ ಬಳಸಿರುವ ಪದ ಅದನ್ನು ನಾವು ಹೇಳಲು ಸಾಧ್ಯವಿಲ್ಲ ಅದನ್ನು ನೀವೇ ಅರ್ಥೈಸಿಕೊಳ್ಳಿ. ವಿರೋಧ ಪಕ್ಷದ ನಾಯಕರಾದ ಆ‌ರ್.ಅಶೋಕ್ ರವರು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಬಳಸಿರುವ ಆ ಪದವನ್ನು ಈಗಾಗಲೇ ನಿಮ್ಮ ಶಾಖೆಗೆ ತಲುಪಿದೆ ಎಂದು ನಾವು ಭಾವಿಸಿದ್ದೇವೆ" ಎಂದು ತಿಳಿಸಿದ್ದಾರೆ.

ನೀವು ಇವರ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತೀರಾ?: "ಇನ್ನು ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಎಂದ ಕೂಡಲೇ ನಿಮಗೆ ಈಗಾಗಲೇ ಅರ್ಥವಾಗಿರಬೇಕು. ಇಂತಹ ವ್ಯಕ್ತಿಗಳು ಬಳಸಿದ ಪದವನ್ನು ನಿಮ್ಮ ಶಾಖೆಯಲ್ಲಿ ತರಬೇತಿ ಹೊಂದಿರುವ ಬಿಜೆಪಿ ನಾಯಕರು ಅತ್ಯಂತ ಹೆಮ್ಮೆಯಿಂದ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೂ ಸಹ ಇನ್ನೂ ಇವರ ವಿರುದ್ಧ ಯಾಕೆ ಆರ್​ಎಸ್​ಎಸ್​ನ ಮುಖ್ಯಸ್ಥರು ಮೌನವಾಗಿದ್ದಾರೆ ಎಂಬುದನ್ನು ನೀವೇ ತಿಳಿಸಬೇಕು. ಯಾಕೆ ಇವರ ವಿರುದ್ಧ ನೀವು ಕ್ರಮ ಕೈಗೊಂಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು" ಎಂದು ಕೋರಿದ್ದಾರೆ.

"ಮಾಜಿ ಸಿಎಂ ಯಡಿಯೂರಪ್ಪ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದರೂ ಸಹ ಅವರನ್ನು ಸಮರ್ಥಿಸಿಕೊಂಡಿರುವುದು ಆರ್​​ಎಸ್​ಎಸ್ ನೀತಿ ಎಂದು ಈಗಾಗಲೇ ಬಹಿರಂಗವಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಕ್ಫ್ ಬೋರ್ಡ್ ಹಗರಣ ಮುಚ್ಚಿ ಹಾಕಲು 150 ಕೋಟಿ ಆಮಿಷ ಒಡ್ಡಿರುವ ಬಗ್ಗೆ ಮಂಡಳಿಯ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರೇ ಬಹಿರಂಗಪಡಿಸಿದ್ದಾರೆ. ಇನ್ನೂ ಅನೇಕ ಭ್ರಷ್ಟಾಚಾರದ ಪ್ರಕರಣಗಳು ಇದೆ ಎಂಬುದರ ಬಗ್ಗೆ ಈಗಾಗಲೇ ನಿಮ್ಮ ಸಂಘದ ಮತ್ತೊಬ್ಬ ನಿಷ್ಠಾವಂತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅನೇಕ ಬಾರಿ ಬಹಿರಂಗ ಪಡಿಸಿದ್ದಾರೆ" ಎಂದು ದೂರಿದ್ದಾರೆ.

"ಭ್ರಷ್ಟಾಚಾರದ ಪ್ರಕರಣದಿಂದ ಮುಕ್ತರಾಗಿ ಇವರೆಲ್ಲ ಆರ್​ಎಸ್​ಎಸ್ ಕಚೇರಿಗೆ ಬರಬೇಕೆಂಬ ಆದೇಶವನ್ನು ಹೊರಡಿಸಿದಾಗ ಮಾತ್ರ ಬಿಜೆಪಿಯ ಭ್ರಷ್ಟರಿಗೂ ಆರ್​ಎಸ್​ಎಸ್​ಗೂ ಅಂತರ ಕಡಿಮೆ ಇದೆ ಎಂಬುದು ಸಾಬೀತಾಗುತ್ತದೆ. ಇಲ್ಲದೇ ಹೋದ ಪಕ್ಷದಲ್ಲಿ ಆರ್​ಎಸ್​​ಎಸ್ ಸಂಸ್ಥೆಯೇ ಈ ಎಲ್ಲಾ ಭ್ರಷ್ಟರಿಗೂ ನೈತಿಕ ಬೆಂಬಲ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಯಡಿಯೂರಪ್ಪ ವಿರುದ್ಧ ಅತ್ಯಂತ ಗಂಭೀರವಾದ ಪೋಕ್ಸೋ ಪ್ರಕರಣ ದಾಖಲಾಗಿದ್ದರೂ ಸಹ ಅವರನ್ನು ಪ್ರಶ್ನೆ ಮಾಡುವ ಶಕ್ತ ಆರ್​​ಎಸ್​​ಎಸ್ ಕಳೆದುಕೊಂಡಿರುವುದು ಎತ್ತಿ ತೋರುತ್ತದೆ" ಎಂದು ಟೀಕಿಸಿದ್ದಾರೆ.

ಈ ಪದಗಳ ಬಗ್ಗೆ ತರಬೇತಿ ನೀಡಿದ್ದೀರಾ ಎಂಬ ಬಗ್ಗೆ ಸ್ಪಷ್ಟನೆ ಕೊಡಿ: "ಬಿಜೆಪಿ ನಾಯಕರು ಬಳಸಿರುವ ಪದ ನಿಮ್ಮ ಶಾಖೆಯಲ್ಲಿ ತರಬೇತಿ ನೀಡಿದ್ದರೆ ಅದರ ಬಗ್ಗೆ ಸ್ಪಷ್ಟನೆ ನೀಡಿ ಅಥವಾ ಇಂತಹ ಪದ ಬಳಸಲು ನಾವು ಖಂಡಿಸುತ್ತೇವೆ ಎಂಬುವ ಮನೋ ಧೈರ್ಯ ಇದ್ದರೆ ಇದರ ಬಗ್ಗೆ, ತಾವು ಪತ್ರಿಕೆಗಳಿಗೆ ಹೇಳಿಕೆ ನೀಡಿ ಆ ವ್ಯಕ್ತಿಗಳ ಭಾಷೆಯನ್ನು ಖಂಡಿಸಬೇಕು ಮತ್ತು ಅವರನ್ನು ತಮ್ಮ ಸಂಘದಿಂದ ಉಚ್ಚಾಟಿಸಬೇಕು. ಅವರು ಬಳಸಿರುವ ಎಲ್ಲ ಮಾಹಿತಿಯನ್ನು ತಮ್ಮ ಸಂಘಕ್ಕೆ ನಾವು ದಾಖಲೆ ಸಮೇತ ನೀಡುತ್ತೇವೆ. ಇದಕ್ಕೆ ತಾವು ಕಾಲಾವಕಾಶ ನೀಡಿದರೆ ಸೂಕ್ತ ಮಾಹಿತಿಗಳೊಂದಿಗೆ ನಿಮ್ಮ ಕಚೇರಿಗೆ ತಲುಪಿಸುತ್ತೇವೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಜಿಲ್ಲಾಡಳಿತದ ವಿರೋಧ ನಡುವೆಯೂ ಸಂಭಾಜಿ ಮಹಾರಾಜ ಪ್ರತಿಮೆ ಅನಾವರಣ: ಬೃಹತ್​ ಶೋಭಾಯಾತ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.