ETV Bharat / technology

ಮೈಕ್ರೋಸಾಫ್ಟ್​​ ಸರ್ವರ್​ ಸಮಸ್ಯೆ: ಭಾರತದ ಬ್ಯಾಂಕಿಂಗ್​ ವ್ಯವಸ್ಥೆ ಸುರಕ್ಷಿತ - ಎಸ್​ಬಿಐ ಚೇರ್​ಮನ್​ - microsoft outage effects in india - MICROSOFT OUTAGE EFFECTS IN INDIA

ಭಾರತದ ಬ್ಯಾಂಕ್​ ಮತ್ತು ಪೇಮೆಂಟ್​ ಸೇವೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಎಸ್​ಬಿಐ ಚೇರ್​ಮನ್​ ದಿನೇಶ್​ ಕುಮಾರ್​ ಖಾರಾ ತಿಳಿಸಿದ್ದಾರೆ.

banks-payments-systems-unaffected-by-microsoft-outage
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By PTI

Published : Jul 19, 2024, 5:04 PM IST

ಮುಂಬೈ: ಮೈಕ್ರೋಸಾಫ್ಟ್​ ಸರ್ವರ್​ ದೋಷದಿಂದ ಉಂಟಾಗಿರುವ ಜಾಗತಿಕ ತಾಂತ್ರಿಕ ಬಿಕ್ಕಟ್ಟು ಜಾಗತಿಕ ಹಣಕಾಸಿನ ಸೇವೆ ಮೇಲೆ​ ಪರಿಣಾಮ ಬೀರಿದ್ದು, ಷೇರು ಮಾರುಕಟ್ಟೆಗಳಲ್ಲಿ ಕೂಡ ತಲ್ಲಣ ಸೃಷ್ಟಿಸಿದೆ. ಆದರೆ, ಭಾರತದ ಬ್ಯಾಂಕ್​ ಮತ್ತು ಪೇಮೆಂಟ್​ ಸೇವೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಎಸ್​ಬಿಐ ಚೇರ್​ಮನ್​ ದಿನೇಶ್​ ಕುಮಾರ್​ ಖಾರಾ ತಿಳಿಸಿದ್ದಾರೆ.

ನಾವು ಸುರಕ್ಷಿತವಾಗಿದ್ದು, ನಮ್ಮ ಬ್ಯಾಂಕಿಂಗ್​ ವ್ಯವಸ್ಥೆ ಮೇಲೆ ಪರಿಣಾಮ ಬೀರಿಲ್ಲ ಎಂದಿದ್ದಾರೆ. ನ್ಯಾಷನಲ್​ ಪೇಮೆಂಟ್​​ ಕಾರ್ಪೊರೇಷನ್​ ಆಫ್​ ಇಂಡಿಯಾ (ಎನ್​ಪಿಸಿಐ) ಕಾರ್ಯಕಾರಿ ಮುಖ್ಯಸ್ಥ ದಿಲೀಪ್​ ಅಸ್ಬೆ ಮಾತನಾಡಿದ್ದು, ಯುಪಿಐ ಸೇರಿದಂತೆ ದೇಶದ ಪಾವತಿ ವ್ಯವಸ್ಥೆ ಮೇಲೆ ಈ ತಾಂತ್ರಿಕ ಸಮಸ್ಯೆ ಪರಿಣಾಮ ಬೀರಿಲ್ಲ ಎಂದರು.

ಎಚ್​ಡಿಎಫ್​ಸಿ ಮತ್ತು ಐಸಿಐಸಿಐ ಹಾಗೂ ಆಕ್ಸಿಸ್​ ಬ್ಯಾಂಕ್​ಗಳು ಕೂಡ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ವ್ಯವಸ್ಥೆಯಲ್ಲಿ ಯಾವುದೇ ಅಡ್ಡಿಯಾಗಿಲ್ಲ ಎಂದಯ ತಿಳಿಸಿದೆ.

ಎನ್​ಐಸಿ ಸುರಕ್ಷಿತ: ಇನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್​​, ರಾಷ್ಟ್ರೀಯ ಮಾಹಿತಿ ಕೇಂದ್ರದ ನೆಟ್​ವರ್ಕ್​ ಈ ಸಮಸ್ಯೆಗೆ ಒಳಗಾಗಿಲ್ಲ ಎಂದಿದ್ದಾರೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವೂ ಮೈಕ್ರೋಸಾಫ್ಟ್​ ಸಂಪರ್ಕದಲ್ಲಿದೆ ಎಂದಿದ್ದಾರೆ. ಈ ತಾಂತ್ರಿಕ ಬಿಕ್ಕಟ್ಟಿಗೆ ಕಾರಣವನ್ನು ಪತ್ತೆ ಮಾಡಲಾಗಿದೆ. ಈ ಸಮಸ್ಯೆ ಪರಿಹಾರಿಸಲು ಅಪ್​​ಡೇಟ್​ ಅನ್ನು ನೀಡಲಾಗಿದೆ. ಸಿಇಆರ್​​ಟಿ ತಾಂತ್ರಿಕ ಸಲಹೆಯನ್ನು ನೀಡಿದ್ದು, ಎನ್​ಐಸಿ ಯಾವುದೇ ಪರಿಣಾಮಕ್ಕೆ ಒಳಗಾಗಿಲ್ಲ ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಮೈಕ್ರೋಸಾಫ್ಟ್​ನ ಕ್ಲೌಡ್​ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಜಾಗತಿಕವಾಗಿ ಲಕ್ಷಾಂತರ ವಿಂಡೋಸ್​ ಬಳಕೆದಾರರು ಸಮಸ್ಯೆ ಎದುರಿಸುವಂತೆ ಆಗಿದೆ. ವಿಂಡೋಸ್​ ಬಳಕೆದಾರರ ಪರದೆಯ ಮೇಲೆ ದಿಢೀರ್​ ಎಂದು ಬ್ಲೂ ಸ್ಕ್ರೀನ್​ ಆಫ್​ ಡೆತ್​ ಎರರ್​​ ಕಂಡು ಬಂದಿದೆ. ಅಮೆರಿಕದಲ್ಲಿ ಮೊದಲು ಕಾಣಿಸಿಕೊಂಡ ಮೈಕ್ರೋಸಾಫ್ಟ್​​ ಸರ್ವರ್​ ದೋಷ ಕ್ರಮೇಣ ಜಗತ್ತಿನೆಲ್ಲೆಡೆ ವಿಮಾನಯಾನ ಸಂಸ್ಥೆ, ಬ್ಯಾಂಕ್​ಗಳು, ಮಾಧ್ಯಮ ಸಂಸ್ಥೆ ಮತ್ತು ಕಂಪನಿಗಳು ಸಮಸ್ಯೆ ಎದುರಿಸುವಂತೆ ಆಯಿತು. ಗಂಟೆಗಳ ಕಾಲ ಈ ತಾಂತ್ರಿಕ ಸಮಸ್ಯೆಗಳನ್ನು ಜನರು ಎದುರಿಸಿದರು.

ಮೈಕ್ರೋಸಾಫ್ಟ್​ 365 ಆ್ಯಪ್​ ಮತ್ತು ಸರ್ವಿಸ್​ ಮೂಲಕ ಸಮಸ್ಯೆ ಸರಿ ಮಾಡಲು ಎಲ್ಲ ಪ್ರಯತ್ನ ನಡೆಸಿರುವುದಾಗಿ ಮೈಕ್ರೋಸಾಫ್ಟ್​ ತಿಳಿಸಿದೆ. ಕ್ಲೌಡ್​ಸ್ಟ್ರೈಕ್​ ಅಪ್ಡೇಟ್​ ಅನ್ನು ಸರಿಯಾದ ಸಮಯಕ್ಕೆ ಮಾಡದ ಹಿನ್ನೆಲೆ ಈ ಸಮಸ್ಯೆಯನ್ನು ಜಗತ್ತಿನೆಲ್ಲೆಡೆ ಮೈಕ್ರೋಸಾಫ್ಟ್​ ಬಳಕೆದಾರರು ಎದುರಿಸಿದರು.

ಇದನ್ನೂ ಓದಿ: ಮೈಕ್ರೋಸಾಫ್ಟ್‌ ಸರ್ವರ್​ನಲ್ಲಿ ದೋಷ, ಇಡೀ ಜಗತ್ತಿಗೆ ತಾಂತ್ರಿಕ ಬಿಕ್ಕಟ್ಟು! ಯಾವೆಲ್ಲ ಸೇವೆಗಳ ಮೇಲೆ ಪರಿಣಾಮ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.