ETV Bharat / technology

ಸುಲಭವಾಗಿ ಟ್ರಾಫಿಕ್ ಜಾಮ್​ನಿಂದ ತಪ್ಪಿಸಿಕೊಳ್ಳಬೇಕೇ?: Google Mapsನಲ್ಲಿನ ಎರಡು ಹೊಸ ಫೀಚರ್ಸ್ ಈಗಲೇ ಟ್ರೈ ಮಾಡಿ - Google Maps Features - GOOGLE MAPS FEATURES

Google Maps Latest Features For IPhone & Android Users: ನೀವು ಐಫೋನ್ ಬಳಕೆದಾರರಾಗಿದ್ದೀರಾ? ಹಾಗಾದ್ರೆ ನಿಮಗಾಗಿ ಈ ಗುಡ್​ ನ್ಯೂಸ್​. Google Mapsನಿಂದ ಐಫೋನ್ ಬಳಕೆದಾರರಿಗೆ ಸ್ಪೀಡೋಮೀಟರ್ ಮತ್ತು ಸ್ಪೀಡ್ ಲಿಮಿಟ್ಸ್ ಎಂಬ ಎರಡು ಹೊಸ ವೈಶಿಷ್ಟ್ಯಗಳನ್ನು ಲಭ್ಯವಿದ್ದು, ಅವುಗಳನ್ನು ಸಕ್ರಿಯಗೊಳಿಸಿ. ಸುಲಭವಾಗಿ ಟ್ರಾಫಿಕ್ ಜಾಮ್​ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.

GOOGLE MAPS  TRAFFIC JAM  IPHONE USERS  ANDROID USERS
ನೀವು ಸುಲಭವಾಗಿ ಟ್ರಾಫಿಕ್ ಜಾಮ್​ನಿಂದ ತಪ್ಪಿಸಿಕೊಳ್ಳಬೇಕೇ? Google Mapsನಲ್ಲಿ ಲಭ್ಯವಿರುವ ಎರಡು ಹೊಸ ಫೀಚರ್ಸ್​ನ್ನು ಈಗಲೇ ಟ್ರೈ ಮಾಡಿ.. (ETV Bharat)
author img

By ETV Bharat Karnataka Team

Published : Jul 15, 2024, 10:50 AM IST

Google Maps Latest Features For IPhone & Android Users: ನಮ್ಮಲ್ಲಿ ಹೆಚ್ಚಿನವರು ಕೆಲವು ಹಂತದಲ್ಲಿ ವೇಗದ ಮಿತಿಯನ್ನು ಮೀರುತ್ತಾರೆ. ಜೊತೆಗೆ ಟ್ರಾಫಿಕ್ ಜಾಮ್​ನಲ್ಲಿ ಹೋಗಿ ಸಿಲುಕಿಕೊಳ್ಳುತ್ತಾರೆ. ವಾಸ್ತವವಾಗಿ ಇದು ತುಂಬಾ ತ್ರಾಸದಾಯಕ ಸಮಸ್ಯೆಯಾಗಿದೆ. ಅದಕ್ಕಾಗಿಯೇ Google Maps ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಚಾಲಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸ್ಪೀಡೋಮೀಟರ್ ಮತ್ತು ವೇಗ ಮಿತಿಗಳ ಎರಡು ವೈಶಿಷ್ಟ್ಯಗಳನ್ನು ಲಭ್ಯಗೊಳಿಸಿದೆ. ಈ ಎರಡು ಫೀಚರ್ಸ್​ ಅನ್ನು ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಮೇ 2019 ರಿಂದ ಲಭ್ಯವಿದೆ. ಆದರೆ, ಇತ್ತೀಚೆಗೆ, ಈ ಎರಡು ವೈಶಿಷ್ಟ್ಯಗಳನ್ನು ಐಫೋನ್ ಬಳಕೆದಾರರಿಗೂ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಗೂಗಲ್ ಹೇಳಿದೆ.

ಈ ಫೀಚರ್ಸ್​ ಹೇಗೆ ಕಾರ್ಯನಿರ್ವಹಿಸುತ್ತವೆ?: Google Mapsನಲ್ಲಿರುವ ಸ್ಪೀಡೋಮೀಟರ್ ವೈಶಿಷ್ಟ್ಯವು ಚಾಲಕರು ತಾವು ಎಷ್ಟು ವೇಗವಾಗಿ ಪ್ರಯಾಣಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಉಪಯುಕ್ತವಾಗಿದೆ. ಇದನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು ಎಂದು ಗೂಗಲ್ ಸ್ಪಷ್ಟಪಡಿಸಿದೆ. ಕೆಲವು ಸಂದರ್ಭಗಳಲ್ಲಿ ವಾಹನದ ನಿಜವಾದ ವೇಗ ಮತ್ತು ಸ್ಪೀಡೋಮೀಟರ್ ತೋರಿಸುವ ರೀಡಿಂಗ್ ನಡುವೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಜವಾದ ವೇಗವನ್ನು ನಿರ್ಧರಿಸಲು, ವಾಹನದ ಸ್ಪೀಡೋಮೀಟರ್ ಬಳಸಲು ಸೂಚಿಸಲಾಗುತ್ತದೆ.

ನೀವು ಮಿತಿಯನ್ನು ಮೀರಿ ವೇಗದಲ್ಲಿ ಸಂಚಾರ ಮಾಡಿದರೆ, ಸ್ಪೀಡ್ ಲಿಮಿಟ್ ವೈಶಿಷ್ಟ್ಯವು ನಿಮಗೆ ಎಚ್ಚರಿಕೆ ನೀಡುತ್ತದೆ. ನಿರ್ದಿಷ್ಟ ವೇಗದ ಮಿತಿಯನ್ನು ದಾಟಿದರೆ, ಅದು ವೇಗ ಕುರಿತು ಅಲರ್ಟ್​ ಮಾಡುತ್ತದೆ. ಹೀಗಾಗಿ ಸ್ಪೀಡೋಮೀಟರ್ ಮತ್ತು ವೇಗ ಮಿತಿಗಳ ವೈಶಿಷ್ಟ್ಯಗಳು ಚಾಲಕರಿಗೆ ನೈಜ ಸಮಯದ ವೇಗದ ಮಿತಿ ಮಾಹಿತಿಯನ್ನು ಒದಗಿಸುತ್ತದೆ. ಹಾಗಾಗಿ ಚಾಲಕರು ನಿಗದಿತ ವೇಗವನ್ನು ಮೀರದಂತೆ ಎಚ್ಚರಿಕೆ ವಹಿಸಬಹುದು.

ವಿವಿಧೆಡೆ ಸಂಚಾರ ನಿಯಮಗಳಲ್ಲಿ ವ್ಯತ್ಯಾಸ: ದೇಶದ ವಿವಿಧ ಭಾಗಗಳಲ್ಲಿ ಸಂಚಾರ ನಿಯಮಗಳು ಬದಲಾಗುತ್ತವೆ. ಹೆದ್ದಾರಿಗಳಲ್ಲಿ ನೀವು ಸ್ವಲ್ಪ ವೇಗವಾಗಿ ಓಡಿಸಬಹುದು. ಆದರೆ, ನೀವು ಸ್ಥಳೀಯ ರಸ್ತೆಗಳಲ್ಲಿ ನಿಧಾನಗೊಳಿಸಬೇಕು. ಆದರೆ, ಕೆಲವೊಮ್ಮೆ ಚಾಲಕರು ಹೆದ್ದಾರಿಯಿಂದ ಸ್ಥಳೀಯ ರಸ್ತೆಗಳಿಗೆ ಬರುವಾಗ ವೇಗದ ಮಿತಿಯನ್ನು ಗಮನಿಸುವುದಿಲ್ಲ. ಅಂತಹ ಸಮಯದಲ್ಲಿ, ಅನಗತ್ಯವಾಗಿ ದಂಡ ಪಾವತಿಸಬೇಕಾಗುತ್ತದೆ. ಇದನ್ನು ತಪ್ಪಿಸಲು Google Mapsನಲ್ಲಿ ಸ್ಪೀಡೋಮೀಟರ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದು ಉತ್ತಮ.

ಪ್ರಾದೇಶಿಕ ನಿಯಮಗಳ ಸಮಸ್ಯೆ: ನಿರ್ಮಾಣ ಪ್ರದೇಶಗಳಲ್ಲಿ ತಾತ್ಕಾಲಿಕ ವೇಗದ ಮಿತಿಗಳನ್ನು ವಿಧಿಸಲಾಗಿದೆ. ವಿಶೇಷವಾಗಿ ಈ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಚಾಲಕರ ಸುರಕ್ಷತೆಗಾಗಿ ಇಂತಹ ತಾತ್ಕಾಲಿಕ ವೇಗದ ಮಿತಿಗಳನ್ನು ಅಳವಡಿಸಲಾಗಿದೆ. ಆದಾಗ್ಯೂ, ಚಾಲಕರು ರಾತ್ರಿಯಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಇಂತಹ ವಿಷಯಗಳನ್ನು ಗಮನಿಸುವುದಿಲ್ಲ. ಅದಕ್ಕಾಗಿಯೇ Google Maps ಸ್ಪೀಡೋಮೀಟರ್ ವೈಶಿಷ್ಟ್ಯ ಲಭ್ಯವಾಗುವಂತೆ ಮಾಡಿದೆ. ಈ ಸ್ಪೀಡೋ ಮೀಟರ್ ಚಾಲಕರಿಗೆ ನ್ಯಾವಿಗೇಷನ್ ಸಹಾಯವನ್ನು ಒದಗಿಸುತ್ತದೆ. ಅಂದರೆ, ನೈಜ ಸಮಯದಲ್ಲಿ ಆ ಪ್ರದೇಶದಲ್ಲಿ ವಾಹನವನ್ನು ಎಷ್ಟು ವೇಗವಾಗಿ ಓಡಿಸಬೇಕು ಎಂಬುದನ್ನು ಇದು ಚಾಲಕರಿಗೆ ತಿಳಿಸುತ್ತದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಆದರೆ ಇದನ್ನು ಈಗ ಐಫೋನ್ ಬಳಕೆದಾರರೂ ಬಳಸಬಹುದು.

Google Mapsನಲ್ಲಿ ಸ್ಪೀಡೋಮೀಟರ್ ವೈಶಿಷ್ಟ್ಯ ಸಕ್ರಿಯಗೊಳಿಸುವುದು ಹೇಗೆ?:

  • ಮೊದಲು, ನಿಮ್ಮ iPhone ಅಥವಾ Android ಫೋನ್‌ನಲ್ಲಿ Google Maps ಅಪ್ಲಿಕೇಶನ್ ತೆರೆಯಿರಿ.
  • ನಿಮ್ಮ ಪ್ರೊಫೈಲ್ ಚಿತ್ರ ಅಥವಾ ಆರಂಭಿಕ ಖಾತೆಯ ಸರ್ಕಲ್​ ಮೇಲೆ ಕ್ಲಿಕ್ ಮಾಡಿ.
  • ಡ್ರಾಪ್‌ಡೌನ್ ಮೆನುವಿನಲ್ಲಿ ನೀವು ಸೆಟ್ಟಿಂಗ್‌ಗಳ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ನೀವು ನ್ಯಾವಿಗೇಷನ್ ಸೆಟ್ಟಿಂಗ್ಸ್ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
  • ತಕ್ಷಣವೇ ನೀವು ಡ್ರೈವಿಂಗ್ ಆಯ್ಕೆಗಳನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿದರೆ, ನೀವು ವಿವಿಧ ಡ್ರೈವಿಂಗ್ ವೈಶಿಷ್ಟ್ಯಗಳನ್ನು ಕಾಣಬಹುದು.
  • ಈ ಡ್ರೈವಿಂಗ್ ಆಯ್ಕೆಗಳಲ್ಲಿ ಸ್ಪೀಡೋಮೀಟರ್ ಮತ್ತು ಸ್ಪೀಡ್ ಲಿಮಿಟ್ಸ್ ವೈಶಿಷ್ಟ್ಯಗಳು ಕಂಡುಬರುತ್ತವೆ. ನೀವು ಅವುಗಳನ್ನು ಆನ್ ಮಾಡಬೇಕು. ಇದು ತುಂಬಾ ಸರಳವಾಗಿದೆ!
  • ಇಂದಿನಿಂದ, ನೀವು ಪ್ರತಿ ಬಾರಿ Google Mapsನ್ನು ತೆರೆದಾಗ, ನಿಮ್ಮ GPS ವೇಗವನ್ನು ಪ್ರದರ್ಶಿಸುತ್ತದೆ. ಇದಲ್ಲದೇ, ನೀವು ವೇಗದ ಮಿತಿಯನ್ನು ಮೀರಿ ಚಾಲನೆ ಮಾಡುತ್ತಿದ್ದರೆ, ನೀವು ಎಚ್ಚರಿಕೆಯನ್ನು ಸಹ ಪಡೆಯುತ್ತೀರಿ. ಸೀಮಿತ ವೇಗದಲ್ಲಿ ವಾಹನವನ್ನು ಓಡಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

ಹಾಗಾದರೆ ಸ್ಪೀಡೋಮೀಟರ್ ಹೇಗೆ ಕೆಲಸ ಮಾಡುತ್ತದೆ?: Google Mapsನಲ್ಲಿರುವ ಸ್ಪೀಡೋಮೀಟರ್ ವೈಶಿಷ್ಟ್ಯವು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇದು ಮಾರ್ಗಗಳ ವೀಕ್ಷಣೆ ಚಿತ್ರಣ (ರಸ್ತೆ ಚಿತ್ರಗಳು) ಸೇರಿದಂತೆ ಮೂರನೇ ವ್ಯಕ್ತಿಯ ಚಿತ್ರಗಳನ್ನು ಗಮನಿಸುತ್ತದೆ ಮತ್ತು ಆ ಪ್ರದೇಶದಲ್ಲಿನ ವೇಗದ ಮಿತಿಯನ್ನು ಚಾಲಕರಿಗೆ ತಿಳಿಸಲು GPS ಡೇಟಾವನ್ನು ವಿಶ್ಲೇಷಿಸುತ್ತದೆ.ಅಷ್ಟೇ ಅಲ್ಲ ವಾಹನ ಹೋಗಬೇಕಾದ ಪ್ರದೇಶದಲ್ಲಿ ಟ್ರಾಫಿಕ್ ಹೇಗಿದೆ? ಅಲ್ಲಿಗೆ ಎಷ್ಟು ವೇಗವಾಗಿ ಪ್ರಯಾಣಿಸಬೇಕು ಎಂಬುದನ್ನು ಗೂಗಲ್​ ಮ್ಯಾಪ್​ ನಮಗೆ ಮಾರ್ಗರ್ಶನ ಮಾಡುತ್ತದೆ.

ಇದನ್ನೂ ಓದಿ: 15 ಸಾವಿರದೊಳಗೆ ಅತ್ಯುತ್ತಮ ಫೀಚರ್​ನ ಬೆಸ್ಟ್​ ಮೊಬೈಲ್​ಗೆ ಹುಡುಕಾಡುತ್ತಿದ್ದೀರಾ?: ಇಲ್ಲಿದೆ ನೋಡಿ 10 ಬೆಸ್ಟ್​ ಆಯ್ಕೆಗಳು - BEST MOBILE PHONES UNDER 15000

ETV Bharat Logo

Copyright © 2025 Ushodaya Enterprises Pvt. Ltd., All Rights Reserved.