ETV Bharat / technology

ಎಲಾನ್​ ಮಸ್ಕ್​ ಪ್ರಯೋಗಾಲಯದಲ್ಲಿ ಮತ್ತೊಂದು ವಿಕ್ರಮ: ಮಾನವನ ಮೆದುಳಿನಲ್ಲಿ 'ಟೆಲಿಪತಿ' ಚಿಪ್​ ಅಳವಡಿಕೆ - ನ್ಯೂರಾಲಿಂಕ್​ ಸಂಸ್ಥೆ

ಎಲಾನ್​ ಮಸ್ಕ್​ ಒಡೆತನದ ನ್ಯೂರಾಲಿಂಕ್​ ಕಂಪನಿ ಮಾನವನ ಮೆದುಳಿನಲ್ಲಿ ಕೃತಕ ಬುದ್ಧಿಮತ್ತೆಯ ಬ್ರೈನ್​ ಚಿಪ್​ ಯಶಸ್ವಿಯಾಗಿ ಅಳವಡಿಸಿದೆ.

ಮಾನವನ ಮೆದುಳಿನಲ್ಲಿ ಚಿಪ್​ ಅಳವಡಿಕೆ
ಮಾನವನ ಮೆದುಳಿನಲ್ಲಿ ಚಿಪ್​ ಅಳವಡಿಕೆ
author img

By ETV Bharat Karnataka Team

Published : Jan 30, 2024, 4:05 PM IST

ನ್ಯೂಯಾರ್ಕ್​: ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾದ ಟೆಸ್ಲಾ, ಎಕ್ಸ್​ ಕಂಪನಿಯ ಒಡೆಯ ಎಲಾನ್​ ಮಸ್ಕ್​ ಈಗ ಮತ್ತೊಂದು ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಮಾನವನ ಮೆದುಳಿನಲ್ಲಿ ಕೃತಕ ಬುದ್ಧಿಮತ್ತೆಯ ಬ್ರೈನ್​ ಚಿಪ್​ ಅನ್ನು ತಮ್ಮ ಒಡೆತನದ ನ್ಯೂರಾಲಿಂಕ್​ ಕಂಪನಿಯ ಮೂಲಕ ಯಶಸ್ವಿಯಾಗಿ ಅಳವಡಿಸಿದ್ದಾರೆ. ಪ್ರಯೋಗಕ್ಕೊಳಗಾದ ವ್ಯಕ್ತಿ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾನೆ ಎಂದು ಎಲಾನ್​ ಮಸ್ಕ್​ ತಿಳಿಸಿದ್ದಾರೆ.

  • The first human received an implant from @Neuralink yesterday and is recovering well.

    Initial results show promising neuron spike detection.

    — Elon Musk (@elonmusk) January 29, 2024 " class="align-text-top noRightClick twitterSection" data=" ">

ಮಾನವನ ಮೆದುಳಿನಲ್ಲಿ ಕೃತಕ ಬುದ್ಧಿಮತ್ತೆಯ ಚಿಪ್​ ಅಳವಡಿಸುವ ಪ್ರಯೋಗ ಪ್ರಪಂಚದಲ್ಲಿಯೇ ಮೊದಲಾಗಿದೆ. ನ್ಯೂರಾಲಿಂಕ್​ ಕಂಪನಿಯು ವ್ಯಕ್ತಿಯಲ್ಲಿ ಸೋಮವಾರ ಈ ಚಿಪ್​ ಅಳವಡಿಸಿದೆ. ನರಕೋಶಗಳ ಪತ್ತೆಯು (ನ್ಯೂರಾನ್​ ಸ್ಪೈಕ್​) ನಿಖರವಾಗಿ ಕೆಲಸ ಮಾಡುತ್ತಿದೆ. ಈ ಪ್ರಯೋಗ ಭರವಸೆಯ ಫಲಿತಾಂಶಗಳನ್ನು ನೀಡುತ್ತಿದೆ ಎಂದು ವಿಶ್ವದ 2ನೇ ಸಿರಿವಂತ ವ್ಯಕ್ತಿಯಾದ ಮಸ್ಕ್​ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಪ್ರಯೋಗದ ಕಾರ್ಯವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರೂ, ನ್ಯೂರಾಲಿಂಕ್​ ನಡೆಸಿದ ಮೊದಲ ಪ್ರಯತ್ನದ ಕುರಿತ ಕೆಲ ವಿಚಾರಗಳನ್ನು ತಿಳಿಸಿದ್ದಾರೆ. ಇದಕ್ಕೆ ಅವರು 'ಟೆಲಿಪತಿ' ಎಂದು ಹೆಸರಿಸಿದ್ದಾರೆ. ಬ್ರೈನ್​ ಚಿಪ್​ ಅನ್ನು ಆಯ್ದ ವ್ಯಕ್ತಿಯಲ್ಲಿ ಅಳವಡಿಸಿ ಪರೀಕ್ಷಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಬ್ರೈನ್​ ಚಿಪ್​ನ ಉಪಯೋಗವೇನು?: ಎದುರಿಗಿನ ವ್ಯಕ್ತಿಯ ಮನಸ್ಸು ಅಥವಾ ಯೋಚನೆಗಳನ್ನು ಅರಿಯಲು ಸಾಮಾನ್ಯ ಮನುಷ್ಯರಿಗೆ ಸಾಧ್ಯವಿಲ್ಲ. ಇಂತಿಪ್ಪ, ಮೆದುಳಿನಲ್ಲಿ ಟೆಲಿಪತಿ ಚಿಪ್​ ಅಳವಡಿಕೆಯ ಬಳಿಕ ಆ ಮನುಷ್ಯ ಕಂಪ್ಯೂಟರ್​, ಮೊಬೈಲ್ ಅಥವಾ ಯಾವುದೇ ಗ್ಯಾಜೆಟ್ ಅನ್ನು ನಿಯಂತ್ರಿಸಬಲ್ಲ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. ಜೊತೆಗೆ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ವಿಜ್ಞಾನಿ ಸ್ಟೀಫನ್​ ಹಾಕಿಂಗ್ ಅವರಂತಹ ವ್ಯಕ್ತಿಗಳು ಕೂಡ ಇದರ ನೆರವಿನಿಂದ ಸಹಜವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಈ ಪ್ರಯೋಗ ಮಾನವನಲ್ಲಿ ಯಶಸ್ವಿಯಾದರೆ, ಇದರ ಮೊದಲ ಫಲಾನುಭವಿಗಳು ದೈಹಿಕ ನ್ಯೂನತೆ ಉಳ್ಳವರಾಗಿರುತ್ತಾರೆ ಎಂದು ಎಲಾನ್​ ಮಸ್ಕ್​ ಘೋಷಿಸಿದ್ದಾರೆ.

ಮಸ್ಕ್​ ಅವರ ನ್ಯೂರಾಲಿಂಕ್ ಕಂಪನಿಯು ಇದರ ಮೇಲಿನ ಪ್ರಯೋಗಕ್ಕಾಗಿ 2023 ರಲ್ಲಿ ಅನುಮತಿ ಪಡೆದುಕೊಂಡಿತು. ಸರ್ಜಿಕಲ್​ ರೋಬೋಟ್​ ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್​ ಚಿಪ್​ ಅನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಸುರಕ್ಷಿತವಾಗಿದ್ದು, ಮಾನವನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಪಾರ್ಕಿನ್​ಸನ್​ ರೋಗಕ್ಕೆ ಚಿಕಿತ್ಸಾ ರೂಪವಾಗಿ ಇದರ ಬಳಕೆ ಮಾಡಲಾಗುತ್ತದೆ ಎಂದು ಸಂಸ್ಥೆ ಘೋಷಿಸಿದೆ. ಮಾನವನ ಮೇಲಿನ ಪ್ರಯೋಗಕ್ಕೂ ಇದಕ್ಕೂ ಮೊದಲು ಈ ಚಿಪ್​ ಅನ್ನು ಹಂದಿ ಮತ್ತು ಮಂಗಗಳ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಲಾಗಿದೆ. ಮಂಗವೊಂದು ಚಿಪ್​ ನೆರವಿನಿಂದ ವಿಡಿಯೋ ಗೇಮ್​ ಆಡಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಪ್ರೈವಸಿ, ದತ್ತಾಂಶ ಭದ್ರತೆಗೆ ಅಪಾಯ: ಎಐ ಅಳವಡಿಕೆಗೆ ಕಂಪನಿಗಳ ಹಿಂದೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.