ETV Bharat / technology

ಹೆಚ್​ಎಎಲ್ ಸಿಎಂಡಿಯಾಗಿ ಅಧಿಕಾರ ವಹಿಸಿಕೊಂಡ ಡಾ ಸುನೀಲ್ - HAL New CMD

ನಿರ್ದೇಶಕ (ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ) ಡಾ. ಡಿ.ಕೆ.ಸುನಿಲ್ ಅವರು ಸಿ.ಬಿ. ಅನಂತಕೃಷ್ಣನ್ ಅವರಿಂದ ಹೆಚ್‌ಎಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಹೆಚ್ಚುವರಿ ಚಾರ್ಜ್) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

HAL CMD ADDITIONAL CHARGE  D K SUNIL TAKES OVER AS HAL CMD  HINDUSTAN AERONAUTICS LIMITED  BENGALURU
ಹೆಚ್​ಎಎಲ್ ಸಿಎಂಡಿಯಾಗಿ ಅಧಿಕಾರ ವಹಿಸಿಕೊಂಡ ಡಾ ಸುನೀಲ್ (ETV Bharat)
author img

By ETV Bharat Karnataka Team

Published : Aug 31, 2024, 5:22 PM IST

ಬೆಂಗಳೂರು: ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕರಾದ ಡಾ. ಡಿ.ಕೆ.ಸುನಿಲ್ ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಹೆಚ್ಚುವರಿ ಚಾರ್ಜ್) ಸಿ.ಬಿ.ಅನಂತಕೃಷ್ಣನ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.

ಡಾ. ಸುನಿಲ್ ಅವರು 1987 ರಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಹೆಚ್.ಎ.ಎಲ್ ಸಂಸ್ಥೆಗೆ ಸೇರಿದ್ದರು. ಕಂಪನಿಯ ವಿವಿಧ ಹುದ್ದೆಗಳಲ್ಲಿ ಸುಮಾರು 37 ವರ್ಷ ಕಾರ್ಯನಿರ್ವಹಿಸಿದ್ದಾರೆ. ವಿನ್ಯಾಸ, ಉತ್ಪಾದನೆ, ಗುಣಮಟ್ಟ ಮತ್ತು ಇತರ ವಿಭಾಗಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.

HAL CMD Additional Charge  D K Sunil Takes Over as HAL CMD  Hindustan Aeronautics Limited  Bengaluru
ಹೆಚ್​ಎಎಲ್ ಸಿಎಂಡಿಯಾಗಿ ಅಧಿಕಾರ ವಹಿಸಿಕೊಂಡ ಡಾ ಸುನೀಲ್ (ETV Bharat)

ಅವರ ನಾಯಕತ್ವದಲ್ಲಿ ರಾಡಾರ್ ಪವರ್ ಸಪ್ಲೈ, ವಾಯ್ಸ್ ಆಕ್ಟಿವೇಟೆಡ್ ಕಂಟ್ರೋಲ್ ಸಿಸ್ಟಂ, ಕಂಬೈನ್ಡ್ ಇಂಟೆರೊಗೇಟರ್ ಟ್ರಾನ್ಸ್‌ಪಾಂಡರ್‌ನಂತಹ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಡೇಟಾಲಿಂಕ್‌ಗಳಿಗಾಗಿ ಐಐಟಿ ಕಾನ್ಪುರ ಮತ್ತು ಧ್ವನಿ ಗುರುತಿಸುವಿಕೆ ತಂತ್ರಜ್ಞಾನಗಳಿಗಾಗಿ ಐಐಐಟಿ ಹೈದರಾಬಾದ್‌ನಂತಹ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ಅವರು ವಹಿಸಿದ್ದಾರೆ. ಅವರ ದೂರದೃಷ್ಟಿಯು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಹೆಚ್.ಎ.ಎಲ್​ನ ಸ್ಥಾನವನ್ನು ಬಲಪಡಿಸಿದೆ.

ಬೆಂಗಳೂರಿನ ಮಿಷನ್ ಕಾಂಬ್ಯಾಟ್ ಸಿಸ್ಟಮ್ಸ್ ಆರ್ ಅಂಡ್ ಡಿ ಸೆಂಟರ್‌ನಲ್ಲಿನ ಅವರ ಅಧಿಕಾರಾವಧಿಯಲ್ಲಿ, ಆಕ್ಟಿವ್ ಇಎಸ್‌ಎ ರಡಾರ್, ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್‌ಸಿಹೆಚ್) ಮತ್ತು ಫೈಟರ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಮಿಷನ್ ಕಂಪ್ಯೂಟರ್‌ಗಳಂತಹ ಗ್ರೌಂಡ್ ಬ್ರೇಕಿಂಗ್ ಯೋಜನೆಗಳ ಮೇಲೆ ಕೇಂದ್ರೀಕರಿಸಿ ತಂಡಗಳನ್ನು ಮುನ್ನಡೆಸಿದ್ದಾರೆ.

ಅವರ ವಿನ್ಯಾಸ ಪರಿಣತಿಯು ವಿಮಾನ ಮತ್ತು ಹೆಲಿಕಾಪ್ಟರ್‌ಗಳೆರಡಕ್ಕೂ ಸಲಕರಣೆಗಳಿಂದ ಸಿಸ್ಟಮ್-ಮಟ್ಟದ ಯೋಜನೆಗಳವರೆಗೆ ಒಳಗೊಂಡಿದೆ. ವಿನ್ಯಾಸ ಕೇಂದ್ರಗಳಲ್ಲಿನ ಚಟುವಟಿಕೆಗಳ ಸಂಪೂರ್ಣ ಚಿತ್ರಣವನ್ನು ಬದಲಾಯಿಸಿದೆ. ಅವರ ಕಾರ್ಯತಂತ್ರದ ಮಾರ್ಗದರ್ಶನದಲ್ಲಿ, ಯಶಸ್ವಿಯಾಗಿ ಹೆಚ್.ಟಿ.ಟಿ 40 ವಿಮಾನ ಕಾರ್ಯಕ್ರಮ ಮುನ್ನಡೆದಿದೆ. ಭಾರತೀಯ ವಾಯುಪಡೆ ಮತ್ತು ಸೇನೆಗಾಗಿ ಸ್ವದೇಶಿ ಮಲ್ಟಿ-ರೋಲ್ ಹೆಲಿಕಾಪ್ಟರ್, ಮ್ಯಾರಿಟೈಮ್ ಯುಟಿಲಿಟಿ ಹೆಲಿಕಾಪ್ಟರ್ ನಂತಹ ಪ್ರಮುಖ ಯೋಜನೆಗಳು ಒಳಗೊಂಡಿದೆ.

ಡಾ. ಸುನಿಲ್ ಅವರು ಪೀರ್-ರಿವ್ಯೂಡ್ ಜರ್ನಲ್‌ಗಳಲ್ಲಿ ಏಳು ಪೇಪರ್‌ಗಳ ಪ್ರಕಟಣೆಯ ಮೂಲಕ ತಮ್ಮ ಜ್ಞಾನವನ್ನು ಸಮುದಾಯದೊಂದಿಗೆ ಹಂಚಿಕೊಂಡಿದ್ದಾರೆ. ವೈರ್‌ಲೆಸ್ ಸಂವಹನದಲ್ಲಿನ ಅವರ ಆವಿಷ್ಕಾರಗಳಲ್ಲಿ ಒಂಬತ್ತು ಹಕ್ಕುಸ್ವಾಮ್ಯಗಳನ್ನು ಹೊಂದಲಾಗಿದೆ ಮತ್ತು ಒಂದು ಪೇಟೆಂಟ್ ಪಡೆಯಲಾಗಿದೆ.

ಓದಿ: ಸೇನೆಗೆ ಆನೆ ಬಲದಂತಿರುವ Mi-17V5 ಹೆಲಿಕಾಪ್ಟರ್; ಇದರ ವೈಶಿಷ್ಟ್ಯತೆ ಹಲವು - IAF Mi17V5 helicopter

ETV Bharat Logo

Copyright © 2024 Ushodaya Enterprises Pvt. Ltd., All Rights Reserved.