ETV Bharat / technology

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಘೋಷಣೆ: ಶೀಘ್ರದಲ್ಲೇ ಆಫರ್‌ಗಳ ಭರಾಟೆ - Flipkart Big Billion Days Sale

author img

By ETV Bharat Karnataka Team

Published : Sep 17, 2024, 1:49 PM IST

Flipkart Big Billion Days Sale: ಹಬ್ಬ ಹರಿದಿನ ಬರುತ್ತಿದೆ. ಈ ಹಿನ್ನೆಲೆ ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ಬಂಪರ್ ಆಫರ್ ನೀಡುವುದಕ್ಕೆ ಸಿದ್ಧವಾಗಿದೆ. ಹೀಗಾಗಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ದಿನಾಂಕಗಳನ್ನು ಪ್ರಕಟಿಸಿದೆ. ಇದರೊಂದಿಗೆ ಗ್ರಾಹಕರು ಈ ಬಾರಿಯ ಮಾರಾಟದಲ್ಲಿ ಭಾರೀ ರಿಯಾಯಿತಿ ಮತ್ತು ಉತ್ತಮ ಕೊಡುಗೆಗಳನ್ನು ಪಡೆಯಲಿದ್ದಾರೆ.

FLIPKART BIG BILLION DAYS OFFERS  FLIPKART BIG BILLION DAYS SALE  FLIPKART BIG BILLION DAYS 2024 DATE  FLIPKART BIG BILLION DAYS
ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಘೋಷಣೆ (Flipkart)

Flipkart Big Billion Days Sale: ಫ್ಲಿಪ್‌ಕಾರ್ಟ್ ತನ್ನ ವಾರ್ಷಿಕ 'ಬಿಗ್ ಬಿಲಿಯನ್ ಡೇಸ್' ಮಾರಾಟದ ದಿನಾಂಕಗಳನ್ನು ಪ್ರಕಟಿಸಿದೆ. ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ. ಮಾರಾಟವು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ 26 ರಿಂದ ಲಭ್ಯವಾಗಲಿದೆ. ಇದರೊಂದಿಗೆ ಗ್ರಾಹಕರಿಗೆ ಈ ಬಾರಿಯ ಮಾರಾಟದಲ್ಲಿ ಭಾರಿ ಕೊಡುಗೆಗಳು ಸಿಗಲಿವೆ. ಈ ಕೊಡುಗೆಗಳ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಮಾರಾಟದ ಭಾಗವಾಗಿ, HDFC ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ ರಿಯಾಯಿತಿಗಳನ್ನು ನೀಡಲಾಗುವುದು. ಇದಕ್ಕಾಗಿ ಫ್ಲಿಪ್‌ಕಾರ್ಟ್ 2024 ರ ಮಾರಾಟಕ್ಕಾಗಿ HDFC ಬ್ಯಾಂಕ್‌ನೊಂದಿಗೆ ಕೈಜೋಡಿಸಿದೆ. Flipkart- Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿಯೂ ಸಹ ರಿಯಾಯಿತಿ ಲಭ್ಯವಿದೆ. ಇದಲ್ಲದೇ ಯುಪಿಐ ಪಾವತಿಯಲ್ಲಿ ರೂ.50 ರಿಯಾಯಿತಿ ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಫ್ಲಿಪ್ ಕಾರ್ಟ್ ಹೇಳಿದೆ. ಪೇ ಲೇಟರ್ ಮೂಲಕ ನೀವು ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ಬಿಗ್ ಬಿಲಿಯನ್ ಡೇಸ್ ಸೇಲ್‌ನ ಭಾಗವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳು ಲಭ್ಯವಿರುತ್ತವೆ. Apple, OnePlus, Samsung ಮತ್ತು Xiaomi ನಂತಹ ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುವುದು. ಆಪಲ್ 16 ಸರಣಿಯ ಇತ್ತೀಚಿನ ಬಿಡುಗಡೆಯೊಂದಿಗೆ ಹಳೆಯ ಐಫೋನ್ ಮಾದರಿಗಳ ಮೇಲೆ ಭಾರಿ ರಿಯಾಯಿತಿಗಳ ಸಾಧ್ಯತೆಯಿದೆ. ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿನ ಮಾಹಿತಿಯ ಪ್ರಕಾರ, ಇವುಗಳ ಜೊತೆಗೆ, Vivo T3X 5G, Realme 12X 5G, Oppo K12X 5G, Realme P1 5G, Vivo T3 Lite 5G, Moto G64 5G, CMF Phone 1 ಬಜೆಟ್ ಸ್ನೇಹಿ ಮೊಬೈಲ್‌ಗಳು ಅಗ್ಗವಾಗಿ ಲಭ್ಯವಿರುತ್ತವೆ. ಆದರೆ ಯಾವ್ಯಾವ ಫೋನ್ ಮೇಲೆ ಎಷ್ಟು ಡಿಸ್ಕೌಂಟ್ ಸಿಗಲಿದೆ ಎಂಬುದು ಸದ್ಯದಲ್ಲೇ ಬಹಿರಂಗವಾಗಲಿದೆ.

ಸ್ಮಾರ್ಟ್‌ಫೋನ್‌ಗಳ ಜೊತೆಗೆ ಟಿವಿಗಳು, ಸ್ಮಾರ್ಟ್ ವಾಚ್‌ಗಳು, ಲ್ಯಾಪ್‌ಟಾಪ್‌ಗಳು, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೂ ಆಫರ್‌ಗಳು ಲಭ್ಯವಿರುತ್ತವೆ. ಈ ಮಾರಾಟವನ್ನು ಗಮನದಲ್ಲಿಟ್ಟುಕೊಂಡು, ಫ್ಲಿಪ್‌ಕಾರ್ಟ್ ಈಗಾಗಲೇ ಕಾಲೋಚಿತ ಉದ್ಯೋಗಿಗಳನ್ನು ದೊಡ್ಡ ಪ್ರಮಾಣದಲ್ಲಿ ನೇಮಿಸಿಕೊಳ್ಳುತ್ತಿದೆ. ಈ ಸಂಖ್ಯೆ ಒಂದು ಲಕ್ಷದವರೆಗೆ ತಲುಪಬಹುದು.

ಓದಿ: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಡೇಟ್ಸ್​​ ಫಿಕ್ಸ್: ಈ ಕಾರ್ಡ್ ಹೊಂದಿರುವವರಿಗೆ ಬಂಪರ್​, 6000ಕ್ಕೆ ಸಿಗಲಿವೆ ಮೊಬೈಲ್ಸ್​! - GREAT INDIAN FESTIVAL 2024 OFFERS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.