ETV Bharat / technology

ಹುಂಡೈ ವೆನ್ಯೂ ಅಡ್ವೆಂಚರ್‌ ಕಾರಿಗೆ ಉತ್ತಮ ಪ್ರತಿಕ್ರಿಯೆ: ಹಲವು ವೈಶಿಷ್ಟ್ಯಗಳೇ ಆಕರ್ಷಣೆ! - Hyundai Venue Adventure

Hyundai Venue Adventure Edition: ಹ್ಯುಂಡೈ ವೆನ್ಯೂ ಕಾರಿನ ಅಡ್ವೆಂಚರ್ ಆವೃತ್ತಿ ಬಿಡುಗಡೆಯಾಗಿದ್ದು, ಭಾರತದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

VENUE ADVENTURE EDITION PRICE  HYUNDAI VENUE ADVENTURE EDITION  VENUE ADVENTURE EDITION
ಹುಂಡೈ ವೆನ್ಯೂ ಅಡ್ವೆಂಚರ್ ಕಾರ್ (ANI)
author img

By ETV Bharat Karnataka Team

Published : Sep 19, 2024, 8:15 AM IST

Hyundai Venue Adventure Edition: ಭಾರತೀಯ ರಸ್ತೆಗಳಲ್ಲಿ ಆಕರ್ಷಕವಾಗಿ ವಿಹರಿಸುತ್ತಿರುವ ಹ್ಯುಂಡೈ ಕಾರಿನ ಹೊಸ ಮಾದರಿ ಬಿಡುಗಡೆ ಮಾಡಲಾಗಿದೆ. ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಎಂದು ಹೆಸರಿಸಲಾಗಿರುವ ಈ ಹೊಸ ಕಾರಿನ ಬೆಲೆ ಹಳೆಯ ಮಾದರಿಗಿಂತ ಸ್ವಲ್ಪ ಹೆಚ್ಚು. ಅಂದರೆ, 15 ಸಾವಿರ ರೂಪಾಯಿ ಹೆಚ್ಚಿಸಲಾಗಿದ್ದು, 10.15 ಲಕ್ಷ ರೂ ಎಕ್ಸ್ ಶೋ ರೂಂ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಇದು ಹೊಸ ರೇಂಜರ್ ಖಾಕಿ ಕಲರ್​ ಮತ್ತು ಹಲವು ಆಂತರಿಕ ಮತ್ತು ಬಾಹ್ಯ ವಿನ್ಯಾಸ ಬದಲಾವಣೆಗಳನ್ನು ಒಳಗೊಂಡಿದೆ. S(O)+, SX ಮತ್ತು SX(O) ಮೂರು ರೂಪಾಂತರಗಳಲ್ಲಿ ಲಭ್ಯ. ಈ ಎಲ್ಲಾ ಮಾದರಿಗಳು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಸಿಗುತ್ತಿವೆ. ಇದೇ ರೀತಿಯ ಹೊಸ ಆವೃತ್ತಿಯ ಕಾರುಗಳನ್ನು ಈ ಹಿಂದೆ ಕ್ರೆಟಾ ಮತ್ತು ಅಲ್ಕಾಜರ್ ಎಸ್‌ಯುವಿ ಮಾದರಿಗಳಲ್ಲಿ ನೀಡಲಾಗಿತ್ತು ಎಂಬುದನ್ನು ಗಮನಿಸಬೇಕು.

ಹೊಸ ವೈಶಿಷ್ಟ್ಯಗಳೇನು?: ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಕಾರು ಅಲಾಯ್​ ವ್ಹೀಲ್​ಗಳು, ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ರಬ್ ರೈಲ್ಸ್, ಸೈಡ್ ಕ್ಲಾಡಿಂಗ್, ವಿಂಗ್ ಮಿರರ್‌ಗಳು ಮತ್ತು ಶಾರ್ಕ್ ಫಿನ್ ಆಂಟೆನಾಗಳೊಂದಿಗೆ ಕಪ್ಪು ಬಣ್ಣದಲ್ಲಿ ಮೂಡಿಬಂದಿವೆ. ಮುಂಭಾಗದ ಬ್ರೇಕ್ ಕ್ಯಾಲಿಪರ್​ಗಳನ್ನು ಕೆಂಪು ಬಣ್ಣದಲ್ಲಿ ಅಳವಡಿಸಲಾಗಿದೆ. ಅಲ್ಲದೆ, ಮುಂಭಾಗದ ಫೆಂಡರ್ 'ಅಡ್ವೆಂಚರ್​ ಲಾಂಛನ' ಮತ್ತು ಕಪ್ಪು ಹುಂಡೈ ಲೋಗೋ ಹೊಂದಿದೆ.

ಹೊರಭಾಗದಲ್ಲಿರುವ ಕಪ್ಪು ಬಣ್ಣವು ಕಾರಿನ ಒಳಭಾಗಕ್ಕೆ ಒಯ್ಯುತ್ತದೆ. ಹಳೆ ಮಾದರಿಯ ಸ್ಥಳ ಸಂರಚನೆಯನ್ನು ನೆನಪಿಸಿದರೂ ಕೆಲವೆಡೆ ಬಳಸಿರುವ ಖಾಕಿ ಹಸಿರು ಬಣ್ಣ ಕಾರಿಗೆ ಹೊಸ ಲುಕ್ ನೀಡಿದೆ. ಹೊಸ 3ಡಿ ಫ್ಲೋರ್ ಮ್ಯಾಟ್​ಗಳು, ಸ್ಪೋರ್ಟಿ ಲುಕ್ ಪೆಡಲ್​ಗಳು ವಿಶೇಷ. ಎರಡು ಕ್ಯಾಮೆರಾಗಳನ್ನು ಹೊಂದಿರುವ ಡ್ಯಾಶ್‌ಕ್ಯಾಮ್ ಅನ್ನು ಡ್ಯಾಶ್‌ಬೋರ್ಡ್‌ಗೆ ಜೋಡಿಸಲಾಗಿದೆ.

ವೆನ್ಯೂ ಅಡ್ವೆಂಚರ್ ಪವರ್‌ಟ್ರೇನ್ ಆಯ್ಕೆ: ವೆನ್ಯೂ ಅಡ್ವೆಂಚರ್ ಆವೃತ್ತಿಯು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟಕ್ಕಿದೆ. ಇವುಗಳು 1.2-ಲೀಟರ್ ನಾಲ್ಕು-ಸಿಲಿಂಡರ್ ನ್ಯಾಚುರಲ್​ ಆ್ಯಸ್ಪಿರೆಟೆಡ್​ ಪೆಟ್ರೋಲ್ ಎಂಜಿನ್ 83 hp ಮತ್ತು 1.0-ಲೀಟರ್ ಮೂರು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 120 hp. 1.2-ಲೀಟರ್ ಎಂಜಿನ್ S(O)+ ಮತ್ತು SX ಮಾದರಿಗಳಲ್ಲಿವೆ.

ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ SX(O) ಮಾದರಿ ಮಾತ್ರ ಲಭ್ಯವಿದೆ. ಇದನ್ನು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಡೀಸೆಲ್ ಮಾದರಿಗಳಲ್ಲಿ ಈ ಆವೃತ್ತಿಯು ಲಭ್ಯವಿಲ್ಲ. ವಿಶೇಷವಾದ ರೇಂಜರ್ ಖಾಕಿ ಬಣ್ಣವನ್ನು ಒಳಗೊಂಡಂತೆ ಹೊಸ ವೆನ್ಯೂ ಮೂರು ಹೆಚ್ಚುವರಿ ಬಣ್ಣದ ಆಯ್ಕೆಗಳನ್ನು ಹೊಂದಿದೆ. ಅದರಂತೆ, ಅಪಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಎಂಬ ಮೂರು ಬಣ್ಣಗಳನ್ನು ಈ ಆವೃತ್ತಿಯೊಂದಿಗೆ ಕಾರು ಹೊರಬಂದಿದೆ. ಇವೆಲ್ಲವೂ ಬ್ಲ್ಯಾಕ್​ ರೂಫ್​ ಡ್ಯುಯಲ್ ಟೋನ್ ಕಲರ್​ಗಳಲ್ಲಿ ಗ್ರಾಹಕರಿಗೆ ದೊರೆಯುತ್ತಿದೆ.

ಇದನ್ನೂ ಓದಿ: ಟಾಟಾ ಪಂಚ್ ಅಪ್‌ಗ್ರೇಡ್ ಮಾಡೆಲ್ ಮಾರುಕಟ್ಟೆಗೆ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳ ವಿವರ - TATA Punch Upgrade Model

ETV Bharat Logo

Copyright © 2024 Ushodaya Enterprises Pvt. Ltd., All Rights Reserved.