ETV Bharat / technology

ಮಹತ್ವದ ಕ್ಷಿಪಣಿ ಪರೀಕ್ಷೆಗೂ ಮುನ್ನ ಒಡಿಶಾದಲ್ಲಿ 10,000 ಕ್ಕೂ ಹೆಚ್ಚು ಜನರ ಸ್ಥಳಾಂತರ: ಏನಿದು ಯೋಜನೆ? - Govt shifts over 10K people - GOVT SHIFTS OVER 10K PEOPLE

ಡಿಆರ್‌ಡಿಒ ಕ್ಷಿಪಣಿ ಪರೀಕ್ಷೆಗೆ ಮುಂದಾಗಿದ್ದು, ಈ ಕ್ಷಿಪಣಿ ಪರೀಕ್ಷೆ ವೇಳೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಸುಮಾರು 10 ಸಾವಿರ ಮಂದಿ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿದೆ. ಇದಕ್ಕೆ ಸರ್ಕಾರ ಪರಿಹಾರವನ್ನು ಕೂಡಾ ನೀಡಿದೆ.

govt-shifts-over-10000-people-in-odisha-ahead-of-missile-test
ಮಹತ್ವದ ಕ್ಷಿಪಣಿ ಪರೀಕ್ಷೆಗೂ ಮುನ್ನ ಒಡಿಶಾದಲ್ಲಿ 10,000 ಕ್ಕೂ ಹೆಚ್ಚು ಜನರ ಸ್ಥಳಾಂತರ: ಏನಿದು ಯೋಜನೆ (PIB)
author img

By PTI

Published : Jul 23, 2024, 10:01 PM IST

ಬಾಲಸೋರ್ (ಒಡಿಶಾ): DRDO ಬುಧವಾರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಿದೆ. ಇದಕ್ಕೂ ಮುಂಚಿತವಾಗಿ ಒಡಿಶಾದ ಬಾಲಸೋರ್ ಜಿಲ್ಲಾಡಳಿತವು 10 ಹಳ್ಳಿಗಳಿಂದ 10,000 ಕ್ಕೂ ಹೆಚ್ಚು ಜನರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಆರ್‌ಡಿಒ ಕ್ಷಿಪಣಿ ಪರೀಕ್ಷೆಗೆ ಅಗತ್ಯವಾದ ಶ್ರೇಣಿಯ ಸಿದ್ಧತೆಯನ್ನು ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ (ಐಟಿಆರ್) ಪೂರ್ಣಗೊಳಿಸಿದೆ ಎಂದು ರಕ್ಷಣಾ ಮೂಲಗಳು ಮಂಗಳವಾರ ತಿಳಿಸಿವೆ. ಐಟಿಆರ್‌ನ ಲಾಂಚ್ ಪ್ಯಾಡ್ ಸಂಖ್ಯೆ 3 ರಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಏತನ್ಮಧ್ಯೆ, ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಗೂ ಮುನ್ನ ಲಾಂಚ್ ಪ್ಯಾಡ್‌ನ 3.5 ಕಿಮೀ ವ್ಯಾಪ್ತಿಯಲ್ಲಿರುವ 10 ಗ್ರಾಮಗಳಿಗೆ ಸೇರಿದ ಸುಮಾರು 10,581 ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಬಾಲಸೋರ್ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದು ಕಂದಾಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಯಾವುದೇ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮವಾಗಿ ಸಂತ್ರಸ್ತ ಜನರಿಗೆ ಸೂಕ್ತ ಪರಿಹಾರದೊಂದಿಗೆ ಈ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಲಯದಲ್ಲಿ ಬರುವ ನಿವಾಸಿಗಳನ್ನು ಸಮೀಪದ ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಸುಗಮವಾಗಿ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಆಶಿಸ್ ಠಾಕರೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಾಗರಿಕಾ ನಾಥ್ ಮಾರ್ಗದರ್ಶನಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಯಿತು ಎಂದು ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾಡಳಿತವು ಈ ಗ್ರಾಮಗಳ ಜನರನ್ನು ಬುಧವಾರ ಮುಂಜಾನೆ 4 ಗಂಟೆಯೊಳಗೆ ಮನೆಯಿಂದ ಹೊರಹೋಗುವಂತೆ ಮತ್ತು ಉಡಾವಣೆ ಮುಗಿದ ನಂತರ ಅಧಿಕೃತ ಘೋಷಣೆಯಾಗುವವರೆಗೂ ಶಿಬಿರದಲ್ಲಿ ಇರುವಂತೆ ಎಚ್ಚರಿಕೆ ಕೂಡಾ ನೀಡಿದೆ. ಬಾಲಸೋರ್ ಜಿಲ್ಲಾಡಳಿತವು ಹತ್ತಿರದ ಶಾಲೆಗಳು, ವಿವಿಧೋದ್ದೇಶ ಚಂಡಮಾರುತ ಪುನರ್ವಸತಿ ಕೇಂದ್ರಗಳು ಮತ್ತು ತಾತ್ಕಾಲಿಕ ಟೆಂಟ್ ಶೆಲ್ಟರ್‌ಗಳಲ್ಲಿ ತಂಗಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿದೆ ಎಂದು ಜಿಲ್ಲಾ ಕಂದಾಯ ಅಧಿಕಾರಿ ತಿಳಿಸಿದ್ದಾರೆ.

ಜನರಿಗೆ ಸಹಾಯ ಮಾಡಲು ಪ್ರತಿ ಶಿಬಿರದಲ್ಲಿ ಕನಿಷ್ಠ 10 ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಮತ್ತು ಶಿಬಿರಗಳಲ್ಲಿ ಜನರಿಗೆ ಸಹಾಯ ಮಾಡಲು 22 ವಿಭಾಗಗಳನ್ನು (ಒಂದು ವಿಭಾಗವು ಒಂಬತ್ತು ಸಿಬ್ಬಂದಿಯನ್ನು ಒಳಗೊಂಡಿರುತ್ತದೆ) ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳಾಂತರಗೊಂಡವರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಆರೋಗ್ಯ ಶಿಬಿರದ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇದೇ ವೇಳೆ ತಾತ್ಕಾಲಿಕ ಸ್ಥಳಾಂತರಕ್ಕೆ ಗ್ರಾಮಸ್ಥರು ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ.

ಪರಿಹಾರ: ಪ್ರಸ್ತುತ, ಒಂದು ದಿನದ ತಾತ್ಕಾಲಿಕ ಸ್ಥಳಾಂತರಕ್ಕೆ ಪ್ರತಿ ವಯಸ್ಕರಿಗೆ ರೂ 300 ಪರಿಹಾರವನ್ನು ನೀಡಲಾಗುತ್ತದೆ. ಪ್ರತಿ ಅಪ್ರಾಪ್ತರಿಗೆ ಆಹಾರಕ್ಕಾಗಿ ರೂ 75 ಜೊತೆಗೆ 150 ರೂ ಪರಿಹಾರ ಧನವಾಗಿ ನೀಡಲಾಗುತ್ತದೆ.

ಇದನ್ನು ಓದಿ: ಭೂಮಿಯ ತಿರುಗುವಿಕೆ ವೇಗ ತಗ್ಗಿದೆಯೇ?: ಭವಿಷ್ಯದಲ್ಲಿ ದಿನದ ಅವಧಿ 25 ಗಂಟೆ ಆಗಲಿದೆಯಾ!? - earth rotation speed change

ETV Bharat Logo

Copyright © 2024 Ushodaya Enterprises Pvt. Ltd., All Rights Reserved.