ETV Bharat / technology

ವಿದ್ಯುತ್ ಬಿಲ್‌ ಹೊರೆ ಹೆಚ್ಚುತ್ತಿದೆಯೇ? ಇಲ್ಲಿರುವ ಟಿಪ್ಸ್‌ ಪಾಲಿಸಿ, ಅರ್ಧದಷ್ಟು ಹಣ ಉಳಿಸಿ! - How To Reduce Electricity Bill - HOW TO REDUCE ELECTRICITY BILL

How To Reduce Electricity Bill: ವಿದ್ಯುತ್ ಬಿಲ್ ಹೊರೆ ಹೆಚ್ಚುತ್ತಿದೆಯೇ?. ಪ್ರತಿ ತಿಂಗಳು ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿದೆಯೇ?. ಈ ಸಮಸ್ಯೆಯಿಂದ ಹೊರಬರುವುದು ಹೇಗೆಂದು ಆಲೋಚಿಸುತ್ತಿದ್ದೀರಾ?. ಹಾಗಾದ್ರೆ ಈ ಸಲಹೆಗಳನ್ನು ಪಾಲಿಸಿದರೆ ಅರ್ಧದಷ್ಟು ಹಣ ಉಳಿಯುವುದು ಪಕ್ಕಾ.!

REDUCE ELECTRICITY BILL  SAVE ELECTRICITY BILL  ELECTRICITY BILL  ELECTRICITY BILL PAYMENTS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Tech Team

Published : Sep 6, 2024, 1:13 PM IST

How To Reduce Electricity Bill: ಇಂದಿನ ದಿನಮಾನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಒಂದು ಸಮಸ್ಯೆಯೇ ಅಧಿಕ ವಿದ್ಯುತ್ ಬಿಲ್. ಪ್ರತಿ ತಿಂಗಳು ವಿದ್ಯುತ್ ಬಿಲ್ ಹೆಚ್ಚುತ್ತಲೇ ಹೋಗುತ್ತಿದೆ. ಇದರಿಂದ ಜನಸಾಮಾನ್ಯರಂತೂ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕೆಲವು ಮುಂಜಾಗ್ರತಾ ಕ್ರಮಗಳು ಹೀಗಿವೆ.

ಎಲ್ಇಡಿ ಬಲ್ಬ್​ಗಳ ಬಳಕೆ: ಸಾಮಾನ್ಯ ಬಲ್ಬ್​ಗಳಿಂದ ನಾವು ಹೆಚ್ಚು ವಿದ್ಯುತ್ ಬಳಸುತ್ತೇವೆ. ಇದರಿಂದ ವಿದ್ಯುತ್ ಬಿಲ್ ಕೂಡ ಅಧಿಕ. ಅದಕ್ಕಾಗಿಯೇ ಪ್ರತಿ ಮನೆಯಲ್ಲೂ ಎಲ್ಇಡಿ ಬಲ್ಬ್​ಗಳನ್ನು ಬಳಸುವುದು ಉತ್ತಮ. ಅವುಗಳಿಂದ ಕಡಿಮೆ ವಿದ್ಯುತ್​ ಬಳಕೆ ಸಾಧ್ಯವಿದೆ. ಇವುಗಳನ್ನು ಬಳಸಿದರೆ ಬಿಲ್ ಕೂಡ ತಗ್ಗುತ್ತದೆ. ಇದಲ್ಲದೆ, ಅವು ದೀರ್ಘಕಾಲದವರೆಗೂ ಬಾಳಿಕೆ ಬರುತ್ತವೆ.

ಅನ್‌ಪ್ಲಗ್ ಮಾಡುವುದು ಉತ್ತಮ​: ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿದ ನಂತರ ಅನೇಕರು ಅನ್‌ಪ್ಲಗ್ ಮಾಡದೆ ಬಿಡುತ್ತಾರೆ. ಸ್ವಿಚ್ ಆಫ್ ಮಾಡಿದ್ರೂ ಸಹ ನಾವು ಅನ್​ಪ್ಲಗ್​ ಮಾಡದೇ ಇದ್ದರೆ ವಿದ್ಯುತ್​ ಪ್ರವಾಹ ಅದರೊಳಗೆ ಹರಿಯುತ್ತಿರುತ್ತದೆ. ಅದಕ್ಕಾಗಿಯೇ ಸೆಲ್ ಫೋನ್ ಚಾರ್ಜರ್‌ಗಳು, ಟಿವಿಗಳು, ಕಂಪ್ಯೂಟರ್‌ಗಳು, ವೈ-ಫೈ ರೂಟರ್‌ಗಳು, ಐರನ್ ಬಾಕ್ಸ್‌ಗಳು, ವಾಷಿಂಗ್ ಮಷಿನ್‌ಗಳು ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿದ ತಕ್ಷಣ ಅನ್‌ಪ್ಲಗ್ ಮಾಡುವುದು ಒಳಿತು. ಇದರಿಂದ ಕರೆಂಟ್​ ಬಿಲ್​ ಕಡಿಮೆ ಬರುವ ಸಾಧ್ಯತೆ ಹೆಚ್ಚು.

ಎಸಿ ನಿರ್ವಹಣೆ: ಹೀಟಿಂಗ್​, ವೆಂಟಿಲೇಷನ್​, ಏರ್​ ಕಂಡಿಷನ್​ ನಿರ್ವಹಣೆಯಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇಬೇಕು. ಏರ್ ಫಿಲ್ಟರ್ ಅನ್ನು ನಿಯಮಿತವಾಗಿ ಬದಲಾಯಿಸಬೇಕು. ವರ್ಷಕ್ಕೊಮ್ಮೆಯಾದರೂ ಇವುಗಳನ್ನು ಮೆಕ್ಯಾನಿಕ್​ನಿಂದ ಸರ್ವಿಸ್​ ಮಾಡಿಸಬೇಕು. ಎಸಿಯನ್ನು ಸರಿಯಾಗಿ ನಿರ್ವಹಿಸಿದರೆ, ಅದು ಕಡಿಮೆ ವಿದ್ಯುತ್ ಬಳಸುತ್ತದೆ. ಇದು ದೀರ್ಘ ಬಾಳಿಕೆಯನ್ನೂ ನೀಡುತ್ತದೆ. ಅಲ್ಲದೆ, ತೀರಾ ಅಗತ್ಯ ಇರುವ ಸಂದರ್ಭಗಳಲ್ಲಿ ಮಾತ್ರ ಎಸಿ ಬಳಸುವುದು ಉತ್ತಮ.

ಪವರ್ ಸ್ಟ್ರಿಪ್‌ಗಳ ಬಳಕೆ: ಟಿವಿ, ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಪವರ್ ಸ್ಟ್ರಿಪ್‌ಗಳಿಗೆ ಪ್ಲಗ್ ಮಾಡಬೇಕು. ಅಲ್ಲದೆ ಅಂತಹ ವಸ್ತುಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇಡಬಾರದು. ಕಂಪ್ಯೂಟರ್ ಬಳಸಿದ ತಕ್ಷಣ ಅದನ್ನು ಆಫ್ ಮಾಡಿ. ಇಲ್ಲದಿದ್ದರೆ ಅವುಗಳು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿದ್ದರೆ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಇದರಿಂದ ಬಿಲ್ ಕೂಡ ಹೆಚ್ಚಾಗುತ್ತದೆ.

ವಾಷಿಂಗ್ ಮಷಿನ್ ಬಳಕೆ: ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್ ಬಳಕೆ ಕಡಿಮೆ ಮಾಡಬೇಕು. ತುಂಬಾ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಮತ್ತು ಸಮಯವಿಲ್ಲದಿದ್ದಾಗ ಮಾತ್ರ ಅವುಗಳನ್ನು ಬಳಸುವುದು ಉತ್ತಮ. ಹೀಗೆ ಮಾಡುವುದರಿಂದ ವಿದ್ಯುತ್ ಬಿಲ್ ಹಾಗೂ ನೀರಿನ ಉಳಿತಾಯ ಮಾಡಬಹುದು.

ಬಟ್ಟೆಗಳನ್ನು ಒಣಗಿಸುವುದು: ತೊಳೆದ ಬಟ್ಟೆಗಳನ್ನು ಒಣಗಿಸಲು ಯಾವಾಗಲೂ ನೈಸರ್ಗಿಕ ವಿಧಾನಗಳನ್ನು ಬಳಸಿ. ಗಾಳಿ ಮತ್ತು ಸೂರ್ಯನ ಬೆಳಕಿನಲ್ಲಿ ಬಟ್ಟೆಗಳನ್ನು ಒಣಗಿಸುವುದು ಉತ್ತಮ. ಮೆಷಿನ್​ಗಳ ಮೂಲಕ ಬಟ್ಟೆ ಒಣಗಿಸುವುದು ಸೂಕ್ತವಲ್ಲ. ಇದರಿಂದ ವಿದ್ಯುತ್​ ಬಿಲ್​ ಹೊರೆಯಾಗುತ್ತದೆ.

ಸ್ಟಾರ್ ರೇಟಿಂಗ್‌: ಟಿವಿ, ಫ್ರಿಜ್, ಎಸಿಯಂತಹ ಎಲೆಕ್ಟ್ರಿಕಲ್ ಗ್ಯಾಜೆಟ್‌ಗಳನ್ನು ಖರೀದಿಸುವಾಗ, ಹೆಚ್ಚಿನ ಸ್ಟಾರ್ ರೇಟಿಂಗ್‌ಗಳನ್ನು ಪಡೆಯಿರಿ. ಇದರಿಂದ ವಿದ್ಯುತ್ ಬಳಕೆ ಕಡಿಮೆಯಾಗುವುದಲ್ಲದೆ ಬಿಲ್ ಕೂಡ ಕಡಿಮೆಯಾಗುತ್ತದೆ.

ಇವುಗಳ ಜೊತೆಗೆ ಹಗಲಿನಲ್ಲಿ ಸೂರ್ಯನ ಬೆಳಕನ್ನು ಬಳಸುವ ಮೂಲಕ ಲೈಟ್ ಮತ್ತು ಫ್ಯಾನ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಮತ್ತು ಕಾರ್ಯದ ನಿಮಿತ್ತ ಹೊರಗೆ ಹೋಗುವಾಗ ಲೈಟ್, ಫ್ಯಾನ್, ಟಿವಿ ಆಫ್ ಮಾಡಿ. ಈ ಮೂಲಕ ನೀವು ವಿದ್ಯುತ್ ಉಳಿಸಬಹುದು ಮತ್ತು ಬಿಲ್ ಇಳಿಸಬಹುದು.

ಇದನ್ನೂ ಓದಿ: ಪೆಟ್ರೋಲ್​ ಅಲ್ಲ, ಫ್ಲೆಕ್ಸ್-ಫ್ಯೂಯಲ್​ ಪಲ್ಸರ್ ಪರಿಚಯಿಸಿದ ಬಜಾಜ್! ಏನಿದರ ವಿಶೇಷತೆ? - Bajaj Pulsar Bike Flex Fuel

ETV Bharat Logo

Copyright © 2025 Ushodaya Enterprises Pvt. Ltd., All Rights Reserved.