ನವದೆಹಲಿ: ಶೇ.77ರಷ್ಟು ಜೆನ್ ಝಡ್ (1997-2012ರಲ್ಲಿ ಜನಿಸಿದವರು) ವಿದ್ಯಾರ್ಥಿಗಳು ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಇಂಡಿಡ್ ಸಹಯೋಗದ ನಸ್ಕೊಮ್ ಈ ವರದಿ ಬಿಡುಗಡೆ ಮಾಡಿದೆ. ನಸ್ಕೊಮ್ ಜಾಗತಿಕ ಹೊಂದಾಣಿಕೆ ಮತ್ತು ನೇಮಕಾತಿ ಪ್ಲಾಟ್ಫಾರ್ಮ್ ಆಗಿದ್ದು, ಭಾರತದಲ್ಲಿನ ಟೆಕ್ ವಲಯದ ಪ್ರವೃತ್ತಿಗಳ ಕುರಿತು ಆಳವಾಗಿ ಸಂಶೋಧನೆ ಮಾಡುತ್ತದೆ.
ಈ ಅಧ್ಯಯನದಲ್ಲಿ ಭವಿಷ್ಯದ ಉದ್ಯೋಗಗಳು, ವಿಕಸನಗೊಳ್ಳುತ್ತಿರುವ ವರ್ಕ್‌ಸ್ಪೇಸ್ ಮತ್ತು ಕೆಲಸದ ಆಯಾಮಗಳ ಸಮಗ್ರ ಸಮೀಕ್ಷೆ ನಡೆಸಲಾಗಿದೆ. 185 ಉದ್ಯೋಗಿಗಳು, 2,500 ಪ್ರಸ್ತುತ ಮತ್ತು ಭವಿಷ್ಯದ ಉದ್ಯೋಗಿಗಳು ಹಾಗೂ ಶೇ.84ರಷ್ಟು ಸಂಘಟನೆಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ.
ಉದ್ಯೋಗದಾತರು, ಪ್ರಸ್ತುತ ಉದ್ಯೋಗಿಗಳು ಮತ್ತು ಭವಿಷ್ಯದ ಉದ್ಯೋಗಿಗಳ ಅನ್ವೇಷಣೆ, ಉದ್ಯೋಗಿಗಳು ಗಿಗ್ ಮಾದರಿಗೆ ತೆರೆದುಕೊಳ್ಳುವಿಕೆ, ಸ್ಟಾರ್ಟಪ್ ಹಾಗೂ ಗಿಗ್ ವರ್ಕ್ ನೇಮಕಾತಿಯಲ್ಲಿನ ಬ್ಯುಸಿನೆಸ್ ಪ್ರೊಸೆಸ್ ಮ್ಯಾನೇಜ್ಮೆಂಟ್ ವಲಯ ಮುಂದಾಳತ್ವದ ಅರ್ಥೈಸಿಕೊಳ್ಳುವಿಕೆಯನ್ನು ಸಮೀಕ್ಷೆ ಮಾಡಲಾಗಿದೆ.
"ಭಾರತದಲ್ಲಿನ ತಂತ್ರಜ್ಞಾನ ಉದ್ಯಮವು ಗಮನಾರ್ಹ ರೂಪಾಂತರ ಅನುಭವಿಸುತ್ತಿದೆ. ಇದು ಪ್ರಸ್ತುತ ಕಾರ್ಯಕ್ಷೇತ್ರದ ವಿಕಾಸಗೊಳ್ಳುತ್ತಿರುವ ಡೈನಾಮಿಕ್ಸ್ ಅನ್ನು ಪ್ರತಿಬಿಂಬಿಸುತ್ತಿದೆ. ಕಳೆದ ಐದು ವರ್ಷದಲ್ಲಿ ಉದ್ಯೋಗದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಸಾಂಪ್ರದಾಯಿಕ ಕಚೇರಿ ಕೆಲಸದೊಂದಿಗೆ ರಿಮೋಟ್ ವರ್ಕ್ವರೆಗೆ ಅನ್ವೇಷಣೆಗಳು ನಡೆದಿದ್ದು, ಇದೀಗ ಮತ್ತೆ ಕಚೇರಿಗೆ ಮರಳುವ ಪ್ರವೃತ್ತಿ ಆರಂಭವಾಗಿದೆ" ಎಂದು ನಸ್ಕೊಮ್ ಹಿರಿಯ ಉಪಾಧ್ಯಕ್ಷ ಸಂಗೀತಾ ಗುಪ್ತಾ ಹೇಳುತ್ತಾರೆ. (ಐಎಎನ್ಎಸ್)
ಇದನ್ನೂ ಓದಿ: ಜಾಗತಿಕ ಪಿಸಿ ಮಾರಾಟ ಶೇ 14 ರಷ್ಟು ಕುಸಿತ; ಅಧ್ಯಯನ ವರದಿ