Rahul Gandhi On AI: ಕಾಂಗ್ರೆಸ್ ಮುಖಂಡ ಹಾಗೂ ಸಂಸದ ರಾಹುಲ್ ಗಾಂಧಿ ಮೂರು ದಿನಗಳ ಭೇಟಿಗಾಗಿ ಅಮೆರಿಕದಲ್ಲಿದ್ದಾರೆ. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಭಾರತದ ನಿರುದ್ಯೋಗ ಸಮಸ್ಯೆ ಕುರಿತು ಪ್ರಸ್ತಾಪಿಸಿದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಉದ್ಯೋಗದ ಸಮಸ್ಯೆ ಇದೆ. ಭಾರತದಲ್ಲೂ ಈ ಸಮಸ್ಯೆ ಇದೆ. ಆದರೆ ಪ್ರಪಂಚದ ಹಲವು ದೇಶಗಳಲ್ಲಿ ಉದ್ಯೋಗ ಸಮಸ್ಯೆ ಇಲ್ಲ. ಚೀನಾ, ವಿಯೆಟ್ನಾಂನಲ್ಲಿ ಈ ಸಮಸ್ಯೆ ಇಲ್ಲ. ನೀವು 1940, 1950 ಮತ್ತು 60ರ ದಶಕಗಳಲ್ಲಿ ಅಮೆರಿಕ ಜಾಗತಿಕ ಉತ್ಪಾದನೆಯ ಕೇಂದ್ರವಾಗಿತ್ತು. ಈಗ ಅಮೆರಿಕ, ಯುರೋಪ್ ಮತ್ತು ಭಾರತ ಉತ್ಪಾದನೆಯ ಕಲ್ಪನೆಯನ್ನು ಕೈಬಿಟ್ಟಿದೆ ಮತ್ತು ಅದನ್ನು ಚೀನಾಕ್ಕೆ ಹಸ್ತಾಂತರಿಸಿದ್ದಾರೆ. ಉತ್ಪಾದನೆ ಉದ್ಯೋಗವನ್ನು ಸೃಷ್ಟಿಸುತ್ತದೆ. ಬಳಕೆಯ ಜೊತೆಗೆ ಉತ್ಪಾದನೆಯ ಬಗ್ಗೆಯೂ ನಾವು ಯೋಚಿಸಬೇಕು ಎಂದು ಸಲಹೆ ನೀಡಿದರು.
LIVE: Interaction with Students | University of Texas | Dallas, USA https://t.co/b4dofNsEle
— Rahul Gandhi (@RahulGandhi) September 8, 2024
ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಿದ ಅವರು, ಪ್ರತಿ ಬಾರಿ ಹೊಸ ತಂತ್ರಜ್ಞಾನ ಬಂದಾಗ ಅದು ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಲಾಗುತ್ತದೆ. ಕಂಪ್ಯೂಟರ್‌ಗಳು, ಎಟಿಎಂಗಳು ಸೇರಿದಂತೆ ಇನ್ನಿತರ ತಂತ್ರಜ್ಞಾನಗಳು ಅಭಿವೃದ್ಧಿಗೊಂಡಾಗ ಉದ್ಯೋಗಗಳನ್ನು ಕಸಿದುಕೊಳ್ಳುತ್ತವೆ ಎಂದೇ ಹೇಳಲಾಗಿತ್ತು. ಆದರೆ ಇವೆಲ್ಲ ವಿಭಿನ್ನ ರೀತಿಯ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇವುಗಳಲ್ಲಿ ಕೆಲವು ಸಮಸ್ಯೆಗಳಿರಬಹುದು, ಆದರೆ ಅದರ ಸರಿಯಾದ ಬಳಕೆ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ ಎಂದರು.
ನನಗೆ ವಾಜಪೇಯಿ ಅವರು ಭಾರತೀಯರಿಗೆ ಕಂಪ್ಯೂಟರ್‌ಗಳ ಅಗತ್ಯವಿಲ್ಲ ಎಂದು ಭಾಷಣ ಮಾಡಿರುವ ಕುರಿತು ನೆನಪಿದೆ. ಆದ್ರೆ ಇಂದು ಕಂಪ್ಯೂಟರ್‌ಗಳಿಂದಾಗಿ ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ನಾವು ಅದರೊಂದಿಗೆ ಭವಿಷ್ಯವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.
ನಾವು ಮಾತನಾಡುವುದಕ್ಕಿಂತ ಆಲಿಸುವುದು ಮುಖ್ಯ ಎಂದು ನನಗರಿವಾಗುತ್ತಿದೆ. ಆಲಿಸುವುದೆಂದರೆ ನಿಮ್ಮನ್ನು ಇನ್ನೊಬ್ಬ ವ್ಯಕ್ತಿಯ ಸ್ಥಾನದಲ್ಲಿ ನಿಲ್ಲಿಸುವುದು. ಒಬ್ಬ ರೈತ ನನ್ನೊಂದಿಗೆ ಮಾತನಾಡಿದರೆ ನಾನು ಅವರ ದಿನಚರಿ ಮತ್ತು ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಆ ಸಮಸ್ಯೆಯ ಆಳವನ್ನು ಆಲಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಯನ್ನು ಎತ್ತುವ ಬದಲು, ನೀವು ಪ್ರಮುಖ ವಿಷಯಗಳತ್ತ ಗಮನ ಹರಿಸಬೇಕು ಮತ್ತು ಅವುಗಳಿಗಾಗಿ ಹೋರಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: AI ವೈಶಿಷ್ಟ್ಯ, ಶಕ್ತಿಯುತ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಏಸರ್ ಲ್ಯಾಪ್‌ಟಾಪ್ - Acer AI Laptops Unveils