Google Unveils Android XR: ಟೆಕ್ ದೈತ್ಯಗಳಾದ ಸ್ಯಾಮ್‌ಸಂಗ್ ಮತ್ತು ಗೂಗಲ್ ಹೊಸ ಆಪರೇಟಿಂಗ್ ಸಿಸ್ಟಮ್ವೊಂದನ್ನು ಪರಿಚಯಿಸಿದೆ. ಈ ಟೆಕ್ ದೈತ್ಯರು ಒಟ್ಟಾಗಿ ಸೇರಿ ಎಂಆರ್, ವಿಆರ್ ಹೆಡ್‌ಸೆಟ್ ತಯಾರಿಸುತ್ತಿದ್ದಾರೆ. ಅವುಗಳು ಆಪಲ್‌ನ ವಿಷನ್ ಪ್ರೊ ಮತ್ತು ಮೆಟಾದ ಕ್ವೆಸ್ಟ್ ಸೀರಿಸ್ಗಳ ಜೊತೆ ಪೈಪೋಟಿ ನಡೆಸಲಿವೆ. ಪ್ರಾಜೆಕ್ಟ್ ಮೂಹನ್ ಎಂಬ ಕೋಡ್ ಹೆಸರಿನ ಸಾಧನವನ್ನು ಸ್ಯಾಮ್‌ಸಂಗ್ ಅಭಿವೃದ್ಧಿಪಡಿಸಿದೆ ಮತ್ತು ಗೂಗಲ್ ಅಭಿವೃದ್ಧಿಪಡಿಸಿದ ಹೊಸ ಆಂಡ್ರಾಯ್ಡ್ ಎಕ್ಸ್‌ಆರ್ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತವೆ.
ಆಂಡ್ರಾಯ್ಡ್ ಎಕ್ಸ್ ಆರ್ ಎಂದರೇನು?: ಆಂಡ್ರಾಯ್ಡ್ 'ಎಕ್ಸ್‌ಆರ್'ನ ವಿಸ್ತೃತ ರೂಪ ಎಕ್ಸ್ಟೆನ್ಡಡ್ ರಿಯಾಲಿಟಿ. ಆಂಡ್ರಾಯ್ಡ್ ಎಕ್ಸ್‌ಆರ್ ಎಂಬುದು ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿರುವ MR, VR ಹೆಡ್‌ಸೆಟ್‌ಗಳು ಮತ್ತು ಗ್ಲಾಸ್‌ಗಳ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು. ಇವುಗಳು ಗೂಗಲ್ ಮತ್ತು ಸ್ಯಾಮ್‌ಸಂಗ್ ಅಭಿವೃದ್ಧಿ ಪಡಿಸಿದ ಹೊಸ ಆಪರೇಟಿಂಗ್ ಸಿಸ್ಟಮ್ನಲ್ಲಿ ರನ್ ಆಗುತ್ತವೆ.
ಇದು ಡೆವಲಪರ್‌ಗಳಿಗೆ ಪೂರ್ವವೀಕ್ಷಣೆಯಾಗಿದೆ. ARCore, Android Studio, Jetpack Compose, Unity, ಮತ್ತು OpenXR ನಂತಹ ಸಾಧನಗಳನ್ನು ಸಪೋರ್ಟ್ ಮಾಡುವ ಮೂಲಕ, ಡೆವಲಪರ್‌ಗಳು ಮುಂಬರುವ Android XR ಸಾಧನಗಳಿಗೆ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ರಚಿಸಬಹುದು ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.
ವರ್ಚುಯಲ್ ಸ್ಕ್ರೀನ್ನಲ್ಲಿ ಬ್ರೌಸ್ ಮಾಡಬಹುದು: ಈ ಹೊಸ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಎಕ್ಸ್‌ಆರ್ ಮೂಲಕ ವರ್ಚುಯಲ್ ಸ್ಕ್ರೀನ್ನಲ್ಲಿ YouTube ಮತ್ತು Google TV ಅನ್ನು ನೀವು ಬ್ರೌಸ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ಗೂಗಲ್ ಫೋಟೋಗಳೊಂದಿಗೆ 3Dಯಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಗೂಗಲ್ ಮ್ಯಾಪ್ಸ್ ಅನ್ನು ಬಳಸಿಕೊಂಡು ಹೊಸ ಸ್ಥಳಗಳನ್ನು ಅನ್ವೇಷಿಸಬಹುದು. ಕ್ರೋಮ್‌ನಲ್ಲಿ ಬಹುಕಾರ್ಯಕವು ಮಲ್ಟಿ ವರ್ಚುಯಲ್ ಸ್ಕ್ರೀನ್‌ಗಳೊಂದಿಗೆ ಸುಲಭವಾಗಿರುತ್ತದೆ. ಸರ್ಕಲ್ ಟು ಸರ್ಕಲ್ ನಿಮಗೆ ಮಾಹಿತಿಯನ್ನು ತ್ವರಿತವಾಗಿ ಹುಡುಕಲು ಸಹಾಯ ಮಾಡುತ್ತದೆ ಎಂದು ಗೂಗಲ್ ಹೇಳಿದೆ.
ಇದೆಲ್ಲದರ ಹೊರತಾಗಿ ಗೂಗಲ್‌ನ ಎಐ ಜೆಮಿನಿ ತನ್ನ ಬಳಕೆದಾರರಿಗೆ ಅವರ ದೈನಂದಿನ ಕಾರ್ಯಗಳನ್ನು ಯೋಜಿಸಲು, ಸಂಶೋಧಿಸಲು ಮತ್ತು ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ.
ಪ್ರಾಜೆಕ್ ಮೂಹನ್ ಎಂದರೇನು?: ಮೂಹನ್ ಎಂದರೆ ಕೊರಿಯನ್ ಭಾಷೆಯಲ್ಲಿ ಅನಂತ ಎಂದರ್ಥ. ಪ್ರಾಜೆಕ್ಟ್ ಮೂಹನ್ ಎಂಬುದು ಸ್ಯಾಮ್‌ಸಂಗ್ ಅಭಿವೃದ್ಧಿಪಡಿಸಿದ MR, VR ಹೆಡ್‌ಸೆಟ್‌ನ ಕೋಡ್ ಹೆಸರು. ಈ ಸಾಧನವು ಭೌತಿಕ ಮತ್ತು ಡಿಜಿಟಲ್ ಪ್ರಪಂಚಗಳೆರಡನ್ನೂ ಸಂಯೋಜಿಸುವ ಮೂಲಕ ಬಳಕೆದಾರರ ವಾಸ್ತವತೆಯನ್ನು ಹೆಚ್ಚಿಸುತ್ತದೆ ಅಥವಾ ಬದಲಾಯಿಸುತ್ತದೆ.
ಪ್ರಾಜೆಕ್ಟ್ ಮೂಹನ್ ವಿಆರ್ (ವರ್ಚುವಲ್ ರಿಯಾಲಿಟಿ), ಎಆರ್ (ಆಗ್ಮೆಂಟೆಡ್ ರಿಯಾಲಿಟಿ), ಎಂಆರ್ (ಮಿಕ್ಸ್ಡ್ ರಿಯಾಲಿಟಿ) ಮತ್ತು ಭವಿಷ್ಯದಲ್ಲಿ ಅಭಿವೃದ್ಧಿಪಡಿಸಲಾಗುವ ಇತರ ರೀತಿಯ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ. ಈ ಹೆಡ್‌ಸೆಟ್ ಆಂಡ್ರಾಯ್ ಎಕ್ಸ್ಆರ್ನಲ್ಲಿ ರನ್ ಆಗುತ್ತದೆ. ಅಷ್ಟೇ ಅಲ್ಲ ಗ್ಯಾಲೆಕ್ಸಿ ಇಕೋ ಸಿಸ್ಟಮ್ ಸಹ ಸಪೋರ್ಟ್ ಮಾಡುತ್ತದೆ.
ಇತರ ಬೆಳವಣಿಗೆ: ಗೂಗಲ್ ಎಕ್ಸ್‌ಆರ್ ತಂತ್ರಜ್ಞಾನದಲ್ಲಿ ಮ್ಯಾಜಿಕ್ ಲೀಪ್‌ನೊಂದಿಗೆ ಸಹಯೋಗವನ್ನು ಮುಂದುವರಿಸುತ್ತದೆ ಮತ್ತು XR ಸಾಧನಗಳ ಅಭಿವೃದ್ಧಿಗಾಗಿ Qualcomm, Linksys, Sony ಮತ್ತು XREAL ನಂತಹ ಇತರ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. Android XR ನ ಅಭಿವೃದ್ಧಿಗೆ ಕೊಡುಗೆ ನೀಡಲು ಪ್ರಪಂಚದಾದ್ಯಂತದ ಡೆವಲಪರ್‌ಗಳು, ಸಾಧನ ತಯಾರಕರು ಮತ್ತು ರಚನೆಕಾರರನ್ನು ಗೂಗಲ್ ಆಹ್ವಾನಿಸುತ್ತಿದೆ.
ಓದಿ: ಗೇಮ್ ಅವಾರ್ಡ್ಸ್ 2024 ಪ್ರಕಟ: ನಂಬರ್ ಒನ್ ಗೇಮ್ ಆಗಿ ಹೊರ ಹೊಮ್ಮಿದ ಸೋನಿಯ ಆಸ್ಟ್ರೋ ಬಾಟ್