ETV Bharat / technology

ನೋಟ್‌ಬುಕ್‌LMನಲ್ಲಿ ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್: ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನ - Google NotebookLM Feature

author img

By ANI

Published : Sep 13, 2024, 11:34 AM IST

Google Notebook LM Features: ಗೂಗಲ್ NotebookLM ಹೊರತರಲು ಪ್ರಾರಂಭಿಸಿದೆ. (ಪ್ರಾಜೆಕ್ಟ್ ಟೈಲ್‌ವಿಂಡ್‌ನ ಹೊಸ ಹೆಸರು). ಈ ಹೊಸ ಉಪಕರಣ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ. ಪ್ರಸ್ತುತ ಇದು ಅಮೆರಿಕದಲ್ಲಿನ ಸಣ್ಣ ಗುಂಪಿನ ಬಳಕೆದಾರರಿಗೆ ಮಾತ್ರ ಲಭ್ಯ.

AI DRIVEN PODCAST FEATURE  PODCAST FEATURE IN NOTEBOOKLM  GOOGLE NEWS  GOOGLE LAUNCHES NEW FEATURE
ಗೂಗಲ್ NotebookLM (ANI)

Google Notebook LM Features: Google IO 2023ರಲ್ಲಿ ಹಲವು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ವೈಶಿಷ್ಟ್ಯಗಳು AIಗೆ ಸಂಬಂಧಿಸಿವೆ. ಕಂಪನಿಯು ಪ್ರಾಜೆಕ್ಟ್ ಟೈಲ್‌ವಿಂಡ್ ಅನ್ನು ಸಹ ಪರಿಚಯಿಸಿದೆ. ಪ್ರಾಜೆಕ್ಟ್ ಟೈಲ್‌ವಿಂಡ್ ಹೊಸ ರೀತಿಯ ನೋಟ್‌ಬುಕ್ ಆಗಿದ್ದು, ಜನರು ಹೆಚ್ಚು ವೇಗವಾಗಿ ಕಲಿಯಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಹೊಸ ಅಪ್‌ಡೇಟ್‌ನಲ್ಲಿ ಕಂಪನಿಯು ನೋಟ್‌ಬುಕ್‌ಎಲ್‌ಎಂ (ಪ್ರಾಜೆಕ್ಟ್ ಟೈಲ್‌ವಿಂಡ್‌ಗೆ ಹೊಸ ಹೆಸರು) ಅನ್ನು ಹೊರತರಲು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಪ್ರಸ್ತುತ ಇದು ಅಮೆರಿಕದ ಸಣ್ಣ ಗುಂಪಿನ ಬಳಕೆದಾರರಿಗೆ ಲಭ್ಯವಿದೆ.

ನೋಟ್‌ಬುಕ್ LM (Project Tailwind) ಎಂದರೇನು?: ತನ್ನ ಹೊಸ ಪ್ಲಾಟ್‌ಫಾರ್ಮ್ ನೋಟ್‌ಬುಕ್ LM ಇತರ AI ಚಾಟ್‌ಬಾಟ್‌ಗಳಲ್ಲಿ ಕಂಡುಬರುವ ತಪ್ಪು ಮಾಹಿತಿ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. Hallucinations ಕಡಿಮೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. (AI ಚಾಟ್‌ಬಾಟ್‌ಗಳಿಂದ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಮಾಹಿತಿ ತಲುಪಿಸುವುದು). ಈ ಉಪಕರಣವು ಬಳಕೆದಾರರಿಗೆ ನೋಟ್ ಟೇಕಿಂಗ್ ಅನ್ನು ಚುರುಕುಗೊಳಿಸುತ್ತದೆ. ಇದು AI ತಂತ್ರಜ್ಞಾನವನ್ನು ಬಳಸಿಕೊಂಡು ಟಿಪ್ಪಣಿಗಳನ್ನು ಸಂಕ್ಷಿಪ್ತಗೊಳಿಸುತ್ತದೆ ಮತ್ತು ಸಂಘಟಿಸುತ್ತದೆ ಎಂದು ಗೂಗಲ್​ ಹೇಳುತ್ತದೆ.

NotebookLM ವೈಶಿಷ್ಟ್ಯಗಳು:

ನಿಖರ ಮಾಹಿತಿ: ನೋಟ್‌ಬುಕ್ ನಿಮ್ಮ ಟಿಪ್ಪಣಿಗಳು ಮತ್ತು ಮೂಲಗಳಿಂದ ಸತ್ಯಗಳನ್ನು ಸಾರಾಂಶ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಸಂಪೂರ್ಣ ವಿಷಯವನ್ನು ಓದದೆಯೇ ದೊಡ್ಡ ದಾಖಲೆಗಳನ್ನು ಸುಲಭವಾಗಿ ಸಾರಾಂಶ ಮಾಡಬಹುದು. ಇದಲ್ಲದೆ, ಇದು ಪ್ರಮುಖ ವಿಷಯಗಳನ್ನು ಹೈಲೈಟ್ ಮಾಡುತ್ತದೆ. ನೀವು ಯಾವುದೇ ದೊಡ್ಡ ದಾಖಲೆ ಹೊಂದಿದ್ದರೆ ಅದರ ಸಾರಾಂಶವನ್ನೂ ಅದರ ಸಹಾಯದಿಂದ ಬರೆಯಬಹುದು.

ಪ್ರಶ್ನೆಗಳಿಗೆ ಉತ್ತರ ನೀಡುವುದು: ನೀವು ಸಲ್ಲಿಸಿದ ಡಾಕ್ಯುಮೆಂಟ್ ಬಗ್ಗೆ ನೀವು ಪ್ರಶ್ನೆಗಳನ್ನು ಕೇಳಬಹುದು. ಇದು ನಿಮ್ಮ ಡಾಕ್ಯುಮೆಂಟ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುತ್ತದೆ. ಇದಲ್ಲದೆ, ಜೀವನಚರಿತ್ರೆ ಮತ್ತು ಸಂಶೋಧನಾ ಟಿಪ್ಪಣಿಗಳನ್ನು ಪೋಸ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಡಾಕ್ಯುಮೆಂಟ್​ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಅದರ ಸಹಾಯದಿಂದ ಪರಿಹರಿಸಬಹುದು.

ಹೊಸ ಐಡಿಯಾಗಳು: NotebookLM ಕೇವಲ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಹೆಚ್ಚಿನದನ್ನು ಮಾಡಬಹುದು. ನೀವು ಹೊಸ ಆಲೋಚನೆಗಳನ್ನೂ ಕಂಡುಕೊಳ್ಳಬಹುದು. ನೀವು ವಿಷಯ ಬರಹಗಾರರಾಗಿದ್ದರೆ ಈ ಉಪಕರಣವು ನಿಮಗೆ ಉಪಯುಕ್ತವಾಗಬಹುದು. ಅದರಿಂದ ವಿಷಯಕ್ಕಾಗಿ ನೀವು ಹೊಸ ಆಲೋಚನೆಗಳನ್ನು ಕೇಳಬಹುದು. ಅದು ಸಂಪೂರ್ಣ ಮಾಹಿತಿ ನೀಡುತ್ತದೆ.

ಇದನ್ನೂ ಓದಿ: ಗೂಗಲ್​ ಹೊಸ ನಿಯಮಕ್ಕೆ ಬೆಚ್ಚಿ ಬಿದ್ದ ಜನ: ಹುಷಾರ್​, ಡಿಲೀಟ್​ ಆಗಲಿದೆ ನಿಮ್ಮ ಜಿಮೇಲ್​ ಅಕೌಂಟ್​! - Google Inactive Account Policy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.