ಮೆಹಬೂಬ್ನಗರ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಪರಿಸರಸ್ನೇಹಿ ಯೋಜನೆಯೊಂದಿಗೆ ಹೊಸ ಆವಿಷ್ಕಾರ ಮಾಡಿದ್ದಾರೆ. ವಿಶೇಷ ಎಂದರೆ ಅವರು, ಪರಿಸರದ ಸುಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಅವರು ಎಲೆಕ್ಟ್ರಾನಿಕ್ ಗೋ ಕಾರ್ಟಿಂಗ್ ಅನ್ನು ಪರಿಚಯಿಸಿದ್ದಾರೆ.
ಸಾಂಪ್ರದಾಯಿಕವಾಗಿ, ರೇಸಿಂಗ್ ಕಾರ್ಗಳು ವಿಶೇಷವಾಗಿ ಗೋ ಕಾರ್ಟಿಂಗ್ ಅತಿ ಹೆಚ್ಚು ಇಂಧನ ಬಳಕೆ ಮಾಡುವ ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಇದನ್ನು ಗುರುತಿಸಿದ ವಿದ್ಯಾರ್ಥಿಗಳು, ಇದಕ್ಕೆ ಪರಿಹಾರವನ್ನು ಹುಡುಕಲು ಮುಂದಾಗಿದ್ದು, ಕೇವಲ ಪರಿಸರ ಮಾಲಿನ್ಯವನ್ನು ಮಾತ್ರ ಕಡಿಮೆ ಮಾಡದೇ ಪರಿಸರ ಸ್ನೇಹಿ ಇಂಜಿನಿಯರಿಂಗ್ ಸಾಮರ್ಥ್ಯ ಹೊಂದಿರುವ ಅದ್ಭುತ ಪ್ರದರ್ಶನ ತೋರುವ ವಾಹನವನ್ನು ಅವಿಷ್ಕರಿಸಿದ್ದಾರೆ.
ಐದನೇ ಸೆಮಿಸ್ಟರ್ನ ಆಟೋಮೊಬೈಲ್ ಇಂಜಿನಿಯರಿಂಗ್ನಲ್ಲಿ ರೂಪಿಸಿರುವ ಈ ಎಲೆಕ್ಟ್ರಾನಿಕ್ ಗೋ ಕಾರ್ಟ್ ಯೋಜನೆ, ಹೆಚ್ಚು ವೆಚ್ಚದಾಯಕವಲ್ಲದ ಮತ್ತು ಅಭಿವೃದ್ಧಿ ಯೋಚಿತ ವಿನ್ಯಾಸದ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಇದು ಸಾಂಪ್ರದಾಯಿಕ ರೇಸಿಂಗ್ ಕಾರ್ಟ್ಗಿಂತ ಕಡಿಮೆ ವೆಚ್ಚ ಹೊಂದಿದ್ದು, ಕೇವಲ ₹ 32 ಸಾವಿರ ಬಜೆಟ್ನಲ್ಲಿ ರೂಪಿಸಲಾಗಿದೆ.
ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ಕೇವಲ ವೆಚ್ಚವನ್ನು ಕಡಿಮೆ ಮಾಡಿಲ್ಲ, ಬದಲಾಗಿ, ಅವರು ನಿಖರ ಆಯ್ದ ಉತ್ಪನ್ನಗಳನ್ನು ಆರಿಸುವ ಮೂಲಕ ಅದರ ಪ್ರದರ್ಶನ ಮತ್ತು ಸುಸ್ಥಿರತೆಯನ್ನು ಕಾಪಾಡಿಕೊಂಡಿದ್ದಾರೆ. ಅದ್ಭುತ ಪ್ರದರ್ಶನ ನೀಡುವ ಡಿಸಿ ಮೋಟಾರ್, ಹಗುರವಾದ ಲೀಥಿಯಂ- ಆಯಾನ್ ಬ್ಯಾಟರಿ ಮತ್ತು ಕ್ರೀಡಾ ಸೈಕಲ್ ಚಕ್ರಗಳಂತಹ ಹೊಸ ಅವಿಷ್ಕಾರದ ಭಾಗಗಳನ್ನು ಇದರಲ್ಲಿ ಅಳವಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅದರ ವೇಗ ಮತ್ತು ಸಾಮರ್ಥ್ಯಕ್ಕೆ ಒತ್ತು ನೀಡಿದ್ದಾರೆ.
ಇವರ ಈ ಆವಿಷ್ಕಾರವನ್ನು ಶ್ರೀಜನ ಟೆಕ್ ಫೆಸ್ಟ್ನಲ್ಲಿ ಅನಾವರಣ ಮಾಡಲಾಗಿದ್ದು, ಇದರಲ್ಲಿ ಜಿಲ್ಲಾ ಮಟ್ಟ ಬಹುಮಾನ ಗಳಿಸುವ ಮೂಲಕ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ. ಎಲೆಕ್ಟ್ರಾನಿಕ್ ಗೋ ಕಾರ್ಟ್ ರೇಸಿಂಗ್ ಮೀರಿದ ಸಾಮರ್ಥ್ಯವನ್ನು ಹೊಂದಿದೆ. ಇದು 100 ಕೆಜಿ ತೂಕವನ್ನು ಒಯ್ಯಬಲ್ಲ ಶಕ್ತಿ ಹೊಂದಿದ್ದು, ಸಾರಿಗೆ ಮತ್ತು ವಿಶ್ರಾಂತಿ ಚಟುವಟಿಕೆಯಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ.
ಇದಕ್ಕಿಂತ ಹೆಚ್ಚಾಗಿ ಮಕ್ಕಳಿಂದ ದೊಡ್ಡವರು ಮತ್ತು ವಿಕಲಚೇತನರು ಈ ಕಾರನ್ನು ಚಲಾಯಿಸುವಂತಹ ಹಲವು ವೈವಿಧ್ಯತೆಯ ಲಭ್ಯತೆಯನ್ನು ಮಾಡಲಾಗಿದೆ.
ಇನ್ನು ವಿದ್ಯಾರ್ಥಿಗಳು ಹೇಳುವಂತೆ ಈ ಎಲೆಕ್ಟ್ರಾನಿಕ್ ಗೋ ಕಾರ್ಟ್, ಸುಸ್ಥಿರ ಅವಿಷ್ಕಾರದತ್ತ ತಮ್ಮ ಪ್ರಯಾಣದ ಆರಂಭವಾಗಿದೆ. ಇದಕ್ಕೆ ಸರಿಯಾದ ಬೆಂಬಲ ಮತ್ತು ಪ್ರೋತ್ಸಾಹ ಸಿಕ್ಕಲ್ಲಿ, ಪರಿಸರ ಸ್ನೇಹಿ ನಿಟ್ಟಿನಲ್ಲಿ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದು, ರೇಸಿಂಗ್ ಜಗತ್ತಿನಲ್ಲಿ ಹಸಿರೀಕರಣ ಮತ್ತು ಉಲ್ಲಾಸಕರ ಭವಿಷ್ಯ ಕಾಣುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳನ ಮೇಲೆ 1 ಲಕ್ಷ ಮಾನವರ ವಸಾಹತು: ಎಲೋನ್ ಮಸ್ಕ್ ಮಹತ್ವಾಕಾಂಕ್ಷಿ ದೃಷ್ಟಿಕೋನ