ETV Bharat / technology

ಗೂಗಲ್​ ಆವಿಷ್ಕಾರದ ತಂತ್ರಜ್ಞೆ, ಯೂಟ್ಯೂಬ್​ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಕ್ಯಾನ್ಸರ್​​ಗೆ ಬಲಿ - Susan Wojcicki Dies - SUSAN WOJCICKI DIES

ಗೂಗಲ್​ ಆವಿಷ್ಕಾರದ ತಂತ್ರಜ್ಞೆ, ಯೂಟ್ಯೂಬ್​ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಅವರು ಶ್ವಾಸಕೋಶದ ಕ್ಯಾನ್ಸರ್​ನಿಂದ ನಿಧನರಾಗಿದ್ದಾರೆ.

ಸುಸಾನ್ ವೊಜ್ಸಿಕಿ ಕ್ಯಾನ್ಸರ್​​ಗೆ ಬಲಿ
ಸುಸಾನ್ ವೊಜ್ಸಿಕಿ ಕ್ಯಾನ್ಸರ್​​ಗೆ ಬಲಿ (AP)
author img

By ETV Bharat Karnataka Team

Published : Aug 10, 2024, 10:54 PM IST

ಸ್ಯಾನ್ ಫ್ರಾನ್ಸಿಸ್ಕೋ (ಯುನೈಟೆಡ್ ಸ್ಟೇಟ್ಸ್): ವಿಶ್ವ ತಂತ್ರಜ್ಞಾನ ವಲಯಕ್ಕೆ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಕ್ಯಾನ್ಸರ್​ ಎಂಬ ಮಹಾಮಾರಿಗೆ ಗೂಗಲ್‌ ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂತ್ರಜ್ಞೆ ಮತ್ತು ಯೂಟ್ಯೂಬ್​ನ ಮಾಜಿ ಮುಖ್ಯಸ್ಥೆ ಸುಸಾನ್ ವೊಜ್ಸಿಕಿ ಬಲಿಯಾಗಿದ್ದಾರೆ. ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ತಮ್ಮ 56 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಅವರು ಅಸುನೀಗಿದ್ದು, ಇದನ್ನು ಅವರ ಪತಿಯೇ ದೃಢಪಡಿಸಿದ್ದಾರೆ.

ಸ್ಟಾರ್ಟ್​ಅಪ್​ ಆಗಿ ರೂಪಿಸಿದ್ದ ಗೂಗಲ್​ ಅನ್ನು ಜಾಗತಿಕ ಮಟ್ಟಕ್ಕೇರುವಂತೆ ಶ್ರಮಿಸಿದ ಪ್ರಮುಖರಲ್ಲಿ ವೊಜ್ಸಿಕಿ ಕೂಡ ಒಬ್ಬರು. ಸುಮಾರು ಎರಡು ದಶಕಗಳ ಕಾಲ ಗೂಗಲ್ ಅನ್ನು ತಮ್ಮ ಸ್ಟಾರ್ಟ್​ಅಪ್​ ಕೇಂದ್ರದಲ್ಲೇ ಪ್ರಯೋಗ ನಡೆಸಿ, ಜಾಗತಿಕ ಟೆಕ್ ಹಬ್​ ಆಗಿ ಪರಿವರ್ತಿಸುವಲ್ಲಿ ಇವರದ್ದು ಮಹತ್ತರ ಪಾತ್ರವಿದೆ.

2006 ರಲ್ಲಿ ಗೂಗಲ್​ನ ಯೂಟ್ಯೂಬ್​ ಅನ್ನು ತನ್ನ ಸಹಸಂಸ್ಥೆಯಾಗಿ ಸೇರ್ಪಡೆ ಮಾಡಿಕೊಂಡ ಬಳಿಕ, ಅದರ ಮುಖ್ಯಸ್ಥರಾಗಿ ದಶಕಕ್ಕೂ ಅಧಿಕ ಕಾಲ ಮುನ್ನಡೆಸಿದ ಮೊಜ್ಸಿಕಿ ಅವರು, ಬಳಿಕ ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಆ ಹುದ್ದೆಯಿಂದ ಕಳೆದ ವರ್ಷವಷ್ಟೇ ಕೆಳಗಿಳಿದಿದ್ದರು.

ಟೆಕ್​ ದೈತ್ಯೆಯನ್ನು ಬಲಿ ಪಡೆದ ಕ್ಯಾನ್ಸರ್​: ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವೊಜ್ಸಿಕಿ ಅವರ ಸಾವಿನ ಬಗ್ಗೆ ಆಕೆಯ ಪತಿ ಡೆನ್ನಿಸ್ ಟ್ರೋಪರ್ ಅವರು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. "ನನ್ನ ಪ್ರೀತಿಯ ಮಡದಿ ಮೊಜ್ಸಿಕಿ ಅವರು ತನ್ನನ್ನು ಮತ್ತು ಐವರು ಮಕ್ಕಳನ್ನು ಅಗಲಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

"ಸುಸಾನ್ ಕೇವಲ ನನ್ನ ಪತ್ನಿಯಲ್ಲ, ಉತ್ತಮ ಸ್ನೇಹಿತೆ ಮತ್ತು ಜೀವನದ ಸಂಗಾತಿ. ಅದ್ಭುತ ಮನಸ್ಸು, ಪ್ರೀತಿಯ ತಾಯಿ ಮತ್ತು ಅನೇಕರಿಗೆ ಆತ್ಮೀಯ ಸ್ನೇಹಿತೆ. ಕುಟುಂಬ ಮತ್ತು ಪ್ರಪಂಚದ ಮೇಲೆ ಅವಳ ಪ್ರಭಾವವು ನಿರೀಕ್ಷೆಗೆ ಮೀರಿದ್ದು ಎಂದು ಬಣ್ಣಿಸಿದ್ದಾರೆ.

ಗೂಗಲ್‌ ಸಿಒಒ ಸುಂದರ್ ಪಿಚೈ ಅವರು ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ಸುಸಾನ್​ ವೊಜ್ಸಿಕಿ ಗೂಗಲ್‌ನ ಇತಿಹಾಸದಲ್ಲಿ ಅತ್ಯಂತ ಪ್ರಮುಖ ತಂತ್ರಜ್ಞೆ. ಆಕೆಯಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಆಕೆ ನಾಯಕಿ ಮತ್ತು ಸ್ನೇಹಿತೆ. ನಾವು ಅವಳನ್ನು ಪ್ರೀತಿಯಿಂದ ಕಳೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ವೊಜ್ಸಿಕಿ ಅವರು 2014 ರಲ್ಲಿ ಯೂಟ್ಯೂಬ್​ನ ಸಿಇಒ ಆಗಿ ನೇಮಿಸಲಾಗಿತ್ತು. 2023 ರಲ್ಲಿ ಅವರು ಹುದ್ದೆಯಿಂದ ಕೆಳಗಿಳಿದಿದ್ದರು.

ಇದನ್ನೂ ಓದಿ: ಸುಟ್ಟ ಗಾಯಗಳನ್ನು ಗುಣಪಡಿಸಲು ಹೊಸ ರೀತಿಯ ಬ್ಯಾಂಡೇಜ್ ಅಭಿವೃದ್ಧಿಪಡಿಸಿದ ಸಂಶೋಧಕರು: ಏನು ವಿಶೇಷತೆ? - researchers invent bandahe

ETV Bharat Logo

Copyright © 2025 Ushodaya Enterprises Pvt. Ltd., All Rights Reserved.