ನವದೆಹಲಿ: ಭಾರತದ ಪ್ರಮುಖ ಟ್ಯಾಕ್ಸಿ ಸೇವೆ ಸಂಸ್ಥೆಯಾಗಿರುವ ಓಲಾ ಇದೀಗ ಗೂಗಲ್ ಮ್ಯಾಪ್ನಿಂದ ಹೊರ ನಡೆದಿದೆ. ಇನ್ಮುಂದೆ ತನ್ನ ಕ್ಯಾಬ್ ಕಾರ್ಯಾಚರಣೆಯ ಸ್ಥಳ ಪತ್ತೆಗೆ ಅದು ತನ್ನದೇ ಆಂತರಿಕ (ಇನ್ ಔಸ್) ಓಲಾ ಮ್ಯಾಪ್ ಅನ್ನು ಅವಲಂಬಿಸಲಿದೆ. ಈ ಕುರಿತು ಮಾತನಾಡಿರುವ ಓಲಾ ಸಂಸ್ಥಾಪಕ ಭವೇಶ್ ಅಗರ್ವಾಲ್, ಗೂಗಲ್ ಮ್ಯಾಪ್ನಿಂದ ಹೊರ ಬಂದಿರುವ ನಡೆಯಿಂದಾಗಿ ಇನ್ಮುಂದೆ ಕಂಪನಿ ವರ್ಷಕ್ಕೆ ಸುಮಾರು 100 ಕೋಟಿ ಉಳಿತಾಯವಾಗಲಿದೆ ಎಂದಿದ್ದಾರೆ.
ತಿಂಗಳ ಹಿಂದಷ್ಟೇ ಮೈಕ್ರೋಸಾಫ್ಟ್ನ ಕ್ಲೌಡ್ ಕಂಪ್ಯೂಟಿಂಗ್ ಫ್ಲಾಟ್ಫಾರ್ಮ್ ಆಗಿದ್ದ ಅಜೂರ್ ನಿಂದ ಹೊರ ನಡೆದಿತ್ತು. ತನ್ನದೇ ಸ್ವಂತ ಎಐ ಘಟಕವಾದ ಕ್ರುಟ್ರಿಮ್ ಕ್ಲೌಡ್ಗೆ ತನ್ನ ಸಂಪೂರ್ಣ ಕೆಲಸದ ಹೊರೆ ವರ್ಗಾವಣೆ ಮಾಡಿತು. ಗೂಗಲ್ ಮ್ಯಾಪ್ನಿಂದ ಹೊರ ಬಂದಿರುವ ಓಲಾ ಇನ್ಮುಂದೆ ಸ್ಥಳ ಪತ್ತೆಗೆ ತನ್ನದೇ ಆಂತರಿಕ ಮ್ಯಾಪ್ ಸೇವೆ ಮೇಲೆ ಓಲಾ ಕಾರ್ಯಾಚರಣೆ ನಡೆಸಲಿದೆ. ಬಳಕೆದಾರರು ಓಲಾ ಆ್ಯಪ್ಗೆ ಹೋಗಿ ಅಗತ್ಯವಿದ್ದಲ್ಲಿ ಅಪ್ಡೇಟ್ ಮಾಡಿ ಎಂದು ಅಗರ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಕೋರಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಅಜೂರ್ನಿಂದ ಹೊರ ಬಂದ ತಿಂಗಳೊಳಗೆ ನಾವು ಇದೀಗ ಗೂಗಲ್ ಮ್ಯಾಪ್ನಿಂದ ಸಂಪೂರ್ಣವಾಗಿ ಹೊರ ಬಂದಿದ್ದಾರೆ. ಇದಕ್ಕಾಗಿ ನಾವು ಪ್ರತಿ ವರ್ಷ ಸರಿಸುಮಾರು 100 ಕೋಟಿ ಹಣ ವ್ಯಯ ಮಾಡುತ್ತಿದ್ದೇವು. ಆದರೆ ಕಳೆದು ತಿಂಗಳು ಇನ್-ಔಸ್ ಮ್ಯಾಪ್ ಬಳಕೆಯಿಂದ ನಮ್ಮ ಖರ್ಚು ಶೂನ್ಯಗೊಂಡಿದೆ. ಬಳಕೆದಾರರು ಅಗತ್ಯವಿದ್ದಲ್ಲಿ ಓಲಾ ಆ್ಯಪ್ ಅಪ್ಡೇಟ್ ಮಾಡುವಂತೆ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ, ತನ್ನ ಈ ಮ್ಯಾಪ್ನಲ್ಲಿ ಅನೇಕ ಫೀಚರ್ ಅನ್ನು ಓಲಾ ಪರಿಚಯಿಸಲಿದೆ. ಅದರಲ್ಲಿ ರಸ್ತೆ ವೀಕ್ಷೆ, ಎನ್ಇಆರ್ಎಫ್ಗಳು, ಒಳಾಂಗಣ ಇಮೇಜ್, 2ಡಿ ಮ್ಯಾಪ್, ಡ್ರೋನ್ ಮ್ಯಾಪ್ ಸೇರಿದಂತೆ ಹಲವು ಅಂಶವನ್ನು ಒಳಗೊಂಡಿದ್ದು, ಈ ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
2021ರ ಅಕ್ಟೋಬರ್ನಲ್ಲಿ ಓಲಾ ಪುಣೆ ಮೂಲದ ಭೌಗೋಳಿಕ ಸೇವೆಗಳನ್ನು ಒದಗಿಸುವ ಕಂಪನಿ ಜಿಯೋಸ್ಪೋಕ್ ಅನ್ನು ಖರೀದಿಸಿತು. ಪ್ರಸ್ತುತ ಓಲಾ ಮ್ಯಾಪ್ಗಳು ಅದರ ಪ್ರಮುಖ ಓಲಾ ಕ್ಯಾಬ್‌ಗಳಿಗೆ ಸೇವೆಗಳನ್ನು ನೀಡಲಿದೆ.
ಕಳೆದ ತಿಂಗಳು ಕ್ರುಟ್ರಿಮ್ ಎಐ ಉದ್ಘಾಟನೆ ಸಂದರ್ಭದಲ್ಲಿಯೇ ಓಲಾ, ತನ್ನ ಕ್ಲೌಡ್ ಸರ್ವೀಸಿಂಗ್ನಲ್ಲಿ ಮ್ಯಾಪಿಂಗ್ ಸಲ್ಯೂಷನ್ ನೀಡುವ ಕುರಿತು ತಿಳಿಸಿತ್ತು. ಅಲ್ಲದೇ ಮುಂದಿನ ವರ್ಷದ ಆರಂಭದ ವೇಳೆಗೆ ತನ್ನದೇ ಬ್ಯಾಟರಿ ಸೆಲ್ಸ್ ಹೊಂದುವುದಾಗಿ ಘೋಷಿಸಿದೆ. ಸದ್ಯಕ್ಕೆ ಓಲಾ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಬ್ಯಾಟರಿ ಸೆಲ್ ಗಿಗಾಫ್ಯಾಕ್ಟರಿ ನಿರ್ಮಿಸುತ್ತಿದೆ. (ಐಎಎನ್ಎಸ್)
ಇದನ್ನೂ ಓದಿ: 2030ರ ವೇಳೆಗೆ ಇ-ಸಿಮ್ ಚಾಲಿತ ಸಾಧನಗಳ ಸಂಖ್ಯೆ 9 ಬಿಲಿಯನ್ಗೆ ಏರಿಕೆ: ವರದಿ