Best Mobile phones under 15000: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಸಾಮಾನ್ಯವಾಗಿದೆ. ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ ಫೋನ್ ಇರುತ್ತದೆ. ಮೊಬೈಲ್ಗಳು ಹೆಚ್ಚು ಮಾರಾಟವಾಗುತ್ತಿರುವ ಹಿನ್ನೆಲೆ ಎಲ್ಲ ಕಂಪನಿಗಳು ಮಾರುಕಟ್ಟೆಗೆ ತಕ್ಕಂತೆ ಹೊಸ ಸ್ಮಾರ್ಟ್ ಫೋನ್‌ಗಳನ್ನು ಬಿಡುಗಡೆ ಮಾಡಲು ಉತ್ಸುಕವಾಗಿವೆ.
ಕೇವಲ ರೂ.15 ಸಾವಿರದೊಳಗಿನ ಬಜೆಟ್‌ನಲ್ಲಿ ಪ್ರತಿ ತಿಂಗಳು ಕನಿಷ್ಠ 2 ರಿಂದ 4 ಮಾದರಿಯ ಸ್ಮಾರ್ಟ್ ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಇದರಿಂದಾಗಿ ಹೊಸ ಫೋನ್ ಖರೀದಿಸುವ ಯೋಚನೆಯಲ್ಲಿರುವ ಗ್ರಾಹಕರು ಯಾವ ಫೋನ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಡಿಮೆ ಬಜೆಟ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಫೋನ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
Samsung Galaxy M34 5G: ಪ್ರಸಿದ್ಧ ಸ್ಮಾರ್ಟ್ ಫೋನ್ ಬ್ರಾಂಡ್ ಸ್ಯಾಮ್‌ಸಂಗ್ ಕಂಪನಿ ತನ್ನ ಗ್ರಾಹಕರನ್ನು ಸೆಳೆಯಲು ಕಾಲಕಾಲಕ್ಕೆ ಹೊಸ ಮಾದರಿಯ ಸ್ಮಾರ್ಟ್ ಫೋನ್‌ಗಳನ್ನು ಪರಿಚಯಿಸುತ್ತಿದೆ. ಸ್ಯಾಮ್‌ಸಂಗ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ Samsung Galaxy M34 5G ಹೆಸರಿನ 'M' ಸರಣಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.
ವೈಶಿಷ್ಟ್ಯಗಳು..
- ಡಿಸ್ಪ್ಲೇ: 6.5
- ಪ್ರೊಸೆಸರ್: Exynos 1280 ಚಿಪ್ಸೆಟ್
- RAM: 6 GB
- ಸ್ಟೋರೇಜ್ ಕೆಪಾಸಿಟಿ: 128 GB
- ಬ್ಯಾಟರಿ: 6,000 mAh
- ರಿಯರ್ ಕ್ಯಾಮರಾ: 50 MP
- ಫ್ರಂಟ್ ಕ್ಯಾಮರಾ: 13 MP
- ಓಎಸ್: ಆಂಡ್ರಾಯ್ಡ್ 13
- ಬೆಲೆ : ರೂ.13,888
Redmi Note 13 5G: Redmi Note ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ. ಇದರಿಂದಾಗಿ ಬಳಕೆದಾರರು ಈ ಸ್ಮಾರ್ಟ್ ಫೋನ್‌ಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆ ಭಾರತೀಯ ಮಾರುಕಟ್ಟೆಯಲ್ಲಿ Redmi Note 13 5G ಅನ್ನು ಬಿಡುಗಡೆ ಮಾಡಲಾಗಿದೆ.
ವೈಶಿಷ್ಟ್ಯಗಳು..
- ಡಿಸ್ಪ್ಲೇ: 6.67
- ಪ್ರೊಸೆಸರ್: TSMS 4nm
- RAM: 12 GB
- ಸ್ಟೋರೇಜ್ ಕೆಪಾಸಿಟಿ: 256 GB
- ಬ್ಯಾಟರಿ: 5,000 mAh
- ರಿಯರ್ ಕ್ಯಾಮರಾ: 108 MP
- ಫ್ರಂಟ್ ಕ್ಯಾಮರಾ: 16MP
- ಓಎಸ್: ಆಂಡ್ರಾಯ್ಡ್ 13
- ಬೆಲೆ : ರೂ.14,905
Motorola G64 5G: Motorola Mobility ಚೀನಿ ಕಂಪನಿ Lenovo ನ ಅಂಗಸಂಸ್ಥೆಯಾಗಿದೆ. ಮೋಟೋ ಇಂಡಿಯಾ ಕಾಲಕಾಲಕ್ಕೆ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುವುದು ಸಾಮಾನ್ಯವಾಗಿದೆ. ಈ ಅನುಕ್ರಮದಲ್ಲಿ Moto G64 5G ಸ್ಮಾರ್ಟ್‌ಫೋನ್ ಅನ್ನು Motorola 'G' ಸರಣಿಯ ಸಾಲಿನಲ್ಲಿ ಪರಿಚಯಿಸಲಾಗಿದೆ.
ವೈಶಿಷ್ಟ್ಯಗಳು..
- ಡಿಸ್ಪ್ಲೇ: 6.5
- ಪ್ರೊಸೆಸರ್: ಮೀಡಿಯಾ ಟೆಕ್ 7025 ಚಿಪ್ಸೆಟ್
- RAM: 12 GB
- ಸ್ಟೋರೇಜ್ ಕೆಪಾಸಿಟಿ: 256 GB
- ಬ್ಯಾಟರಿ: 6,000 mAh
- ರಿಯರ್ ಕ್ಯಾಮರಾ: 50 MP
- ಫ್ರಂಟ್ ಕ್ಯಾಮರಾ: 16 MP
- ಓಎಸ್: ಆಂಡ್ರಾಯ್ಡ್ 15
- ಬೆಲೆ: ರೂ.14,999