ETV Bharat / technology

ಯಾವುದೇ ಬಟ್ಟೆ ತೊಟ್ಟರೂ ಮಹಿಳೆಯರತ್ತ ಅನುಚಿತ ನೋಟ; ಪುರುಷರ ಮನಸ್ಥಿತಿ ಕುರಿತು ಐಐಐಟಿ ಹೈದರಾಬಾದ್​ ಅಧ್ಯಯನ - STUDY SEXUAL OBJECTIFICATION

author img

By ETV Bharat Tech Team

Published : Aug 28, 2024, 11:44 AM IST

ಮಹಿಳೆಯರತ್ತ ಪುರುಷರು ನೋಡುವ ದೃಷ್ಟಿಯನ್ನು ಅಳೆತೆ ಮಾಡಲು, ಐಐಐಟಿ ಮುಂದಾಗಿದೆ. ಇದಕ್ಕಾಗಿ ಅದು ಐ ಟ್ರ್ಯಾಕಿಂಗ್​ ತಂತ್ರಜ್ಞಾನವನ್ನು ಬಳಕೆ ಮಾಡಿದೆ.

iiit-hyderabad-study-reveals-inappropriate-gaze-patterns-towards-women
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ಹೈದರಾಬಾದ್​: ಮಹಿಳೆಯರು ಯಾವುದೇ ಬಟ್ಟೆ ತೊಟ್ಟಿದ್ದರೂ ಪುರುಷರು ಅವರತ್ತ ಲೈಂಗಿಕ ವಸ್ತುನಿಷ್ಟತೆಯಿಂದ ನೋಡುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಐಐಟಿ ಹೈದರಾಬಾದ್​ನ ಕಾಗ್ನಿಟಿವ್​ ಸೈನ್ಸ್​ ಲ್ಯಾಬ್​ನಲ್ಲಿ ಇತ್ತೀಚೆಗೆ ಮಹಿಳೆಯರನ್ನು ದುರುಗಟ್ಟಿ ಅನುಚಿತವಾಗಿ ನೋಡುವ ಮನಸ್ಥಿತಿಯ ಕುರಿತು ಅಧ್ಯಯನ ನಡೆಸಲಾಗಿದೆ. ಈ ಸಂಶೋಧನಾ ವರದಿಯನ್ನು ಕಳೆದ ತಿಂಗಳು ನೆದರ್‌ಲ್ಯಾಂಡ್‌ನ ರೋಟರ್‌ಡ್ಯಾಮ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಸಂಶೋಧನೆಯನ್ನು ಮಂಡಿಸಲಾಗಿದೆ.

ಪ್ರೊ ಕವಿತಾ ವೆಮುರಿ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಆಯುಷಿ ಅಗರ್ವಾಲ್​ ಮತ್ತು ಶ್ರೀಜಾ ಭುಪತಿರಾಜು ಅವರು ಭಾಗಿಯಾಗಿದ್ದರು. ಇದಕ್ಕಾಗಿ ಅವರು ಅನೇಕ ಪದವಿ, ಇಂಜಿನಿಯರಿಂಗ್​ ಸೇರಿಂದಂತೆ ಭಾರತದೆಲ್ಲೆಡೆ ಐಟಿ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿದ್ದಾರೆ. ಅನೇಕ ಬಗೆಯ ದಿರಿಸುಗಳಲ್ಲಿ ಯುವತಿಯರು ತೊಟ್ಟಾಗ ಪುರುಷ ಐಟಿ ಉದ್ಯೋಗಿಗಳು ನೋಡುವ ದೃಷ್ಟಿಯನ್ನು ಅಳೆಯಲು ಅವರು ಐ ಟ್ರ್ಯಾಕಿಂಗ್​ ತಂತ್ರಜ್ಞಾನವನ್ನು ಬಳಕೆ ಮಾಡಿದ್ದಾರೆ. ಅಧ್ಯಯನದಲ್ಲಿ ಭಾಗಿಯಾದವರ ಭಾವನಾತ್ಮಕ ಪ್ರತಿಕ್ರಿಯೆ ಸಂಗ್ರಹಿಸುವ ಮೂಲಕ ದೃಷ್ಟಿಕೋನವನ್ನು ಅರ್ಥೈಸಿಕೊಳ್ಳಲಾಗಿದೆ

ಪುರುಷರು ಸಾರ್ವಜನಿಕ ಸಾರಿಗೆ, ಸಾಮಾಜಿಕ ಕೂಟಗಳು ಮತ್ತು ಮದುವೆ ಸಮಾರಂಭದಂತಹ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ್ಗೆ ಮಹಿಳೆಯರನ್ನು ಅನುಚಿತವಾಗಿ ನೋಡುತ್ತಾರೆ. ಅವರು ಕಣ್ಣಿನ ಸಂಪರ್ಕ ಗೌರವ ಕಾಪಾಡಿಕೊಳ್ಳುವ ಬದಲಾಗಿ ದೇಹದ ಕೆಲವು ಭಾಗದಲ್ಲಿ ಗಮನ ಕೇಂದ್ರೀಕರಿಸುತ್ತಾರೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ.

ಕೊಡುಗೆ ನೀಡುವ ಅಂಶಗಳು: ಅಧ್ಯಯನದಲ್ಲಿ ಯುವತಿಯರು ಮತ್ತು ಬಾಲಕಿಯರ ಮೇಲೆ ಲೈಂಗಿಕದ ದೌರ್ಜನ್ಯ ಹೆಚ್ಚಾಗಲು ಅನೇಕ ಅಂಶಗಳು ಕೊಡುಗೆ ನೀಡುತ್ತದೆ ಎಂದು ಪ್ರೊ ಕವಿತಾ ವೆಮುರಿ ತಿಳಿಸಿದ್ದಾರೆ. ಇದರಲ್ಲಿ ಮಾದಕತೆ, ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲತೆ ಮತ್ತು ಚಲನಚಿತ್ರಗಳಲ್ಲಿನ ಐಟಂ ಹಾಡುಗಳು ಅವರ ಅನುಚಿತ ವರ್ತನೆಗಳ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ. ಇಂತಹ ಸಾಂಸ್ಕೃತಿಕ ಅಂಶಗಳಿಂದಾಗಿ ಯುವಕರು, ಮಹಿಳೆಯರನ್ನು ಲೈಂಗಿಕ ವಸ್ತು ಎಂದು ದೃಷ್ಟಿ ಹೊಂದುವಂತೆ ಮಾಡುತ್ತದೆ. ಇದು ಪರಿಚಯ ಮತ್ತು ಅಪರಿಚಿತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುತ್ತದೆ

ಸಾಂಸ್ಜೃತಿಕ ಮತ್ತು ಸಾಮಾಜಿಕ ಒಳನೋಟ: ಅಧ್ಯಯನದಲ್ಲಿ ಮಹಿಳೆಯರ ಉಡುಪಿನ ಬಗ್ಗೆ ಸಮಾಜ ಹೊಂದಿರುವ ಗ್ರಹಿಕೆಯನ್ನು ಅನ್ವೇಷಣೆ ಮಾಡಲಾಗಿದೆ. ಮಹಿಳೆಯರು ಹೇಗೆ ಬಟ್ಟೆ ಧರಿಸಬೇಕು ಎಂಬ ಕುರಿತು ಭಾರತೀಯ ಸಂಸ್ಕೃತಿಯಲ್ಲಿ ಬಲವಾದ ಅಭಿಪ್ರಾಯ ಹೊಂದಿರುವುದನ್ನು ಅಧ್ಯಯನ ಒತ್ತು ಹೇಳಿದೆ. ಮಹಿಳೆ ಸಲ್ವಾರ್​- ಕುರ್ತಾದಂತಹ ಸಾಂಪ್ರದಾಯಿಕ ದಿರಿಸುಗಳು ಧರಿಸಿದಾಗ ಅಥವಾ ಜೀನ್ಸ್​​, ಶರ್ಟ್​ನಂತಹ ಆಧುನಿಕ ಉಡುಪಿನ ಆಧಾರದ ಮೇಲೆ ಸಾರ್ವಜನಿಕ ಸಹಾನುಭೂತಿ ಬದಲಾಗುತ್ತದೆ.

ಗೊಂಬೆ ಮೇಲೆ ಪ್ರಯೋಗ: ಈ ಗ್ರಹಿಕೆಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವ ಉದ್ದೇಶದಿಂದ ಸಂಶೋಧಕರು ಗೊಂಬೆಗೆ ಸಲ್ವಾರ್​, ಕುರ್ತಾ, ಸೀರೆ, ಜೀನ್ಸ್​ ಮತ್ತು ಶರ್ಟ್​​ನಂತಹ ವಿವಿಧ ಬಟ್ಟೆ ಹಾಕಿ ಪ್ರಯೋಗ ನಡೆಸಿದರು. ಈ ಗೊಂಬೆಗಳನ್ನು ಸಾವಿರಾರು ಜನರಿಗೆ ವಿತರಣೆ ಮಾಡಲಾಯಿತು. ಗೊಂಬೆಯನ್ನು ನೋಡಲು ಭಾಗಿಯಾದವರ ದೃಷ್ಟಿಕೋನವನ್ನು ಅರಿಯಲು ಹೀಟ್​ ಮ್ಯಾಪ್​ ಟೆಕ್ನಾಲಾಜಿಯನ್ನು ಬಳಕೆ ಮಾಡಲಾಯಿತು. ಈ ವೇಳೆ ಬಹುತೇಕ ಯುವಕರು ಗೊಂಬೆ ಧರಿಸುವ ಬಟ್ಟೆ, ಅದರ ಮುಖದ ಬದಲಾಗಿ ಲೈಂಗಿಕ ದೇಹದ ಭಾಗಗಳ ಮೇಲೆ ಗಮನ ಹರಿಸಿದರು.

ಈ ಅಧ್ಯಯನವು ಸಮಾಜದಲ್ಲಿ ಮಹಿಳೆಯರ ಬಗ್ಗೆ ಹೊಂದಿರುವ ಅನುಚಿತ ನೋಟ ಮತ್ತು ಆಕೆಯನ್ನು ವಸ್ತುನಿಷ್ಠವಾಗಿ ಸಮಾಜ ವ್ಯಾಖ್ಯಾನಿಸುವ ಕುರಿತು ತಿಳಿಸುತ್ತದೆ. ಹಾಗೇ ಮಹಿಳೆಯರ ಕುರಿತು ಸಾಂಸ್ಕೃತಿಕ ಬದಲಾವಣೆ ಮತ್ತು ಜಾಗೃತಿ ಹೊಂದುವ ಅಗತ್ಯವನ್ನು ಈ ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಕ್ಷಮಿಸಿ; ಟಿಎಂಸಿಪಿ ಸಂಸ್ಥಾಪನ ದಿನವನ್ನು ಅತ್ಯಾಚಾರ - ಕೊಲೆಗೀಡಾದ ಕಿರಿಯ ವೈದ್ಯಗೆ ಅರ್ಪಿಸಿದ ಸಿಎಂ ಮಮತಾ ಬ್ಯಾನರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.