ನವದೆಹಲಿ: ಡಿಜಿಟಲ್ ಬಂಧನ ಎಂಬುದು ಸೈಬರ್ ಅಪರಾಧಿಗಳ ಹೊಸ ರೀತಿ ಕಾರ್ಯಾಚರಣೆಯಾಗಿದೆ. ಈ ಕುರಿತು ಕಾನೂನು ಜಾರಿ ನಿರ್ದೇಶನಾಲಯ ಜಾಗೃತಿ ಅಭಿಯಾನ ಮೂಡಿಸಿದ ಬಳಿಕವೂ ಈ ಅಪರಾಧ ಕಾರ್ಯಾಚರಣೆ ದೊಡ್ಡ ತಲೆ ನೋವಾಗಿದೆ. ಈ ಅಪರಾಧದಲ್ಲಿ ಸೈಬರ್ ಕ್ರಿಮಿನಲ್‌ಗಳು ನಕಲಿ ಪೊಲೀಸ್ ಅಥವಾ ನಕಲಿ ಸಿಬಿಐ ಅಧಿಕಾರಿಗಳಂತೆ ನಟಿಸುವ ಮೂಲಕ ಆನ್‌ಲೈನ್‌ನಲ್ಲಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಈ ಕುರಿತು ನಾವು ಪರಿಶೀಲಿಸುತ್ತಿದ್ದೇವೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ನಿರ್ದೇಶಕ ನಿಶಾಂತ್ ಕುಮಾರ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಸೈಬರ್ ವಂಚನೆ ಮೂಲಕ ಜನರನ್ನು ಆರ್ಥಿಕವಾಗಿ ವಂಚಿಸುತ್ತಿರುವ ಪ್ರಕರಣಗಳು ದಾಖಲಾಗುತ್ತಿದೆ. ಈ ಹಿನ್ನೆಲೆ ಎಲ್ಲಾ ರೀತಿಯ ಸೈಬರ್ ಆರ್ಥಿಕ ವಂಚನೆ ಕುರಿತು ಪೊಲೀಸರಿಗೆ ತಕ್ಷಣಕ್ಕೆ ತಿಳಿಸಲು ಸರ್ಕಾರ 1930 ಎಂಬ ಟೋಲ್ ಫ್ರಿ ಸಂಖ್ಯೆ ಆರಂಭಿಸಿದ್ದು, ಇಲ್ಲಿ ಕೂಡ ದೂರು ಸಲ್ಲಿಸಬಹುದು. ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಮೋಸದ ಜಾಲಕ್ಕೆ ಬೀಳದಂತೆ ಜನರು ಕೂಡ ಅಗತ್ಯ ಎಚ್ಚರಿಕೆವಹಿಸಬೇಕಿದೆ. ಈ ಕುರಿತು ಅರಿವು ಹೊಂದುವುದು ಅಗತ್ಯವಾಗಿದೆ ಎಂದರು.
ಹೊಸ ರೀತಿ ವಂಚನೆ ಕಾರ್ಯಾಚರಣೆ: ಡಿಜಿಟಲ್ ಗೃಹ ಬಂಧನ ಸದ್ಯ ಸೈಬರ್ ಅಪರಾಧಿಗಳ ಹೊಸ ರೀತಿಯ ವಂಚನೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಸೈಬರ್ ಅಪರಾಧಿಗಳು ತಮ್ಮನ್ನು ಪೊಲೀಸ್ ಅಧಿಕಾರಿಗಳಂತೆ ಬಿಂಬಿಸಿಕೊಳ್ಳುತ್ತಾರೆ. ಅಲ್ಲದೇ ಅದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಿ, ಜನರು ನಂಬುವಂತೆ ಮಾಡುತ್ತಾರೆ ಎಂದು ಟಿಆರ್ಎಐ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತರ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಮುನ್ನ ಸಿಬಿಐ ಅಥವಾ ಕಸ್ಟಮ್ಸ್ ಅಧಿಕಾರಿಗಳಂತೆ ನಾಟಕವಾಡಿ ಅವರಲ್ಲಿ ಭಯ ಮೂಡಿಸಿ ಒತ್ತೆಯಾಳುವಾಗಿರಿಸಿಕೊಳ್ಳುತ್ತಾರೆ. ಇದಕ್ಕಾಗಿ ವಂಚಕರು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ನಕಲಿ ಸ್ಕೈಪ್ ಖಾತೆಗಳನ್ನು ಸೃಷ್ಟಿಸುತ್ತಾರೆ. ಬಳಿಕ ಸಂತ್ರಸ್ತರ ಬ್ಯಾಂಕ್ ಖಾತೆಗಳಿಂದ ಎಲ್ಲಾ ಹಣವನ್ನು ದೋಚುತ್ತಾರೆ.
ಇತ್ತೀಚಿನ ಡಿಜಿಟಲ್ ಗೃಹ ಬಂಧನ ಪ್ರಕರಣಗಳು: ಮಾರ್ಚ್ನಲ್ಲಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಉತ್ತರ ಪ್ರದೇಶದಲ್ಲಿ ನಿವೃತ್ತ ಅಧಿಕಾರಿ ಸೇರಿದಂತೆ ವಿವಿಧ ಜನರನ್ನು ವಂಚಿಸಿ, ಕೋಟ್ಯಾಂತರ ರೂ ಹಣವನ್ನು ದೋಚಲಾಗಿದೆ. ಉತ್ತರ ಪ್ರದೇಶದ ವಾರಣಾಸಿಯ ಸೈಬರ್ ಕ್ರೈಂ ಪೊಲೀಸರು ಈ ರೀತಿಯ ಡಿಜಿಟಲ್ ಗೃಹಬಂಧನ ವಂಚನೆಯಲ್ಲಿ ತೊಡಗಿದ್ದ ಎಂಟು ಅಪರಾಧಿಗಳನ್ನು ಬಂಧಿಸಿದ್ದಾರೆ. ಅವರ ಬಳಿ ಇದ್ದ 3.70 ಲಕ್ಷ ರೂಪಾಯಿ ಹಣ, ಮೊಬೈಲ್ ಫೋನ್‌ಗಳು, ಚೆಕ್‌ಬುಕ್‌ಗಳು ಮತ್ತು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ದಾಖಲೆಗಳ ಪ್ರಕಾರ, ಮಾರ್ಚ್ 8 ರಂದು ವಾರಣಾಸಿಯ ಸಿಗ್ರಾದ ಮೂಲದ ಶಂಪಾ ರಕ್ಷಿತ್ ಎಂಬುವವರಿಗೆ ಒಬ್ಬ ವ್ಯಕ್ತಿಯಿಂದ ಕರೆ ಮಾಡಿದ ವಂಚಕರು ತಮ್ಮನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಯಂತೆ ಬಿಂಬಿಸಿಕೊಂಡಿದ್ದಾರೆ,. ರಕ್ಷಿತ್ ತಮ್ಮ ನಂಬರ್ ಮೂಲಕ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಂಬಿಸಿದ್ದಾರೆ. ಬಳಿಕ ಮುಂಬೈನ ವಿಲೇ ಪಾರ್ಲೆ ಪೊಲೀಸ್ ಠಾಣೆಯ ಅಧಿಕಾರಿ ಎಂದು ಮತ್ತೊಂದು ಸಂಖ್ಯೆಯಿಂದ ಕರೆ ಮಾಡಿದ ವಂಚಕರು ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಈ ವೇಳೆ ರಕ್ಷಿತ್ ತಾವು ವರಣಾಸಿಯಲ್ಲಿರುವುದಾಗಿ ತಿಳಿಸಿದ ಹಿನ್ನಲೆ ಸ್ಕೈಪ್ ಅಪ್ ಡೌನ್ಲೋಡ್ ಮಾಡುವಂತೆ ಹೇಳಿ. ರಕ್ಷಿತ್ ಕುಟುಂಬದ ಮಾಹಿತಿ ಪಡೆದ, ವಿಚಾರಣೆ ಬಳಿಕ ಹಣ ಹಿಂದಿರುಗಿಸುವುದಾಗಿ ಹೇಳಿ 3.55 ಕೋಟಿಯನ್ನು ವಂಚಿಸಿದ್ದರು. ಈ ಪ್ರಕರಣ ಸಂಬಂಧ 8 ಮಂದಿ ಆರೋಪಿಯನ್ನು ಬಂಧಿಸಲಾಗಿತ್ತು. ಈ ರೀತಿಯ ಹಲವು ಪ್ರಕರಣಗಳು ದೇಶದ ವಿವಿಧ ರಾಜ್ಯಗಳ್ಲಲಿ ನಡೆಸಲಾಗಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ: ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು (I4C) ಗೃಹ ಸಚಿವಾಲಯವು ಸೈಬರ್ ಅಪರಾಧವನ್ನು ಸಂಘಟಿತ ಮತ್ತು ಸಮಗ್ರ ರೀತಿಯಲ್ಲಿ ವ್ಯವಹರಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಮಿತಿ ಮತ್ತು ಪರಿಸರ ವ್ಯವಸ್ಥೆಯನ್ನು ಒದಗಿಸಲು ಸ್ಥಾಪಿಸಿದೆ.
ಇತ್ತೀಚಿಗೆ 14ಸಿ ಸೈಬರ್ ಅಪರಾಧದ ಹಣಕಾಸಿನ ವಂಚನೆಯ ಸಂತ್ರಸ್ತರಿಗೆ ಸಹಾಯ ಮಾಡಲು 1930 ಎಂಬ ಟೋಲ್ ಫ್ರಿ ನಂಬರ್ ಆರಂಭಿಸಿದೆ. ಆಧುನಿಕ ತಂತ್ರಜ್ಞಾನಗಳಾದ ಡೀಪ್‌ಫೇಕ್ ತಂತ್ರಜ್ಞಾನದ ಬಳಕೆ ಮೂಲಕ ಸಂತ್ರಸ್ತರಿಗೆ ಧ್ವನಿ, ಇಮೇಜ್ ಬದಲಾಯಿಸಿ ವಾಟ್ಸಾಪ್ ಮೂಲಕ ಕರೆ ಮಾಡಿ ವಂಚನೆ ಎಸಗುವ ಪ್ರಕರಣಗಳು ಕಂಡು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಟ್ರೆಂಡ್‌ಗೆ ತಕ್ಕಂತೆ ಬದಲಾಗುತ್ತಿರುವ ಸೈಬರ್ ಅಪರಾಧಿಗಳು; ಅನಗತ್ಯ ಜಾಹೀರಾತುಗಳ ಬಗ್ಗೆ ಇರಲಿ ಎಚ್ಚರಿಕೆ