ETV Bharat / technology

ಬಾಹ್ಯಾಕಾಶ ನಿಲ್ದಾಣಕ್ಕೆ ಮರುಪೂರಣ ಸಾಮಗ್ರಿ ಹೊತ್ತ 'ಸಿಗ್ನಸ್​' ನೌಕೆ ಇಂದು ರಾತ್ರಿ ಉಡಾವಣೆ - International Space Station

author img

By ETV Bharat Karnataka Team

Published : Aug 4, 2024, 12:50 PM IST

ಬಾಹ್ಯಾಕಾಶ ನಿಲ್ದಾಣಕ್ಕೆ ಅಗತ್ಯವಿರುವ ಸಾಮಗ್ರಿ ಹೊತ್ತ ನೌಕೆ ಇಂದು ರಾತ್ರಿ ಉಡಾವಣೆಯಾಗಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಗತ್ಯವಿರುವ ಸರಕು ಸಾಮಗ್ರಿ ತಲುಪಿಸುವ ನೌಕೆಯು ಭಾನುವಾರ ಬೆಳಗ್ಗೆ 11:02ಕ್ಕೆ (ಭಾರತೀಯ ಕಾಲಮಾನ ರಾತ್ರಿ 8:30) ಉಡಾವಣೆಯಾಗಲಿದೆ. ನಾಸಾ, ನಾರ್ತ್​ರೋಪ್ ಗ್ರಮ್ಮನ್ ಮತ್ತು ಸ್ಪೇಸ್ಎಕ್ಸ್ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ನೌಕೆ ಉಡಾವಣೆಯಾಗಲಿದೆ.

ಬಾಹ್ಯಾಕಾಶದಲ್ಲಿ ಪರಿಭ್ರಮಣೆ ಮಾಡುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ, ನಾರ್ತ್​ರೋಪ್ ಗ್ರಮ್ಮನ್ ನೌಕೆಯ ಮೂಲಕ ಅಗತ್ಯ ಸರಕು ಸಾಮಗ್ರಿ ಕಳುಹಿಸುವ ನಾಸಾದ 21ನೇ ವಾಣಿಜ್ಯ ಉಡಾವಣೆ ಇದಾಗಿದೆ.

8200 ಪೌಂಡ್​ ತೂಕದಷ್ಟು ಅಗತ್ಯ ಸಾಮಗ್ರಿ ಒಳಗೊಂಡಿರುವ ನಾರ್ತ್​ರೋಪ್ ಗ್ರಮ್ಮನ್ ಸಿಗ್ನಸ್​ ಬಾಹ್ಯಾಕಾಶ ನೌಕೆಯು, ಸ್ಪೇಸ್​ ಎಕ್ಸ್​ ಫಾಲ್ಕನ್ 9 ರಾಕೆಟ್​ ಮೂಲಕ ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದ ಬಾಹ್ಯಾಕಾಶ ಉಡಾವಣಾ ಸಂಕೀರ್ಣ 40 ರಿಂದ ಉಡಾವಣೆಯಾಗಲಿದೆ.

ಸಿಗ್ನಸ್ ಎರಡು ಮಾಡ್ಯೂಲ್​ಗಳನ್ನು ಒಳಗೊಂಡಿದೆ- ಒಂದು ಸೇವಾ ಮಾಡ್ಯೂಲ್ ಮತ್ತು ಇನ್ನೊಂದು ಒತ್ತಡದ ಸರಕು ಮಾಡ್ಯೂಲ್. ಸೇವಾ ಮಾಡ್ಯೂಲ್ ಇದು ನಾರ್ತ್​ರೋಪ್ ಗ್ರಮ್ಮನ್ ಅಭಿವೃದ್ಧಿಪಡಿಸಿದ ಇತ್ತೀಚಿನ ವಾಯುಯಾನ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಈ ರೀತಿಯ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುವ ಮಾರ್ಗದರ್ಶನ, ನ್ಯಾವಿಗೇಷನ್ ಘಟಕಗಳನ್ನು ಹೊಂದಿದೆ. ಇನ್ನು ಒತ್ತಡದ ಸರಕು ಮಾಡ್ಯೂಲ್ ಸಿಬ್ಬಂದಿಗೆ ಅಗತ್ಯವಿರುವ ವಸ್ತುಗಳು, ಉಪಕರಣಗಳು ಮತ್ತು ಭೂಮಿಯ ಕೆಳ ಕಕ್ಷೆಯಲ್ಲಿ ಬರುವ ಸ್ಥಳಗಳಲ್ಲಿ ಬೇಕಾಗುವ ಪ್ರಯೋಗ ಉಪಕರಣಗಳನ್ನು ಸಾಗಿಸುತ್ತದೆ.

ನಾಸಾದ ದಿವಂಗತ ಗಗನಯಾತ್ರಿ ರಿಚರ್ಡ್ 'ಡಿಕ್' ಸ್ಕೋಬಿ ಅವರ ಗೌರವಾರ್ಥವಾಗಿ, ಈ ಬಾಹ್ಯಾಕಾಶ ನೌಕೆಗೆ ಎಸ್.ಎಸ್.ಫ್ರಾನ್ಸಿಸ್ ಆರ್. 'ಡಿಕ್' ಸ್ಕೋಬಿ ಎಂದು ಹೆಸರಿಡಲಾಗಿದೆ. ಎಸ್.ಎಸ್.ಫ್ರಾನ್ಸಿಸ್ ಆರ್. 'ಡಿಕ್' ಸ್ಕೋಬಿ ಇವರು ವಿಯೆಟ್ನಾಂ ಯುದ್ಧದಲ್ಲಿ ಹೋರಾಡಿದ್ದರು ಮತ್ತು 1978ರ ಎಸ್ ಟಿಎಸ್ 41-ಸಿ ಮಿಷನ್​ನ ಸದಸ್ಯರಾಗಿದ್ದರು. ಅವರು 1986ರ ಚಾಲೆಂಜರ್ ಬಾಹ್ಯಾಕಾಶ ಮಿಷನ್​ನ ಕಮಾಂಡರ್ ಆಗಿದ್ದರು.

ಆದರೆ ಅವರ ನೌಕೆ ಸ್ಫೋಟಗೊಂಡಿದ್ದರಿಂದ ಅವರು ಮತ್ತು ಅವರ ಸಿಬ್ಬಂದಿ ಬಾಹ್ಯಾಕಾಶದಲ್ಲಿಯೇ ಮೃತಪಟ್ಟಿದ್ದರು. 2004ರಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರಿಗೆ ಮರಣೋತ್ತರವಾಗಿ ಕಾಂಗ್ರೆಷನಲ್ ಸ್ಪೇಸ್ ಮೆಡಲ್ ಆಫ್ ಹಾನರ್ ನೀಡಿ ಗೌರವಿಸಿದ್ದರು. ಜನವರಿ 9, 2014ರಂದು ಸಿಗ್ನಸ್​ನ ಮೊದಲ ಉಡಾವಣೆ ನಡೆದಿತ್ತು. ಇದಕ್ಕೆ 2013ರಲ್ಲಿ ನಿಧನರಾದ ಗಗನಯಾತ್ರಿ ಸಿ. ಗಾರ್ಡನ್ ಫುಲ್ಲರ್ಟನ್ ಅವರ ಹೆಸರನ್ನು ಇಡಲಾಗಿತ್ತು.

ಇದನ್ನೂ ಓದಿ: ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಗಗನಯಾತ್ರಿ: ಇಸ್ರೊ & ನಾಸಾ ಜಂಟಿ ಒಪ್ಪಂದ - Gaganyaan mission

ETV Bharat Logo

Copyright © 2024 Ushodaya Enterprises Pvt. Ltd., All Rights Reserved.