ETV Bharat / business

ಮಾರುಕಟ್ಟೆ ಬಿದ್ದಾಗ ಷೇರು ಖರೀದಿ ಪ್ಲಾನ್​ ವರ್ಕೌಟ್​: ಚೇತರಿಕೆ ಹಾದಿ ಹಿಡಿದ ದಲಾಲ್​ ಸ್ಟ್ರೀಟ್​; ಏನಿದು - BUY ON DIPS STRATEGY

ಕಳೆದ ತಿಂಗಳು ತೀವ್ರ ಕುಸಿತಕ್ಕೆ ಕಾರಣವಾಗಿದ್ದ ಷೇರುಮಾರುಕಟ್ಟೆ ಇದೀಗ ಚೇತರಿಕೆ ಹಾದಿಯತ್ತ ಸಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ Buy on dips strategy ಕೆಲಸ ಮಾಡುತ್ತಿದ್ದಂತೆ ಕಾಣುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Buy on dips strategy working well in Indian stock market amid sharp rebound
ಮಾರುಕಟ್ಟೆ ಬಿದ್ದಾದ ಷೇರು ಖರೀದಿ ಪ್ಲಾನ್​ ವರ್ಕೌಟ್​: ಚೇತರಿಕೆ ಹಾದಿ ಹಿಡಿದ ದಲಾಲ್​ ಸ್ಟ್ರೀಟ್​ (IANS)
author img

By ETV Bharat Karnataka Team

Published : Dec 14, 2024, 10:25 AM IST

ಮುಂಬೈ; ಶುಕ್ರವಾರದ ಮುಂಬೈ ಷೇರು ಮಾರುಕಟ್ಟೆಗಳು ಆರಂಭದಲ್ಲಿ ನೀರಸವಾಗಿ ವ್ಯವಹಾರ ಶುರು ಮಾಡಿದರೂ ಅಂತ್ಯದಲ್ಲಿ ಉತ್ತಮ ಏರಿಕೆ ದಾಖಲಿಸುವ ಮೂಲಕ ಅಂತ್ಯಗೊಂಡಿತು. ಕುಸಿತದ ಬಳಿಕ ಸೆನ್ಸೆಕ್ಸ್​ 2,000 ಪಾಯಿಂಟ್​ಗಳಷ್ಟು ಬಲವರ್ದನೆ ಕಂಡಿದೆ, ಮಾರುಕಟ್ಟೆ ಬಿದ್ದಾಗ ಖರೀದಿಸಬೇಕು ಎಂಬ ಫಾರ್ಮುಲಾ ಇಲ್ಲಿ ಕೆಲಸ ಮಾಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಹಣದುಬ್ಬರ ಕಡಿಮೆ ಆಗುವ ಲಕ್ಷಣಗಳನ್ನು ತೋರಿಸಿರುವ ಹಿನ್ನೆಲೆ ಹಾಗೂ ಆರ್​ಬಿಐ ನಿರೀಕ್ಷಿಸಿದ್ದಕ್ಕಿಂತ ತುಸು ಕಡಿಮೆ ದಾಖಲಾಗಿದ್ದರಿಂದ ಆರ್ಥಿಕತೆ ಚೇತರಿಕೆ ಲಕ್ಷಣಗಳನ್ನು ತೋರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ತರಕಾರಿ ಬೆಲೆಗಳಲ್ಲಿನ ಕಾಲೋಚಿತ ಬೆಲೆ ಕಡಿತದ ಕಾರಣದಿಂದಾಗಿ ಆಹಾರದ ಬೆಲೆಗಳಲ್ಲಿ ಮತ್ತಷ್ಟು ತಗ್ಗುವ ಸಾಧ್ಯತೆಗಳಿವೆ. ಇದು ಫೆಬ್ರವರಿಯಲ್ಲಿ ವಿತ್ತೀಯ ನೀತಿಯಲ್ಲಿ ಸಕಾರಾತ್ಮಕ ಅಂಶಗಳನ್ನು ಹೆಚ್ಚಿಸಬಹುದು ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಈ ವಾರದ ಕೊನೆಯ ವಹಿವಾಟಿನ ಅವಧಿಯಲ್ಲಿ ನಿಫ್ಟಿ ದಿನದ ಕನಿಷ್ಠ ಮಟ್ಟದಿಂದ 2 ಶೇಕದಷ್ಟು ಏರಿಕೆ ಕಂಡಿದೆ. ಹಿಂದಿನ ವಹಿವಾಟಿನಲ್ಲಿ ಗಮನಾರ್ಹ ಕುಸಿತದಿಂದ ಚೇತರಿಕೆ ಕಂಡಿತು. ಎಫ್‌ಎಂಸಿಜಿ, ಐಟಿ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿನ ಖರೀದಿಯು ಷೇರುಪೇಟೆಗಳಿಗೆ ಚೇತರಿಕೆ ನೀಡುವಂತೆ ಮಾಡಿತು.

ಭಾರತೀಯ ಷೇರುಗಳಲ್ಲಿನ ಇಂಟ್ರಾಡೇ ಮಾರಾಟವು ಏಷ್ಯನ್ ಮಾರುಕಟ್ಟೆಗಳಾದ್ಯಂತ ಕುಸಿತವನ್ನು ಕಂಡಿತು. ಚೀನಾದ ಉತ್ತೇಜಕ ಯೋಜನೆಗಳಲ್ಲಿನ ಸ್ಪಷ್ಟತೆಯ ಕೊರತೆಯಿಂದಾಗಿ ಲೋಹದ ಷೇರುಗಳು ಕುಸಿಯುವಂತೆ ಮಾಡಿತು. ನಿಫ್ಟಿ ಮೆಟಲ್ ಸೂಚ್ಯಂಕ ಶೇಕಡಾ 0.7 ರಷ್ಟು ನಷ್ಟ ಅನುಭವಿಸಿದೆ. ಶುಕ್ರವಾರ, ಸೆನ್ಸೆಕ್ಸ್ 843.16 ಪಾಯಿಂಟ್ ಅಥವಾ 1.04 ಶೇಕಡಾ ಏರಿಕೆಯಾಗಿ 82,133.12 ಕ್ಕೆ ತಲುಪಿದೆ. BSE ಬೆಂಚ್‌ಮಾರ್ಕ್ 80,082 ರ ಕನಿಷ್ಠದಿಂದ ಚೇತರಿಸಿಕೊಂಡ ನಂತರ 82,213 ರ ಇಂಟ್ರಾ-ಡೇ ಗರಿಷ್ಠವನ್ನು ತಲುಪಿದೆ.

ಲಾರ್ಜ್‌ಕ್ಯಾಪ್‌ಗಳಿಗೆ ಹೋಲಿಸಿದರೆ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸ್ಟಾಕ್‌ಗಳು ನಿನ್ನೆಯ ವಹಿವಾಟಿನಲ್ಲೂ ಕಳಪೆ ಪ್ರದರ್ಶನ ತೋರಿದವು. ಇನ್ನು ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕ 30 ಪಾಯಿಂಟ್‌ಗಳು ಅಥವಾ ಶೇಕಡಾ 0.05 ರಷ್ಟು ಕುಸಿದು 58,991 ಕ್ಕೆ ಕೊನೆಗೊಂಡವು. ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕವು 59 ಪಾಯಿಂಟ್‌ಗಳ ಇಳಿಕೆ ದಾಖಲಿಸಿತು.

ಮಾರುಕಟ್ಟೆಯಲ್ಲಿ ಪ್ರಸ್ತುತ ಎಫ್‌ಐಐ ಮಾರಾಟದ ಪ್ರಮಾಣವು ಕಡಿಮೆಯಾಗಿದೆ ಎಂದು ನಂಬಲಾಗಿದೆ. ನಿಫ್ಟಿ ಐಟಿ ಸೂಚ್ಯಂಕವು ಹೊಸ ಎತ್ತರವನ್ನು ತಲುಪಿದೆ. ಅಮೆರಿಕದ ಹಣದುಬ್ಬರ ದತ್ತಾಂಶ, ಪೇಟೆಯ ನಿರೀಕ್ಷೆಗಳನ್ನು ಪೂರೈಸಿದ ಬಳಿಕ ಮಾರುಕಟ್ಟೆ ಶೇ 3ರಷ್ಟು ಏರಿಕೆ ದಾಖಲಿಸಿದೆ.

ಇದನ್ನು ಓದಿ: ಇಪಿಎಫ್​ಒ ಸದಸ್ಯರಿಗೆ ಶುಭ ಸುದ್ದಿ - ಮುಂದಿನ ವರ್ಷದಿಂದ ಕ್ಲೈಮ್​ ಮಾಡಿದ ಹಣ ಎಟಿಎಂನಿಂದ ವಿತ್​​ಡ್ರಾಗೆ ಅವಕಾಶ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.