ETV Bharat / technology

ಎಐನಲ್ಲಿ 10,000 ಭಾರತೀಯ ಸ್ಟಾರ್ಟ್​ಅಪ್​ ಬಲವರ್ಧನೆಗೆ ಹೊಸ ಸಾಧನ ಪರಿಚಯಿಸಿದ ಗೂಗಲ್​ - MeitY Startup Hub

ಭಾರತದ ಡೆವಲಪರ್​ಗಳು ಗೂಗಲ್​ನ ಶಕ್ತಿಶಾಲಿ ಎಐ ಮಾದರಿಗಳ ಲಭ್ಯತೆ ಪಡೆಯಲಿದ್ದಾರೆ ಎಂದು ಗೂಗಲ್​ ಉಪ ನಿರ್ದೇಶಕ ಅಂಬರೀಶ್​ ಕೆಂಗೇ ತಿಳಿಸಿದ್ದಾರೆ.

Google said it is working with MeitY Startup Hub to train 10000 startups in AI
ಗೂಗಲ್​ ಕನೆಕ್ಟ್​ ಕಾರ್ಯಕ್ರಮ (ಈಟಿವಿ ಭಾರತ್​​)
author img

By IANS

Published : Jul 18, 2024, 3:23 PM IST

ಬೆಂಗಳೂರು: ಭಾರತದ 10 ಸಾವಿರ ಸ್ಟಾರ್ಟ್​ಅಪ್​ಗಳನ್ನು ಕೃತಕ ಬುದ್ಧಿಮತ್ತೆ (ಎಐ)ನಲ್ಲಿ ಬಲಗೊಳಿಸಲು ಟೆಕ್​ ದೈತ್ಯ ಗೂಗಲ್​ ಮುಂದಾಗಿದೆ. ಇದಕ್ಕಾಗಿ ದೇಶದ ಡೆವಲಪರ್​ಗಳಿಗಾಗಿ ಹೊಸ ಭಾಷಾ ಸಾಧನವನ್ನು ಅಭಿವೃದ್ಧಿ ಮಾಡಲಿದ್ದು, ಇದು ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸ್ಟಾರ್ಟ್​ ಹಬ್​ನೊಂದಿಗೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

ತನ್ನ ‘I/O Connect’ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆ, ಭಾರತೀಯ ಡೆವಲಪರ್‌ಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಸಶಕ್ತಗೊಳಿಸಲು ಕಂಪನಿಯು ಹಲವಾರು ಪರಿಕರಗಳು, ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳನ್ನು ಬಿಡುಗಡೆ ಮಾಡಿದೆ.

ಈ ಕುರಿತು ಮಾತನಾಡಿದ ಸಂಸ್ಥೆ, ಈ ಮೂಲಕ ಭಾರತದ ಡೆವಲಪರ್​ಗಳು ಗೂಗಲ್​ನ ಶಕ್ತಿಶಾಲಿ ಎಐ ಮಾದರಿಗಳ ಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ 2 ಮಿಲಿಯನ್​ ಟೋಕನ್​ ಕಾಂಟೆಕ್ಸ್ಟ್​​ ವಿಂಡೋದಲ್ಲಿ ಜೆಮಿನಿ 1.5 ಪ್ರೊ ಮತ್ತು ಜೆಮ್ಮಾ 2 ಮತ್ತು ಮುಂದಿನ ಪೀಳಿಗೆಯ ಮುಕ್ತ ಮಾದರಿಗೆ ಪ್ರವೇಶ ಪಡೆಯಲಿದ್ದಾರೆ

ಭಾರತದ ಹೂಡಿಕೆದಾರರನ್ನು ಎಐ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ಬಲಗೊಳಿಸುತ್ತಿದ್ದೇವೆ. ಭಾರತದ ವಿಶಿಷ್ಟತೆಗೆ ಮಾತ್ರ ಪರಿಹಾರ ರಚಿಸದೇ, ಜಾಗತಿಕವಾಗಿ ಎಐ ಭವಿಷ್ಯ ರೂಪಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಗೂಗಲ್​ ಉಪ ನಿರ್ದೇಶಕ ಅಂಬರೀಶ್​ ಕೆಂಗೇ ತಿಳಿಸಿದರು.

ಈ ಅವಕಾಶವೂ ಬಹು ಮಾದರಿಯೊಂದಿಗಿದೆ. ಮೊಬೈಲ್​, ಬಹುಭಾಷಾ ಎಐ ಅದ್ಬುತವಾಗಿದ್ದು, ಭಾರತದ ಎಐ ಪ್ರಯಾಣದಲ್ಲಿ ಭಾಗಿಯಾಗಲು ನಾವು ಉತ್ಸಾಹಿಗಳಾಗಿದ್ದೇವೆ ಎಂದಿದ್ದಾರೆ.

ಜೆಮಿನಿ ಜೊತೆಗೆ ವೇಗದ ನಿರ್ಮಾಣದ ಮಾರ್ಗವೆಂದರೆ ಡೆವಲಪರ್ ಪ್ಲಾಟ್‌ಫಾರ್ಮ್ ಗೂಗಲ್ ಎಐ ಸ್ಟುಡಿಯೋ ಆಗಿದೆ. ಹಾಗೇ ಗೂಗಲ್ ಎಐ ಸ್ಟುಡಿಯೊದಲ್ಲಿ ಅತಿದೊಡ್ಡ ಡೆವಲಪರ್ ತಂಡಗಳನ್ನು ಭಾರತದಲ್ಲಿ ಇಂದು ನಾವು ಹೊಂದಿದ್ದೇವೆ ಎಂದರು.

ಗೂಗಲ್​ ಡ್ರಾಪ್​ಮೈಡ್​ ಭಾರತದ ತಂಡ ಪ್ರಾಜೆಕ್ಟ್​ ವಾಣಿ ಜೊತೆಗೆ ವಿಸ್ತರಿಸಿದೆ. ಇದನ್ನು ಐಐಎಸ್ಸಿ ಜೊತೆ ಸಹಭಾಗಿತ್ವ ನಡೆಸಿದೆ. ಇದು 80 ಜಿಲ್ಲೆಗಳಲ್ಲಿ 80 ಸಾವಿರ ಭಾಷಿಕರಿಂದ 58 ಭಾಷೆ 18 ಸಾವಿರ ಗಂಟೆಗಳ ಸ್ಪೀಚ್​ ಡೇಟಾವನ್ನು ಡೆವಲಪರ್​ಗಳಿಗೆ ಒದಗಿಸಿದೆ ಎಂದು ಅವರು ಅಂಬರೀಶ್​ ಕೆಂಗೇ ತಿಳಿಸಿದ್ದಾರೆ.

ತಂಡ IndicGenBench ಅನ್ನು ಪರಿಚಯಿಸಿದ್ದು, ಇದು ಸ್ಥಳೀಯ ಭಾಷೆಗಳನ್ನು ಎಲ್​ಎಲ್ಎಮ್​ ಪೀಳಿಗೆಯ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುತ್ತದೆ. ಇದೇ ವೇಳೆ ಸಂಸ್ಥೆ ಗೂಗಲ್​ವಾಲೆಟ್​ ಅನ್ನು ಮತ್ತಷ್ಟು ಸರಳೀಕರಣಗೊಳಿಸುವುದಾಗಿ ತಿಳಿಸಿದೆ. ಜೊತೆಗೆ ಒನ್​ಡಿಸಿ ಜೊತೆ ಸಹಭಾಗಿತ್ವ ನಡೆಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುಲಭವಾಗಿ ಟ್ರಾಫಿಕ್ ಜಾಮ್​ನಿಂದ ತಪ್ಪಿಸಿಕೊಳ್ಳಬೇಕೇ?: Google Mapsನಲ್ಲಿನ ಎರಡು ಹೊಸ ಫೀಚರ್ಸ್ ಈಗಲೇ ಟ್ರೈ ಮಾಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.