ETV Bharat / technology

ಸುನೀತಾ-ಬುಚ್​ರನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಭೂಮಿಗೆ ಮರಳಿದ ಬೋಯಿಂಗ್ ಸ್ಟಾರ್​ಲೈನರ್! - Boeing Starliner Back to Earth - BOEING STARLINER BACK TO EARTH

Boeing Starliner: ಬೋಯಿಂಗ್ ಸ್ಟಾರ್​ಲೈನರ್ ಗಗನಯಾತ್ರಿಗಳಿಲ್ಲದೆ ಭೂಮಿಗೆ ಮರಳಿದೆ. ಇದರಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿರುವುದು ತಿಳಿದಿರುವ ಸಂಗತಿ. ಇದೀಗ ಬೋಯಿಂಗ್ ಸ್ಟಾರ್​ಲೈನರ್ ಮಾತ್ರ ವಾಪಸ್​ ಮರಳಿದ್ದು, ಗಗನಯಾತ್ರಿಗಳು ಅಲ್ಲೇ ಇದ್ದಾರೆ.

NASA ASTRONAUTS  SUNITA WILLAMS AND BARRY WILMORE  BOEING STARLINER
ಸುನೀತಾ-ಬುಚ್​ರನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಭೂಮಿಗೆ ಮರಳಿದ ಬೋಯಿಂಗ್ ಸ್ಟಾರ್ಲೈನರ್ (NASA)
author img

By ETV Bharat Tech Team

Published : Sep 7, 2024, 11:40 AM IST

Boeing Starliner: ಪ್ರಸಿದ್ಧ ಕಂಪನಿ ಬೋಯಿಂಗ್ ಕೈಗೊಂಡ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟವು ಅರ್ಧಕ್ಕೆ ಕೊನೆಗೊಂಡಿದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ಕಂಪನಿಯ ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶದಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಈ ಕಾರಣದಿಂದಾಗಿ, ಗಗನಯಾತ್ರಿಗಳನ್ನು ಅಲ್ಲೇ ಬಿಟ್ಟು ಖಾಲಿ ಕ್ಯಾಪ್ಸುಲ್ ಅಡಿಯಲ್ಲಿ ಬರಬೇಕಾಯಿತು. ಅಮೆರಿಕದ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ ಬೋಯಿಂಗ್ ಸ್ಟಾರ್‌ಲೈನರ್ ನೌಕೆ ಭೂಮಿಗೆ ತಲುಪಿದೆ.

NASA astronauts  Sunita Willams and Barry Wilmore  Boeing Starliner
ಸುನೀತಾ-ಬುಚ್​ರನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಭೂಮಿಗೆ ಮರಳಿದ ಬೋಯಿಂಗ್ ಸ್ಟಾರ್ಲೈನರ್ (ANI)

ಬೋಯಿಂಗ್ ಕ್ರ್ಯೂ ಫ್ಲೈಟ್ ಟೆಸ್ಟ್‌ನ ಭಾಗವಾಗಿ ಈ ವರ್ಷದ ಜೂನ್‌ನಲ್ಲಿ ನಾಸಾ ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿತು. 10 ದಿನಗಳ ಕಾರ್ಯಾಚರಣೆಯ ಭಾಗವಾಗಿ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಇನ್ನೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಜೂನ್ 5 ರಂದು ಗಗನಯಾತ್ರಿಗಳನ್ನು ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು. ಜೂನ್ 14 ರಂದು ಅವರು ಭೂಮಿಗೆ ಮರಳಲು ನಿರ್ಧರಿಸಿದ್ದರು. ಆದ್ರೆ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯು ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್‌ಗಳಲ್ಲಿನ ದೋಷಗಳಿಂದಾಗಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಇದನ್ನು ಸರಿಪಡಿಸುವ ಸಲುವಾಗಿ ಗಗನಯಾತ್ರಿಗಳ ವಾಪಸಾತಿ ವಿಳಂಬವಾಗುತ್ತಿದೆ.

ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿದ ಬೋಯಿಂಗ್, ಗಗನಯಾತ್ರಿಗಳನ್ನು ಭೂಮಿಗೆ ತರಲು ಸ್ಟಾರ್‌ಲೈನರ್ ಸುರಕ್ಷಿತವಾಗಿದೆ ಎಂದು ಹೇಳಿದೆ. ಆದರೆ, ನಾಸಾ ಅದಕ್ಕೆ ಒಪ್ಪಲಿಲ್ಲ. ಇದರೊಂದಿಗೆ, ಖಾಲಿ ಆಗಿ ಮರಳಿದೆ. ಬಾಹ್ಯಾಕಾಶ ನಿಲ್ದಾಣದಿಂದ ಎತ್ತಲ್ಪಟ್ಟ ಆರು ಗಂಟೆಗಳ ನಂತರ ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬರ್‌ನಲ್ಲಿ ಕ್ಯಾಪ್ಸುಲ್ ಸುರಕ್ಷಿತವಾಗಿ ಇಳಿಯಿತು.

ಸ್ಪೇಸ್‌ಎಕ್ಸ್ ಗಗನಯಾತ್ರಿಗಳಿಗಾಗಿ ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸುತ್ತಿದೆ. ಇದರಿಂದಾಗಿ ಸುನೀತಾ ಮತ್ತು ವಿಲ್ಮೋರ್ ಇನ್ನೂ ಕೆಲವು ತಿಂಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಇರಬೇಕಾಗಿದೆ. ನಾಸಾ ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್‌ನ ಭಾಗವಾಗಿ ಇಬ್ಬರು ಗಗನಯಾತ್ರಿಗಳೊಂದಿಗೆ ಕ್ರೂ ಡ್ರ್ಯಾಗನ್ ಅನ್ನು ಐಎಸ್‌ಎಸ್‌ಗೆ ಕಳುಹಿಸುವ ಸಾಧ್ಯತೆಯಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಪ್ರಯೋಗ ಇರಬಹುದು ಎಂದು ವರದಿಯಾಗಿದೆ. ಈ ಬಾಹ್ಯಾಕಾಶ ನೌಕೆಯೊಂದಿಗೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಸುನೀತಾ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ತರಲು ನಾಸಾ ಉದ್ದೇಶಿಸಿದೆ ಎಂದು ವರದಿಯಾಗಿದೆ.

ಓದಿ: ಬ್ಯಾಡ್​ ನ್ಯೂಸ್​: ಬೋಯಿಂಗ್ ಸ್ಟಾರ್‌ಲೈನರ್‌ನಿಂದ 'ವಿಚಿತ್ರ ಶಬ್ದ': ಬಾಹ್ಯಾಕಾಶದಲ್ಲೇ ಉಳಿಯಲಿರುವ ಸುನಿತಾ, ವಿಲ್ಮೋರ್ - Strange Noise In Spacecraft

ETV Bharat Logo

Copyright © 2025 Ushodaya Enterprises Pvt. Ltd., All Rights Reserved.