ನವದೆಹಲಿ: ಮೇ ತಿಂಗಳಲ್ಲಿ ಭಾರತದಲ್ಲಿ ಫೇಸ್ಬುಕ್ನ 13 ನಿಯಮಗಳ ಅಡಿಯಲ್ಲಿ 15.6 ಮಿಲಿಯನ್ ಮತ್ತು ಇನ್ಸ್ಟಾಗ್ರಾಮ್ನ 12 ನಿಯಮಗಳ ಅಡಿಯಲ್ಲಿ 5.8 ಮಿಲಿಯನ್ ಆಕ್ಷೇಪಾರ್ಹ ಪೋಸ್ಟ್ಗಳನ್ನು ತೆಗೆದುಹಾಕಲಾಗಿದೆ ಎಂದು ಮೆಟಾ ಹೇಳಿದೆ. ಮೇ ತಿಂಗಳಲ್ಲಿ ಫೇಸ್ಬುಕ್ ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ 22,251 ದೂರುಗಳನ್ನು ಸ್ವೀಕರಿಸಿದೆ ಮತ್ತು 13,982 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಧನಗಳನ್ನು ಒದಗಿಸಿದೆ ಎಂದು ಹೇಳಿದೆ.
ಸಮಸ್ಯೆ ಪರಿಹಾರಕ್ಕಾಗಿ ಒದಗಿಸಲಾದ ಸಾಧನಗಳಲ್ಲಿ- ನಿರ್ದಿಷ್ಟ ನಿಯಮ ಉಲ್ಲಂಘನೆಗಳಿಗಾಗಿ ದೂರು ನೀಡಲು ಪೂರ್ವ-ಸ್ಥಾಪಿತ ಚಾನೆಲ್ಗಳು, ಬಳಕೆದಾರರು ತಮ್ಮ ಡೇಟಾವನ್ನು ಡೌನ್ಲೋಡ್ ಮಾಡಬಹುದಾದ ಸ್ವಯಂ-ಪರಿಹಾರ ಸಾಧನಗಳು, ಖಾತೆ ಹ್ಯಾಕ್ ಮಾಡಿದ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಇತ್ಯಾದಿಗಳನ್ನು ಒಳಗೊಂಡಿವೆ ಎಂದು ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021ಕ್ಕೆ ಅನುಸಾರವಾಗಿ ಮೆಟಾ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.
"ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 8,269 ದೂರುಗಳನ್ನು ನಾವು ನಮ್ಮ ನೀತಿಗಳ ಪ್ರಕಾರ ಕಂಟೆಂಟ್ ಅನ್ನು ವಿಶ್ಲೇಷಿಸಿದ್ದೇವೆ ಮತ್ತು ಒಟ್ಟು 5,583 ದೂರುಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಉಳಿದ 2,686 ದೂರುಗಳನ್ನು ಪರಿಶೀಲಿಸಲಾಗಿದೆ ಆದರೆ ಕ್ರಮ ಕೈಗೊಂಡಿಲ್ಲ" ಎಂದು ಮೆಟಾ ತಿಳಿಸಿದೆ.
ಇನ್ಸ್ಟಾಗ್ರಾಮ್ನಲ್ಲಿ, ಕಂಪನಿಯು ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ 14,373 ದೂರುಗಳನ್ನು ಸ್ವೀಕರಿಸಿದೆ. "ಇವುಗಳ ಪೈಕಿ 7,300 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ಸಾಧನಗಳನ್ನು ಒದಗಿಸಿದ್ದೇವೆ" ಎಂದು ಅದು ಹೇಳಿದೆ.
ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 7,073 ದೂರುಗಳನ್ನು ಆಧರಿಸಿ ಮೆಟಾ ಈ ಕಂಟೆಂಟ್ಗಳನ್ನು ಪರಿಶೀಲಿಸಿದ್ದು, ಒಟ್ಟು 4,172 ದೂರುಗಳ ಮೇಲೆ ಕ್ರಮ ಕೈಗೊಂಡಿದೆ. ಉಳಿದ 2,901 ದೂರುಗಳನ್ನು ಪರಿಶೀಲಿಸಲಾಗಿದೆ ಆದರೆ ಕ್ರಮ ಕೈಗೊಂಡಿಲ್ಲ. ಹೊಸ ಐಟಿ ನಿಯಮಗಳು 2021ರ ಅಡಿಯಲ್ಲಿ, ಭಾರತದಲ್ಲಿ 5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ.
"ನಮ್ಮ ನಿಯಮಗಳನ್ನು ಉಲ್ಲಂಘಿಸುವ ಎಷ್ಟು ಪೋಸ್ಟ್ಗಳ (ಪೋಸ್ಟ್ಗಳು, ಫೋಟೋಗಳು, ವೀಡಿಯೊಗಳು ಅಥವಾ ಕಾಮೆಂಟ್ಗಳು) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಅಂಕಿಸಂಖ್ಯೆಗಳನ್ನು ನಾವು ಸಂಗ್ರಹಿಸುತ್ತೇವೆ. ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ನಿಂದ ಕಂಟೆಂಟ್ ಅನ್ನು ತೆಗೆದುಹಾಕುವುದು ಅಥವಾ ಕೆಲ ಬಳಕೆದಾರರಿಗೆ ತೊಂದರೆಯಾಗಬಹುದಾದ ಫೋಟೋಗಳು ಅಥವಾ ವೀಡಿಯೊಗಳ ವಿಷಯದಲ್ಲಿ ಎಚ್ಚರಿಕೆ ನೀಡುವುದು ಈ ಕ್ರಮಗಳಲ್ಲಿ ಸೇರಿವೆ" ಎಂದು ಮೆಟಾ ಹೇಳಿದೆ.
ಇದನ್ನೂ ಓದಿ: ಸಣ್ಣ ರೈತರಿಗಾಗಿ ಕಡಿಮೆ ಬೆಲೆಯ ಕಾಂಪ್ಯಾಕ್ಟ್ ಟ್ರ್ಯಾಕ್ಟರ್ ತಯಾರಿಸಿದ ಸಿಎಸ್ಐಆರ್ - Low Cost Compact Tractor