ETV Bharat / technology

ಎಐ ತಂತ್ರಜ್ಞಾನದ Envy x360-14 ಲ್ಯಾಪ್​ಟಾಪ್​ ಬಿಡುಗಡೆ ಮಾಡಿದ ಎಚ್​ಪಿ - HP LAPTOPS - HP LAPTOPS

ಎಚ್​ಪಿ ತನ್ನ ಹೊಸ ಶ್ರೇಣಿಯ ಎಐ ತಂತ್ರಜ್ಞಾನದ ಲ್ಯಾಪ್​ಟಾಪ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

HP launches laptops with industry-leading AI tools for creators in India

author img

By ETV Bharat Karnataka Team

Published : Apr 3, 2024, 12:38 PM IST

ನವದೆಹಲಿ : ಪಿಸಿ ಮತ್ತು ಪ್ರಿಂಟರ್​ಗಳನ್ನು ತಯಾರಿಸುವ ಪ್ರಖ್ಯಾತ ಕಂಪನಿ ಎಚ್​ಪಿ ಬುಧವಾರ ಭಾರತದಲ್ಲಿ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ವೈಶಿಷ್ಟ್ಯಗಳನ್ನು ಹೊಂದಿರುವ ಎನ್ವಿ ಎಕ್ಸ್ 360 14 ಲ್ಯಾಪ್ ಟಾಪ್​​ಗಳನ್ನು (Envy x360 14) ಬಿಡುಗಡೆ ಮಾಡಿದೆ. ವಿಶೇಷವಾಗಿ ಕಂಟೆಂಟ್​ ಕ್ರಿಯೇಟರ್​ಗಳ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ಈ ಲ್ಯಾಪ್​ಟಾಪ್​ಗಳನ್ನು ತಯಾರಿಸಲಾಗಿದೆ.

ಈ ಹೊಸ ಲ್ಯಾಪ್​ಟಾಪ್​ಗಳ ಕೀಬೋರ್ಡ್​ನಲ್ಲಿ ಮೈಕ್ರೋಸಾಫ್ಟ್ ಕೋಪೈಲಟ್ ಬಟನ್​ ನೀಡಲಾಗಿದೆ. ಇದು ಅಸಿಸ್ಟೆಡ್ ಸರ್ಚ್, ಕಂಟೆಂಟ್​ ತಯಾರಿಕೆ ಸೇರಿದಂತೆ ಇನ್ನೂ ಹಲವಾರು ಕೆಲಸಗಳಿಗಾಗಿ ಎಐ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುತ್ತದೆ.

ಎಚ್​ಪಿ ಎಕ್ಸ್ 360 14 ಲ್ಯಾಪ್​ಟಾಪ್ ಮೆಟಿಯೋರ್ ಸಿಲ್ವರ್ ಮತ್ತು ಅಟ್ಮಾಸ್ಫಿಯರ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. 1.4 ಕೆಜಿ ತೂಕದ ಈ ಸಾಧನವು 14 ಇಂಚಿನ ಒಎಲ್ಇಡಿ ಟಚ್ ಡಿಸ್ ಪ್ಲೇ ಒಳಗೊಂಡಿದೆ ಮತ್ತು ಅಡೋಬ್ ಫೋಟೋಶಾಪ್​ನಂತಹ ಅಪ್ಲಿಕೇಶನ್​ಗಳೊಂದಿಗೆ ಉನ್ನತ ಮಟ್ಟದ ಕಂಟೆಂಟ್​ ಕ್ರಿಯೇಟ್​ ಮಾಡಲು ಅನುಕೂಲವಾಗುವಂತೆ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್​ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

"ಈ ಲ್ಯಾಪ್​ಟಾಪ್​ಗಳು ನ್ಯೂರಲ್ ಪ್ರೊಸೆಸಿಂಗ್ ಯುನಿಟ್ (ಎನ್​ಪಿಯು) ಹೊಂದಿದ್ದು, ಇದು ನಿರಂತರ ಸೃಜನಶೀಲತೆ ಮತ್ತು ಉತ್ಪಾದಕತೆಗಾಗಿ ಬ್ಯಾಟರಿ ಆಪ್ಟಿಮೈಸೇಶನ್​ಗೆ ಶೇಕಡಾ 65 ರಷ್ಟು ಸಹಾಯ ಮಾಡುತ್ತದೆ" ಎಂದು ಕಂಪನಿ ಹೇಳಿದೆ.

ಎಚ್​ಪಿ ಎಕ್ಸ್ 360 14 ಲ್ಯಾಪ್​ಟಾಪ್​ಗಳು ಉತ್ತಮ ವೀಡಿಯೊ ವೈಶಿಷ್ಟ್ಯಗಳಿಗಾಗಿ ವಿಂಡೋಸ್ ಸ್ಟುಡಿಯೋ ಎಫೆಕ್ಟ್​ಗಳನ್ನು ಹೊಂದಿವೆ. ಸ್ಕ್ರೀನ್ ಮೇಲೆ ಚಲಿಸುತ್ತಿದ್ದಂತೆ ಚಿತ್ರವನ್ನು ಸ್ವಯಂಚಾಲಿತವಾಗಿ ಜೂಮ್ ಮಾಡುವುದು ಮತ್ತು ಕ್ರಾಪ್ ಮಾಡುವಂತಹ ಎಐ ಆಧಾರಿತ ವೈಶಿಷ್ಟ್ಯಗಳನ್ನು ಇದು ನೀಡುತ್ತದೆ.

ಈ ಸಾಧನವು 14 ಗಂಟೆಗಳಿಗಿಂತ ಹೆಚ್ಚು ಬ್ಯಾಟರಿ ಬಾಳಿಕೆ, ವೈ-ಫೈ 7 ನೊಂದಿಗೆ ವೇಗದ ಸಂಪರ್ಕ ಹೊಂದಿದ್ದು, ಶಕ್ತಿಯುತ ಕಾರ್ಯಕ್ಷಮತೆಗಾಗಿ ಸುಧಾರಿತ ಥರ್ಮಲ್ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ. ಎನ್ವಿ ಎಕ್ಸ್ 360 14 ಲ್ಯಾಪ್ ಟಾಪ್​​ಗಳು 99,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿವೆ.

ಹ್ಯೂಲೆಟ್ ಪ್ಯಾಕರ್ಡ್ (ಎಚ್​ಪಿ) ಇದೊಂದು ದೊಡ್ಡ ಸಮೂಹ ಕಂಪನಿಯಾಗಿದ್ದು, ಹಲವಾರು ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಉತ್ಪಾದಿಸುತ್ತದೆ. ಮುಖ್ಯವಾಗಿ ಇದು ಲ್ಯಾಪ್​ಟಾಪ್ ಮತ್ತು ಪ್ರಿಂಟರ್​ ತಯಾರಿಕೆಗೆ ಹೆಸರಾಗಿದೆ. ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಇದನ್ನೂ ಓದಿ : ಫೆಬ್ರವರಿಯಲ್ಲಿ ಫೇಸ್​ಬುಕ್​ & ಇನ್​ಸ್ಟಾದಲ್ಲಿನ 18 ಮಿಲಿಯನ್ ಪೋಸ್ಟ್​ ತೆಗೆದು ಹಾಕಿದ ಮೆಟಾ - Meta

ETV Bharat Logo

Copyright © 2024 Ushodaya Enterprises Pvt. Ltd., All Rights Reserved.