ETV Bharat / technology

ಸೈಬರ್ ವಂಚನೆಯಲ್ಲಿ ಭಾಗಿಯಾದ 1.4 ಲಕ್ಷ ಮೊಬೈಲ್​ ಸಂಖ್ಯೆಗಳನ್ನು ನಿರ್ಬಂಧಿಸಿದ ಸರ್ಕಾರ

ಸೈಬರ್ ಅಪರಾಧ ಅಥವಾ ಹಣಕಾಸು ವಂಚನೆಯಲ್ಲಿ ಭಾಗಿಯಾದ 1.4 ಲಕ್ಷ ಮೊಬೈಲ್​ ನಂಬರ್​ಗಳನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.

Govt blocks about 1.4L mobile handsets linked to financial frauds

author img

By ETV Bharat Karnataka Team

Published : Feb 11, 2024, 4:55 PM IST

ನವದೆಹಲಿ: ಸೈಬರ್ ಅಪರಾಧ ಅಥವಾ ಆರ್ಥಿಕ ವಂಚನೆಗಳಿಗಾಗಿ ಬಳಸಲ್ಪಟ್ಟ ಸುಮಾರು 1.4 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಣಕಾಸು ಕ್ಷೇತ್ರದಲ್ಲಿ ಸೈಬರ್ ಭದ್ರತೆ ಕುರಿತು ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.

ಬಲ್ಕ್​ ಎಸ್ಎಂಎಸ್​ಗಳನ್ನು ಕಳುಹಿಸುವ 35 ಲಕ್ಷ ಪ್ರಮುಖ ಘಟಕಗಳನ್ನು (Principal Entities -PEs) ಇದಕ್ಕಾಗಿ ದೂರಸಂಪರ್ಕ ಇಲಾಖೆ (ಡಿಒಟಿ) ವಿಶ್ಲೇಷಿಸಿದೆ. ಈ ಪೈಕಿ ದುರುದ್ದೇಶಪೂರಿತ ಎಸ್ಎಂಎಸ್​ಗಳನ್ನು ಕಳುಹಿಸುವಲ್ಲಿ ಭಾಗಿಯಾಗಿರುವ 19,776 ಪ್ರಮುಖ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು 30,700 ಎಸ್ಎಂಎಸ್ ಹೆಡರ್​ಗಳು ಮತ್ತು 1,95,766 ಎಸ್ಎಂಎಸ್ ಟೆಂಪ್ಲೇಟ್​ಗಳ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸೈಬರ್ ವಂಚನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ, 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ, ಸುಮಾರು 3.08 ಲಕ್ಷ ಸಿಮ್​ ಹಾಗೂ ಸುಮಾರು 50,000 ಐಎಂಇಐ ನಂಬರ್​ಗಳನ್ನು ನಿರ್ಬಂಧಿಸಲಾಗಿದೆ ಮತ್ತು ಏಪ್ರಿಲ್ 2023 ರಿಂದ 592 ನಕಲಿ ಲಿಂಕ್​ಗಳು/ ಎಪಿಕೆ, 2,194 ಯುಆರ್​ಎಲ್​ಗಳನ್ನು ನಿರ್ಬಂಧಿಸಲಾಗಿದೆ.

ಎಪಿಐ ಏಕೀಕರಣದ ಮೂಲಕ ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಅಂಡ್ ಮ್ಯಾನೇಜ್​ಮೆಂಟ್​ ಸಿಸ್ಟಮ್ (CFCFRMS) ಪ್ಲಾಟ್​ಫಾರ್ಮ್​ಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಸಂಯೋಜಿಸುವ ವಿಚಾರಗಳನ್ನು ಕೂಡ ಸಭೆಯಲ್ಲಿ ಚರ್ಚಿಸಲಾಯಿತು.

ಪೊಲೀಸರು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವೆ ಪರಿಣಾಮಕಾರಿ ಸಹಯೋಗವನ್ನು ಸಕ್ರಿಯಗೊಳಿಸುವ ವೇದಿಕೆಯೊಂದನ್ನು ಕೇಂದ್ರೀಕರಿಸಲು ಸಿಎಫ್​​ಸಿಎಫ್ಆರ್​ಎಂಎಸ್ ಪ್ಲಾಟ್​ಫಾರ್ಮ್ ಅನ್ನು ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್​​ಸಿಆರ್​ಪಿ) ಯೊಂದಿಗೆ ಸಂಯೋಜಿಸುವುದು, ಮೋಸದ ಚಟುವಟಿಕೆಗಳ ನೈಜ ಸಮಯದ ಮೇಲ್ವಿಚಾರಣೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸರ್ಕಾರ ತಿಳಿಸಿದೆ.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು 10-ಅಂಕಿಯ ಮೊಬೈಲ್​ ಸಂಖ್ಯೆಗಳ ಬಳಕೆಯನ್ನು ಹಂತ ಹಂತವಾಗಿ ನಿಲ್ಲಿಸಬೇಕು ಮತ್ತು ಟ್ರಾಯ್ ಸೂಚಿಸಿದಂತೆ ವಾಣಿಜ್ಯ ಅಥವಾ ಪ್ರಚಾರ ಚಟುವಟಿಕೆಗಳಿಗೆ '140xxx' ನಂತಹ ನಿರ್ದಿಷ್ಟ ಸಂಖ್ಯಾ ಸರಣಿಯನ್ನು ಬಳಸಲಾರಂಭಿಸಬೇಕೆಂಬ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ನಕಲಿ ದಾಖಲೆಗಳನ್ನು ನೀಡಿ ತೆಗೆದುಕೊಂಡ ಮೊಬೈಲ್ ಸಂಪರ್ಕಗಳನ್ನು ಪತ್ತೆಹಚ್ಚಲು ಡಿಒಟಿ ಎಐ-ಯಂತ್ರ ಕಲಿಕೆ ಆಧಾರಿತ ಎಎಸ್​ಟಿಆರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ : ಚಂದ್ರನತ್ತ ಮತ್ತೆ ನಾಸಾ ಚಿತ್ತ: ವ್ಯಾಲೆಂಟೈನ್ಸ್​ ದಿನ ನಭಕ್ಕೆ ಚಿಮ್ಮಲಿದೆ ಐಎಂ-1 ಲ್ಯಾಂಡರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.