OnePlus 13 Launch Date Announce: OnePlus ಅಭಿಮಾನಿಗಳಿಗೆ ಶುಭ ಸುದ್ದಿ ಬಂದಿದೆ. ಈ ಕಂಪನಿಯ ಮುಂದಿನ ಪ್ರೀಮಿಯಂ ಫೋನ್ ಸರಣಿ ಅಂದರೆ OnePlus 13 ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಕಳೆದ ಕೆಲವು ವಾರಗಳಿಂದ OnePlus 13 ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈಗ ಅಂತಿಮವಾಗಿ ಈ ಫೋನ್ ಬಿಡುಗಡೆ ದಿನಾಂಕ ಕೂಡ ಹೊರ ಬಿದ್ದಿದೆ.
ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ : OnePlus 12 ನ ಅಪ್‌ಗ್ರೇಡ್ ಆವೃತ್ತಿಯಾಗಿ ಬರುವ OnePlus 13, ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಮಾಹಿತಿಗಳ ಪ್ರಕಾರ OnePlus ತನ್ನ ಹೊಸ ಪ್ರೀಮಿಯಂ ಫೋನ್‌ನಲ್ಲಿ Qualcomm ನ ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಒದಗಿಸಲಿದೆ. ಇದರ ಹೊರತಾಗಿ ನಾವು ಹಿಂದಿನ ಹಲವು ಒನ್‌ಪ್ಲಸ್ ಫೋನ್ ಸರಣಿಗಳಲ್ಲಿ ನೋಡಿದಂತೆ, ಈ ಫೋನ್‌ನ ಕ್ಯಾಮೆರಾ ಸೆಟಪ್ ಸಹ ಹ್ಯಾಸೆಲ್‌ಬ್ಲಾಡ್ ಸಿದ್ಧಪಡಿಸಿದೆ.
ಚೀನಾದಲ್ಲಿ ಮೊದಲು ಅನಾವರಣ: OnePlus ಪ್ರಕಾರ, OnePlus 13 ಅನ್ನು ಮೊದಲು ಅದರ ಹೋಮ್ ಮಾರುಕಟ್ಟೆಯಲ್ಲಿ ಅಂದರೆ ಚೀನಾದಲ್ಲಿ ಅಕ್ಟೋಬರ್ 31, 2024 ರಂದು ಅನಾವರಣಗೊಳ್ಳಲಿದೆ. ಅದರ ನಂತರ ಈ ಫೋನ್ ಪ್ರಪಂಚದಾದ್ಯಂತ ಇತರ ದೇಶಗಳಲ್ಲಿ ಮತ್ತು ಭಾರತದಲ್ಲಿಯೂ ಬಿಡುಗಡೆಯಾಗುತ್ತದೆ. ಈ ಫೋನ್‌ನ ಟೀಸರ್ ಸಹ ಬಹಿರಂಗಪಡಿಸಲಾಗಿದೆ. ಇದರಲ್ಲಿ ಅದರ ಮೂರು ಬಣ್ಣ ರೂಪಾಂತರಗಳನ್ನು ಕಾಣಬಹುದು. ಕಂಪನಿಯು ಈ ಫೋನ್ ಅನ್ನು ಅಬ್ಸಿಡಿಯನ್ ಬ್ಲಾಕ್, ಬ್ಲೂ ಮೊಮೆಂಟ್ ಮತ್ತು ವೈಟ್ ಡ್ಯೂ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಿದೆ.
OnePlus 13ರ ವೈಶಿಷ್ಟ್ಯಗಳೇನೇನು?: ಚೀನಾದಲ್ಲಿ OnePlus 13 ಬಿಡುಗಡೆಯ ಟೀಸರ್ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಚೀನಾದ ಸಮಯದ ಪ್ರಕಾರ ಫೋನ್ ಬಿಡುಗಡೆ ಕಾರ್ಯಕ್ರಮವು ಅಕ್ಟೋಬರ್ 31 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಈ ಫೋನ್‌ನ ವಿಶೇಷತೆಗಳ ಕುರಿತು ಮಾತನಾಡುವುದಾದರೆ, ಇದು ವಿಶ್ವದ ಮೊದಲ ಎರಡನೇ - ಜನ್ 2K BOE X2 ಕರ್ವ್ ಡಿಸ್‌ಪ್ಲೇ ಹೊಂದುವ ನಿರೀಕ್ಷೆಯಿದೆ. ಇದರೊಂದಿಗೆ, ಬಳಕೆದಾರರ ಸ್ಕ್ರೀನ್ ಅನುಭವವು ಸಾಕಷ್ಟು ಅದ್ಭುತವಾಗಿರುತ್ತದೆ. ಇದಲ್ಲದೇ, ಸ್ನಾಪ್‌ಡ್ರಾಗನ್ 8 ಎಲೈಟ್ (8 ಜನ್ 4) ಅನ್ನು ಫೋನ್‌ಗೆ ಅದ್ಭುತವಾದ ಶಕ್ತಿಯನ್ನು ನೀಡಲು ಬಳಸಬಹುದು.
ಈ ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಒದಗಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಸೆಟಪ್‌ನ ಮುಖ್ಯ ಕ್ಯಾಮರಾ 50MP LYT808 ಸೆನ್ಸಾರ್ ಆಗಿರಬಹುದು, ಎರಡನೆಯದು 50MP JN5 ಸೆನ್ಸಾರ್ ಆಗಿರಬಹುದು ಮತ್ತು ಮೂರನೆಯದು ಪೆರಿಸ್ಕೋಪ್ ಸೆನ್ಸಾರ್ ಆಗಿರಬಹುದು. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಏಕೆಂದರೆ ಕಂಪನಿಯು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
OnePlus 13 6000mAh ಜಂಬೋ ಬ್ಯಾಟರಿ ಹೊಂದುವ ನಿರೀಕ್ಷೆಯಿದೆ. ಇದು 100W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಇದು IP68/IP69 ರೇಟಿಂಗ್ ಅನ್ನು ಸಹ ಪಡೆಯಬಹುದು. ಈ ಫೋನ್ ವಾಟರ್ ಮತ್ತು ಡಸ್ಟ್ ಸಮಸ್ಯೆಗಳಿಂದ ಸಂಪೂರ್ಣವಾಗಿ ಸುರಕ್ಷಿತವಾಗಿರಿಸಲು ಸಾಧ್ಯವಾಗುತ್ತದೆ. ಆದರೆ ಕಂಪನಿ ಅಧಿಕೃತ ಮಾಹಿತಿ ಹೊರ ಬಿದ್ದಾಗಲೇ ಇದರ ಇನ್ನಷ್ಟು ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣವಾಗಿ ತಿಳಿದು ಬರಲಿದೆ.
ಓದಿ: Samsung Galaxy Z Fold ಸ್ಪೇಷಲ್ ಆವೃತ್ತಿ ಅನಾವರಣ: ಭಾರತಕ್ಕೆ ಈಗಲೇ ಲಗ್ಗೆಯಿಡುವುದು ಡೌಟ್!