ETV Bharat / technology

ಆಳ ಸಮುದ್ರ ಅಧ್ಯಯನ: ಭಾರತದ 'ಮತ್ಸ್ಯ' ಸಬ್​ಮರಿನ್ ವರ್ಷಾಂತ್ಯಕ್ಕೆ ಸಿದ್ಧ

ಭಾರತದ ಆಳ ಸಮುದ್ರ ಅಧ್ಯಯನ ಯೋಜನೆಗಾಗಿ 'ಮತ್ಸ್ಯ6000' ಜಲಾಂತರ್ಗಾಮಿ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ ಎಂದು ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

Deep sea study India Matsya submarine ready by year end

author img

By PTI

Published : Mar 10, 2024, 6:13 PM IST

ನವದೆಹಲಿ: ಮುಂದಿನ ವರ್ಷದ ಅಂತ್ಯದ ವೇಳೆಗೆ 6 ಕಿ.ಮೀ ಕಡಲಾಳದಲ್ಲಿ ಅಧ್ಯಯನ ಮಾಡಲು ಸಮುದ್ರದಾಳಕ್ಕೆ ಭಾರತ ತನ್ನ ವಿಜ್ಞಾನಿಗಳನ್ನು ಕಳುಹಿಸಲಿದೆ ಎಂದು ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಪಿಟಿಐಗೆ ನೀಡಿದ ವೀಡಿಯೊ ಸಂದರ್ಶನದಲ್ಲಿ ಮಾತನಾಡಿದ ರಿಜಿಜು, "ಸಮುದ್ರದ ಅಡಿಯಲ್ಲಿ 6,000 ಮೀಟರ್ ಆಳದವರೆಗೆ ಮಾನವರನ್ನು ಕರೆದೊಯ್ಯುವ ಭಾರತದ ಆಳ ಸಾಗರ ಜಲಾಂತರ್ಗಾಮಿ ಮತ್ಸ್ಯ 6000 ನಿರ್ಮಾಣ ಕಾರ್ಯ ಉತ್ತಮವಾಗಿ ಸಾಗುತ್ತಿದ್ದು, ಈ ವರ್ಷಾಂತ್ಯದ ವೇಳೆಗೆ ಜಲಾಂತರ್ಗಾಮಿಯ ಪರೀಕ್ಷೆ ನಡೆಯಬಹುದು" ಎಂದು ಹೇಳಿದರು.

"ಸಮುದ್ರಯಾನ ಯೋಜನೆಯ ಬಗ್ಗೆ ಮಾತನಾಡುವುದಾದರೆ, ಇದು ಸಮುದ್ರದ ಒಳಗೆ 6 ಕಿ.ಮೀ ಅಂದರೆ 6000 ಮೀಟರ್ ಆಳಕ್ಕೆ ಇಳಿಯುವ ಯೋಜನೆಯಾಗಿದೆ. ಸೂರ್ಯನ ಬೆಳಕು ಸಹ ತಲುಪಲಾರದಷ್ಟು ಕಡಲಾಳ ಇದಾಗಿದೆ. ಇದಕ್ಕಾಗಿ ಮಾನವರನ್ನು ಕಡಲಾಳಕ್ಕೆ ಕರೆದೊಯ್ಯಬಲ್ಲ ಮತ್ಸ್ಯ ಜಲಾಂತರ್ಗಾಮಿ ಯಂತ್ರ ತಯಾರಿಕೆ ಯೋಜನೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ" ಎಂದು ಅವರು ತಿಳಿಸಿದರು.

ತಾವು ಸ್ವತಃ ಈ ಯೋಜನೆಯನ್ನು ಪರಿಶೀಲಿಸಿರುವುದಾಗಿ ಮತ್ತು ವಿಜ್ಞಾನಿಗಳು ಈ ವರ್ಷದ ಅಂತ್ಯದ ವೇಳೆಗೆ ಮೊದಲ ಆಳ ನೀರಿನ ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

"ಒಟ್ಟಾರೆಯಾಗಿ 2025 ರ ಅಂತ್ಯದ ವೇಳೆಗೆ ಅಂದರೆ ಮುಂದಿನ ವರ್ಷ, ನಾವು ನಮ್ಮ ಮಾನವ ಸಿಬ್ಬಂದಿಯನ್ನು 6,000 ಮೀಟರ್ ಗಿಂತ ಹೆಚ್ಚು ಆಳದ ಸಮುದ್ರಕ್ಕೆ ಕಳುಹಿಸಲು ಸಾಧ್ಯವಾಗಲಿದೆ" ಎಂದು ರಿಜಿಜು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಮುದ್ರಯಾನ ಅಥವಾ ಆಳ ಸಾಗರ ಅಧ್ಯಯನ ಯೋಜನೆಯನ್ನು 2021ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಮೂರು ಸದಸ್ಯರು ಪ್ರಯಾಣಿಸಲು ವಿನ್ಯಾಸಗೊಳಿಸಲಾದ ಮತ್ಸ್ಯ 6000 ಜಲಾಂತರ್ಗಾಮಿಯ ಮೂಲಕ ಮಧ್ಯ ಹಿಂದೂ ಮಹಾಸಾಗರದ 6,000 ಮೀಟರ್​ ಸಾಗರ ತಳಕ್ಕೆ ತಲುಪುವ ಗುರಿಯನ್ನು ಹೊಂದಲಾಗಿದೆ.

ಮತ್ಸ್ಯ ಜಲಾಂತರ್ಗಾಮಿ ನೌಕೆಯು ವೈಜ್ಞಾನಿಕ ಸಂವೇದಕಗಳು ಮತ್ತು ಉಪಕರಣಗಳಿಂದ ಸಜ್ಜಾಗಿರುತ್ತದೆ ಮತ್ತು ಸತತ 12 ಗಂಟೆಗಳ ಕಾಲ ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುತ್ತದೆ. ತುರ್ತು ಸಂದರ್ಭದಲ್ಲಿ ಈ ಅವಧಿಯನ್ನು 96 ಗಂಟೆಗಳವರೆಗೆ ವಿಸ್ತರಿಸಬಹುದು. ಇಲ್ಲಿಯವರೆಗೆ, ಯುಎಸ್, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಜಪಾನ್ ನಂತಹ ದೇಶಗಳು ಮಾತ್ರ ಆಳ ಸಮುದ್ರದ ಅಧ್ಯಯನ ನಡೆಸಲು ಯಶಸ್ವಿಯಾಗಿವೆ.

ಇದನ್ನೂ ಓದಿ: ಎರಡೂವರೆ ಸಾವಿರ ಕೋಟಿ ರೂ. ಫಂಡಿಂಗ್ ಸಂಗ್ರಹಿಸಿದ 27 ಸ್ಟಾರ್ಟ್​ಅಪ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.