ETV Bharat / technology

ಆಳ ಸಮುದ್ರ ಗಣಿಗಾರಿಕೆ: ಸಾಧಕ-ಬಾಧಕಗಳ ಬಗ್ಗೆ ನಡೆಯಬೇಕಿದೆ ವ್ಯಾಪಕ ಸಂಶೋಧನೆ - Deep Sea Mining - DEEP SEA MINING

ಆಳ ಸಮುದ್ರ ಗಣಿಗಾರಿಕೆಯ ಬಗೆಗಿನ ಸಾಧಕ ಬಾಧಕಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.

Deep sea mining pros and cons to extensive research

author img

By ETV Bharat Karnataka Team

Published : Apr 7, 2024, 5:00 AM IST

ಪ್ರಮುಖ ಲೋಹದ ಅಂಶಗಳನ್ನು ದೊಡ್ಡ ಪ್ರಮಾಣದಲ್ಲಿ ಒಳಗೊಂಡಿರುವ, ಸಮುದ್ರ ತಳದ ವಿಶಾಲ ಪ್ರದೇಶಗಳಲ್ಲಿ ಹರಡಿಕೊಂಡಿರುವ ಪಾಲಿಮೆಟಾಲಿಕ್ ನಾಡ್ಯೂಲ್ ಗಳ ಗಣಿಗಾರಿಕೆಯು ಇತ್ತೀಚೆಗೆ ಬಹಳ ಪ್ರಾಮುಖ್ಯತೆ ಪಡೆಯುತ್ತಿದೆ. ಹಸಿರು ಇಂಧನ ಆರ್ಥಿಕತೆಗೆ ಪರಿವರ್ತನೆಗೊಳ್ಳುವ ನಿಟ್ಟಿನಲ್ಲಿ ಈ ಆಳಸಮುದ್ರ ಗಣಿಗಾರಿಕೆಯು ಇಂದಿನ ಅಗತ್ಯವಾಗಿದೆ. ವಿಶ್ವದ ಅನೇಕ ದೇಶಗಳಂತೆ ಭಾರತವು ಹಿಂದೂ ಮಹಾಸಾಗರದ ಆಳದಲ್ಲಿ ಸಕ್ರಿಯವಾಗಿ ಗಣಿಗಾರಿಕೆ ನಡೆಸುವ ಉದ್ದೇಶ ಹೊಂದಿದೆ.

ಕಳೆದ ತಿಂಗಳು ಜಮೈಕಾದ ಕಿಂಗ್​ಸ್ಟನ್​ನಲ್ಲಿ ನಡೆದ ಯುಎನ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀ ಅಡಿಯಲ್ಲಿ ಅಂತರರಾಷ್ಟ್ರೀಯ ಮೇಲ್ವಿಚಾರಣಾ ಸಂಸ್ಥೆಯಾದ ಇಂಟರ್​ನ್ಯಾಷನಲ್ ಸೀಬೆಡ್ ಅಥಾರಿಟಿ (ಐಎಸ್ಎ) ಅಧಿವೇಶನದಲ್ಲಿ ಭಾರತೀಯ ಪ್ರತಿನಿಧಿಗಳು ಈ ಬಗ್ಗೆ ತಮ್ಮ ಪ್ರಸ್ತಾಪವನ್ನು ಮಂಡಿಸಿದರು.

ಕಡಿಮೆ ಇಂಗಾಲ ಹೊರಸೂಸುವ ಇಂಧನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಭಾಗವಾಗಿ ಬ್ಯಾಟರಿಗಳ ತಯಾರಿಕೆಗೆ ಹೆಚ್ಚು ಅಗತ್ಯವಿರುವ ಲೋಹಗಳಾದ ಕೋಬಾಲ್ಟ್, ಮ್ಯಾಂಗನೀಸ್ ಮತ್ತು ನಿಕ್ಕಲ್​ನ ವಾಣಿಜ್ಯ ಗಣಿಗಾರಿಕೆಗೆ ಮಾರ್ಗಸೂಚಿಗಳನ್ನು ಚರ್ಚಿಸಲು ಮತ್ತು ರೂಪಿಸಲು ಮಾರ್ಚ್​ನಲ್ಲಿ ಈ ಸಭೆ ನಡೆಸಲಾಯಿತು.

ಯಾವುದೇ ದೇಶದ ಕಡಲ ಗಡಿಯು 200 ನಾಟಿಕಲ್ ಮೈಲಿಗಳವರೆಗೆ ಮಾತ್ರ ಇರುತ್ತದೆ ಮತ್ತು ಈ ಮಿತಿಯನ್ನು ಮೀರಿ ವಿಸ್ತರಿಸಿದ ನೀರು ಅಂತರರಾಷ್ಟ್ರೀಯ ಕಡಲ ಜಲಪ್ರದೇಶದ ಭಾಗವಾಗಿರುತ್ತದೆ. ಈ ಪ್ರದೇಶದಲ್ಲಿ ಯಾವುದೇ ದೇಶಗಳು ಆ ಭೂಪ್ರದೇಶ ಅಥವಾ ಅಲ್ಲಿನ ಸಮುದ್ರ ಸಂಪನ್ಮೂಲಗಳ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಅಂತರರಾಷ್ಟ್ರೀಯ ನಿಯಮಗಳು ಹೇಳುತ್ತವೆ. ಹೀಗಾಗಿ ಇಂಥ ಸಮುದ್ರ ಪ್ರದೇಶದಲ್ಲಿ ಪರಿಶೋಧನೆ ಮತ್ತು ಗಣಿಗಾರಿಕೆಗೆ ನಡೆಸಬೇಕಾದರೆ ಎಲ್ಲಾ ದೇಶಗಳು ಐಎಸ್ಎನಿಂದ ಅನುಮತಿ ಪಡೆಯುವುದು ಅಗತ್ಯವಾಗಿರುತ್ತದೆ.

ವಾಣಿಜ್ಯ ಗಣಿಗಾರಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ಈ ವರ್ಷದ ಅಂತ್ಯದ ವೇಳೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ. 2010 ರವರೆಗೆ, 300 ರಿಂದ 6500 ಮೀಟರ್ ನೀರಿನ ಆಳದಲ್ಲಿ ಸಮುದ್ರದ ತಳದ ಖನಿಜ ಪರಿಶೋಧನೆಯನ್ನು ದೇಶ-ನಿರ್ದಿಷ್ಟ ಸರ್ಕಾರಿ ಸಂಸ್ಥೆಗಳು ಮಾತ್ರ ನಡೆಸುತ್ತಿದ್ದವು ಮತ್ತು ಅಂದಿನಿಂದ ಅನೇಕ ಖಾಸಗಿ ಕಂಪನಿಗಳು ಇಂಥ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿವೆ.

ಸಮುದ್ರದ ತಳದ ಅನ್ವೇಷಣೆಯಲ್ಲಿ ಮುಂಚೂಣಿಯಲ್ಲಿರುವ ಮತ್ತೊಂದು ದೇಶ ಚೀನಾ ಆಗಿದೆ. ಇದು ಆಳ ಸಮುದ್ರದ ಖನಿಜ ಸಂಪನ್ಮೂಲಗಳ ಗಣಿಗಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಐಎಸ್ಎಯಿಂದ ಪರವಾನಗಿ ಪಡೆದ ನಂತರ ಪಾಲಿಮೆಟಾಲಿಕ್ ನಾಡ್ಯೂಲ್​ಗಳಿಗಾಗಿ ಭಾರತವು ಈ ಪ್ರದೇಶಗಳಲ್ಲಿ ಪರಿಶೋಧನೆ ನಡೆಸಲು ಸಾಧ್ಯವಾಗಿದೆ. ಆದಾಗ್ಯೂ ವಾಣಿಜ್ಯ ಬಳಕೆಗೆ ಈ ಅನುಮತಿ ಅನ್ವಯವಾಗುವುದಿಲ್ಲ.

ಇದು ಪಶ್ಚಿಮ ಕರಾವಳಿಯಲ್ಲಿರುವ ಕಾರ್ಲ್ಸ್ ಬರ್ಗ್ ರಿಡ್ಜ್ ಮತ್ತು ಹಿಂದೂ ಮಹಾಸಾಗರದ ಪೂರ್ವ ಭಾಗದಲ್ಲಿರುವ ಅಫಾನಾಸಿ-ನಿಕಿಟಿನ್ ಸೀಮೌಂಟ್ ಸುತ್ತಲೂ ಆಳ ಸಮುದ್ರದ ತಳವನ್ನು ಗಣಿಗಾರಿಕೆ ಮಾಡುವ ಗುರಿಯನ್ನು ಹೊಂದಿದೆ. ಈ ಪ್ರದೇಶವು ಕೋಬಾಲ್ಟ್ ಹೊಂದಿರುವ ಫೆರೋಮ್ಯಾಂಗನೀಸ್ ನಾಡ್ಯೂಲ್​ಗಳಿಂದ ಸಮೃದ್ಧವಾಗಿದೆ ಎಂದು ಪರಿಗಣಿಸಲಾಗಿದೆ.

ಸುಮಾರು 400 ಕಿ.ಮೀ ಉದ್ದ ಮತ್ತು 150 ಕಿ.ಮೀ ಅಗಲವಿರುವ ಈ ಸಮುದ್ರ ಪರ್ವತವು ಮಧ್ಯ ಭಾರತದ ಜಲಾನಯನ ಪ್ರದೇಶದಲ್ಲಿದೆ. ಇದು ಶ್ರೀಲಂಕಾದ ಆಗ್ನೇಯಕ್ಕೆ, ಸಮಭಾಜಕ ವೃತ್ತದ ಕೆಳಗೆ ಇದ್ದು, ಸುಮಾರು 80 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿದೆ. ಪಶ್ಚಿಮ ಭಾಗದಲ್ಲಿರುವ ಕಾರ್ಲ್ಸ್ ಬರ್ಗ್ ರಿಡ್ಜ್ ಆಫ್ರಿಕನ್ ಮತ್ತು ಭಾರತೀಯ ಫಲಕಗಳ ನಡುವಿನ ಸಕ್ರಿಯ ಟೆಕ್ಟೋನಿಕ್ ಗಡಿಯಾಗಿದ್ದು, ಸಮುದ್ರದ ತಳ ಹರಡಲು ಅನುಕೂಲ ಮಾಡಿಕೊಡುತ್ತದೆ.

ಕಾರ್ಲ್ಸ್ ಬರ್ಗ್ ರಿಡ್ಜ್ ನಂತಹ ಮಧ್ಯ-ಸಾಗರ ಶ್ರೇಣಿಗಳಲ್ಲಿ ಮತ್ತು ಅಫಾನಾಸಿ-ನಿಕಿಟಿನ್ ಸೀಮೌಂಟ್​ನಂತೆ ನೀರಿನೊಳಗಿನ ಜ್ವಾಲಾಮುಖಿ ಸಕ್ರಿಯವಾಗಿದ್ದ ಪ್ರದೇಶಗಳಲ್ಲಿ ಪಾಲಿಮೆಟಾಲಿಕ್ ನಾಡ್ಯೂಲ್​ಗಳು ರೂಪುಗೊಂಡವು. ಅಂತಹ ಟೆಕ್ಟೋನಿಕಲ್ ಸಕ್ರಿಯ ಪ್ರದೇಶಗಳು ಖನಿಜ ಸಮೃದ್ಧ ಬಿಸಿ ನೀರನ್ನು ಆಳವಾದ ಬಿರುಕುಗಳ ಮೂಲಕ ಹೊರಹಾಕುತ್ತವೆ ಮತ್ತು ಖನಿಜ ನಿಕ್ಷೇಪಗಳನ್ನು ಉತ್ಪಾದಿಸುತ್ತವೆ. ಸಮುದ್ರದ ನೀರು ಮತ್ತು ಬಿರುಕು-ಮೂಲದ ನೀರಿನ ನಡುವಿನ ಮಿಶ್ರಣ ಮತ್ತು ಸಂಕೀರ್ಣ ರಾಸಾಯನಿಕ ಪ್ರಕ್ರಿಯೆಗಳು ಖನಿಜೀಕರಣಕ್ಕೆ ಕಾರಣವಾಗುತ್ತವೆ.

ಬ್ಯಾಟರಿಗಳನ್ನು ತಯಾರಿಸಲು ಕೈಗಾರಿಕಾ ವಲಯಗಳಿಂದ ಹೆಚ್ಚು ಬೇಡಿಕೆಯಿರುವ ಮೇಲೆ ತಿಳಿಸಲಾದ ಖನಿಜಗಳ ನೆಲದ ಗಣಿಗಾರಿಕೆಯು ಟೀಕೆಗೆ ಒಳಗಾಗಿದೆ. ಕಾಂಗೋ ಮತ್ತು ಜಾಂಬಿಯಾದಂತಹ ದೇಶಗಳಲ್ಲಿ ಈ ಖನಿಜಗಳ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಮತ್ತು ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ನೆಲದ ಮೇಲಿನ ನಿಕ್ಷೇಪಗಳಿಗೆ ಹೋಲಿಸಿದರೆ, ಆಳ ಸಮುದ್ರದ ನಾಡ್ಯೂಲ್​ಗಳು ನಿಕ್ಕಲ್, ತಾಮ್ರ, ಮ್ಯಾಂಗನೀಸ್, ಕೋಬಾಲ್ಟ್, ಟೈಟಾನಿಯಂ ಮತ್ತು ಲಿಥಿಯಂ ಸೇರಿದಂತೆ ಒಂದೇ ನಿಕ್ಷೇಪದಲ್ಲಿ ಅನೇಕ ಖನಿಜಗಳನ್ನು ಹೊಂದಿರುತ್ತವೆ.

ಸಮುದ್ರ-ಆಧಾರಿತ ಗಣಿಗಾರಿಕೆಯು ಮುಖ್ಯವಾಗಿ ಸಮುದ್ರದ ತಳದಲ್ಲಿ ರೊಬೊಟಿಕ್ ಸಂಗ್ರಾಹಕ ಯಂತ್ರಗಳು, ಲಂಬ ಲಿಫ್ಟ್ ವ್ಯವಸ್ಥೆಗಳು, ಮೇಲ್ಮೈ ಗಣಿಗಾರಿಕೆ ಹಡಗುಗಳು, ಬೃಹತ್ ವಾಹಕಗಳು ಮತ್ತು ಕರಾವಳಿಯ ಸಂಸ್ಕರಣಾ ಘಟಕಗಳನ್ನು ಒಳಗೊಂಡಿದೆ. ಹೀಗಾಗಿ ಇದು ಭೂ-ಆಧಾರಿತ ಗಣಿಗಾರಿಕೆಗಿಂತ ಅನೇಕ ಗುಣಲಕ್ಷಣಗಳಲ್ಲಿ ಭಿನ್ನವಾಗಿದೆ. ಆದ್ದರಿಂದ ತಂತ್ರಗಳು ಮತ್ತು ಕಾರ್ಯವಿಧಾನಗಳಲ್ಲಿನ ಅಂತಹ ವ್ಯತ್ಯಾಸಗಳು ಆಳ-ಸಾಗರ ಗಣಿಗಾರಿಕೆಯು ಹೆಚ್ಚು ಪರಿಸರ ಸುಸ್ಥಿರವಾಗಿರುತ್ತದೆಯೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.

ಆಳ ಸಮುದ್ರದ ಗಣಿಗಾರಿಕೆಯು ಈಗಾಗಲೇ ಒತ್ತಡದಲ್ಲಿರುವ ದುರ್ಬಲ ಸಾಗರ ಪರಿಸರ ವ್ಯವಸ್ಥೆಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುವುದಿಲ್ಲ ಎಂದು ದೃಢೀಕರಿಸಲು ಇನ್ನೂ ಸಾಕಷ್ಟು ಅಧ್ಯಯನಗಳು ನಡೆದಿಲ್ಲ. ಇಂತಹ ಸಮಸ್ಯೆಗಳನ್ನು ಪರಿಗಣಿಸಿ, ಸುಮಾರು 25 ದೇಶಗಳು ಗಣಿಗಾರಿಕೆಯ ಪರಿಣಾಮದ ಪ್ರಮಾಣವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರೆಗೆ ಗಣಿಗಾರಿಕೆಯನ್ನು ನಿಷೇಧಿಸಲು ಕರೆ ನೀಡಿವೆ.

ನೇಚರ್ ಎಂಬ ವಿಜ್ಞಾನ ನಿಯತಕಾಲಿಕದ 26 ಮಾರ್ಚ್ 2024 ರ ಸಂಪಾದಕೀಯದಲ್ಲಿ ಎತ್ತಲಾದ ಪ್ರಮುಖ ಪ್ರಶ್ನೆ ಹೀಗಿದೆ- "ಅಪರೂಪದ ಲೋಹಗಳ ವ್ಯಾಪಕ ಪರಿಣಾಮಗಳ ಬಗ್ಗೆ ಬಹಳ ಕಡಿಮೆ ತಿಳಿದಿರುವಾಗ ಕಂಪನಿಗಳು ಮತ್ತು ಸರ್ಕಾರಗಳು ವಾಣಿಜ್ಯ ಪ್ರಮಾಣದ ಗಣಿಗಾರಿಕೆಯನ್ನು ಪ್ರಾರಂಭಿಸಲು ಏಕೆ ನಿರ್ಧರಿಸಿವೆ?"

ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ ಮತ್ತು ಕೆಲವು ಖಾಸಗಿ ಗಣಿಗಾರಿಕೆ ಕಂಪನಿಗಳು ಮುಂದಿನ ವರ್ಷದ ವೇಳೆಗೆ ಸಾಧ್ಯವಾದರೆ ಗಣಿಗಾರಿಕೆಗಾಗಿ ಆಳ ಸಮುದ್ರದ ತಳಗಳ ಉತ್ಖನನವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿವೆ.

ಜೇಮ್ಸ್ ಆರ್. ಹೇನ್, ಆಂಡ್ರಿಯಾ ಕೊಸ್ಕಿನ್ಸ್ಕಿ ಮತ್ತು ಥಾಮಸ್ ಕುಹ್ನ್ ಅವರು ನೇಚರ್ ರಿವ್ಯೂಸ್, ಅರ್ಥ್ & ಎನ್ವಿರಾನ್ಮೆಂಟ್​ನಲ್ಲಿ 2020 ರ ಫೆಬ್ರವರಿ 24 ರಂದು ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ ವಿವರಿಸಿದಂತೆ, ವಿಜ್ಞಾನಿಗಳು ಪ್ರತಿಪಾದಿಸುವುದೇನೆಂದರೆ, ಆಳ ಸಮುದ್ರದ ಗಣಿಗಾರಿಕೆಯಿಂದ ಪರಿಣಾಮ ಬೀರುವ ಸಾಗರ ಪರಿಸರ ವ್ಯವಸ್ಥೆಗಳ ಬಗ್ಗೆ ಸುಧಾರಿತ ತಿಳುವಳಿಕೆಯ ಅಗತ್ಯವಿದೆ. ಆಳ ಸಮುದ್ರ ಸಂಪನ್ಮೂಲಗಳ ವಾಣಿಜ್ಯ ಬಳಕೆಗಾಗಿ ನಿಯಮಗಳನ್ನು ಸಿದ್ಧಪಡಿಸುವಲ್ಲಿ ಶ್ರದ್ಧೆಯ ಕೊರತೆಯ ಬಗ್ಗೆ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಪಾಲಿಮೆಟಾಲಿಕ್ ನಾಡ್ಯೂಲ್ ಗಳ ಗಣಿಗಾರಿಕೆಯು ಜೈವಿಕ ಮತ್ತು ಭೂರಾಸಾಯನಿಕ ಪರಿಣಾಮಗಳನ್ನು ಬೀರುತ್ತದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಹಡಗು ಮತ್ತು ಸಾಗಣೆಗೆ ಬಳಸುವ ಇಂಧನ ತೈಲವು ಹಸಿರುಮನೆ ಅನಿಲಗಳು ಮತ್ತು ವಾಯುಮಾಲಿನ್ಯದ ಬಿಡುಗಡೆಗೆ ಕಾರಣವಾಗಬಹುದು. ಇದಲ್ಲದೆ, ಗಣಿಗಾರಿಕೆ ಹಡಗಿನಿಂದ ಅದಿರಿನ ಆನ್ ಬೋರ್ಡ್ ಡಿವಾಟರಿಂಗ್ ಪ್ರಕ್ರಿಯೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮತ್ತೆ ಸಮುದ್ರಕ್ಕೆ ಬಿಡುಗಡೆ ಮಾಡುವುದರಿಂದ ಉಂಟಾಗುವ ಪರಿಣಾಮದ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗಿದೆ.

ತೆರೆದ ಸಾಗರ ಪ್ರಾಣಿಗಳ ಮೇಲೆ ದೀರ್ಘಕಾಲೀನ ಆಳ ಸಾಗರ ಗಣಿಗಾರಿಕೆಯ ಸಂಭಾವ್ಯ ಪರಿಣಾಮವನ್ನು ಇಲ್ಲಿಯವರೆಗೆ ಪರಿಹರಿಸಲಾಗಿಲ್ಲ ಎಂದು 2020 ರ ಸಂಶೋಧನಾ ಲೇಖನವು ಎಚ್ಚರಿಸಿದೆ. ಸೂಕ್ಷ್ಮ ಆಳ ಸಾಗರ ಪರಿಸರ ವ್ಯವಸ್ಥೆಗಳ ಮೇಲೆ ಸಮುದ್ರ-ತಳದ ಗಣಿಗಾರಿಕೆಯ ಪರಿಣಾಮದ ಪ್ರಮಾಣ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸುವ ಪರಿಶೋಧನೆ, ಗಣಿಗಾರಿಕೆ ಮತ್ತು ಸಂಸ್ಕರಣೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ಹಸಿರು ತಂತ್ರಜ್ಞಾನಗಳ ಸ್ಥಿತಿಯ ಬಗ್ಗೆ ನಮಗೆ ಉತ್ತರಗಳು ಸಿಗದ ಹೊರತು, ಸಮುದ್ರ ತಳದ ಗಣಿಗಾರಿಕೆ ಉದ್ಯಮಕ್ಕೆ ಪರವಾನಗಿಗಳನ್ನು ಒದಗಿಸುವ ಬಗ್ಗೆ ನಾವು ನಿರ್ಧರಿಸಲು ಸಾಧ್ಯವಿಲ್ಲ.

ಅಂತಹ ಸಂಭಾವ್ಯ ವಾಣಿಜ್ಯ ಕಾರ್ಯಾಚರಣೆಗಳ ಪರಿಣಾಮದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳುವುದು ಮತ್ತು ಪರಿಸರ ಪರಿಣಾಮಗಳನ್ನು ಕಡಿಮೆ ಮಾಡುವ ಮಾರ್ಗಗಳನ್ನು ಕಂಡುಹಿಡಿಯುವುದು ಸಮಯದ ಅಗತ್ಯವಾಗಿದೆ. ಆಳ ಸಮುದ್ರದ ಗಣಿಗಾರಿಕೆಯ ಕಠಿಣ ಅಪಾಯದ ಮೌಲ್ಯಮಾಪನಗಳನ್ನು ನಡೆಸುವ ಮೂಲಕ ಮತ್ತು ವಿವಿಧ ವೇದಿಕೆಗಳ ಮೂಲಕ ಫಲಿತಾಂಶಗಳನ್ನು ಸಂವಹನ ಮಾಡುವ ಮೂಲಕ ಮಾತ್ರ ಇದನ್ನು ಮಾಡಬಹುದು. ಅಲ್ಲಿಯವರೆಗೆ, ಆಳ ಸಮುದ್ರ ಗಣಿಗಾರಿಕೆ ಚಟುವಟಿಕೆಗಳಿಗೆ ಪರವಾನಗಿ ನೀಡುವ ಬಗ್ಗೆ ಐಎಸ್ಎ ಅವಸರ ಮಾಡಬಾರದು.

ಲೇಖನ : ಸಿಪಿ ರಾಜೇಂದ್ರನ್, ಸಹಾಯಕ ಪ್ರಾಧ್ಯಾಪಕರು, ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಬೆಂಗಳೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.