ಮುಂಬೈ: ಏಷ್ಯಾದ ಅತಿದೊಡ್ಡ ಇಮೇಜಿಂಗ್ ಚೆರೆಂಕೋವ್ ದೂರದರ್ಶಕವಾದ ಮೇಜರ್ ಅಟ್ಮಾಸ್ಫಿಯರಿಕ್ ಚೆರೆಂಕೋವ್ ಎಕ್ಸ್‌ಪರಿಮೆಂಟ್ (MACE) ದೂರದರ್ಶಕವನ್ನು ಲಡಾಖ್‌ನ ಹಾನ್ಲೆಯಲ್ಲಿ ಉದ್ಘಾಟಿಸಲಾಯಿತು. ಅ. 4ರಂದು ಅಣುಶಕ್ತಿ ಇಲಾಖೆ (ಡಿಎಇ) ಕಾರ್ಯದರ್ಶಿ ಹಾಗೂ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಡಾ. ಅಜಿತ್ ಕುಮಾರ್ ಮೊಹಾಂತಿ ಅವರು ಇದನ್ನು ಉದ್ಘಾಟಿಸಿದ್ದು, ಈ ಮೂಲಕ ವೈಜ್ಞಾನಿಕ ಸಂಶೋಧನೆಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ.
4,300 ಮೀಟರ್ ಎತ್ತರದಲ್ಲಿ ಸ್ಥಾಪಿಸಲಾಗಿರುವ ಇದು ವಿಶ್ವದಲ್ಲೇ ಅತಿ ಹೆಚ್ಚು ಎತ್ತರದಲ್ಲಿರುವ ದೂರದರ್ಶಕವಾಗಿದೆ. ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಮತ್ತು ಇತರ ಭಾರತೀಯ ಉದ್ಯಮ ಪಾಲುದಾರರ ಬೆಂಬಲದೊಂದಿಗೆ ಮುಂಬೈ ಮೂಲದ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (BARC) ಈ ದೂರದರ್ಶಕವನ್ನು ಸ್ಥಳೀಯವಾಗಿ ನಿರ್ಮಿಸಿದೆ. MACE ವೀಕ್ಷಣಾಲಯ ಉದ್ಘಾಟನೆ ಅಣುಶಕ್ತಿ ಇಲಾಖೆಯ (DAE) 70ನೇ ವರ್ಷಾಚರಣೆಯ ಒಂದು ಭಾಗವಾಗಿದೆ.
A New Era in Cosmic Discovery Begins - Dr. Ajit Kumar Mohanty, Secretary, DAE & Chairman AEC, inaugurates the #MACEObservatory at Hanle in Ladakh.@lg_ladakh @IIABengaluru @DIPR_Leh #DAEPlatinumJubilee pic.twitter.com/6Mvfy0Wyor
— DAE India (@DAEIndia) October 4, 2024
ಮೇಜರ್ ಅಟ್ಮಾಸ್ಫಿಯರಿಕ್ ಚೆರೆಂಕೋವ್ ಎಕ್ಸ್‌ಪರಿಮೆಂಟ್ ದೂರದರ್ಶಕವನ್ನು ಕಾರ್ಯರೂಪಕ್ಕೆ ತಂದ ಪ್ರಯತ್ನವನ್ನು ಡಾ. ಮೊಹಾಂತಿ, ತಂಡವನ್ನು ಶ್ಲಾಘಿಸಿದ್ದಾರೆ. "ಮೇಜರ್ ಅಟ್ಮಾಸ್ಫಿಯರಿಕ್ ಚೆರೆಂಕೋವ್ ಎಕ್ಸ್‌ಪರಿಮೆಂಟ್ ದೂರದರ್ಶಕ ಭಾರತಕ್ಕೆ ಒಂದು ಐತಿಹಾಸಿಕ ಸಾಧನೆಯಾಗಿದೆ. ಕಾಸ್ಮಿಕ್ ರೇ ಸಂಶೋಧನೆಯಲ್ಲಿ ದೇಶವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿರಿಸುತ್ತದೆ. ಅದಲ್ಲದೇ ಈ ದೂರದರ್ಶಕ ವಿಜ್ಞಾನಿಗಳಿಗೆ ಹೆಚ್ಚಿನ ಶಕ್ತಿಯ ಗಾಮಾ ಕಿರಣಗಳ ಅಧ್ಯಯನಕ್ಕೂ ಅನುವು ಮಾಡಿಕೊಡುತ್ತದೆ." ಎಂದು ಅವರು ಬಣ್ಣಿಸಿದ್ದಾರೆ.
"ಮೇಜರ್ ಅಟ್ಮಾಸ್ಫಿಯರಿಕ್ ಚೆರೆಂಕೋವ್ ಎಕ್ಸ್‌ಪರಿಮೆಂಟ್ ಯೋಜನೆ ವೈಜ್ಞಾನಿಕ ಸಂಶೋಧನೆಯ ಅಭಿವೃದ್ಧಿಗೆ ಮಾತ್ರವಲ್ಲದೇ ಲಡಾಖ್‌ನ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸಲಿದೆ" ಎಂದಿದ್ದಾರೆ.
ಇದನ್ನೂ ಓದಿ: ಮತ್ತೆ ಭೂಮಿಗೆ ಮರಳಿದೆ 104 ಉಪಗ್ರಹಗಳನ್ನು ಹೊತ್ತು ವಿಶ್ವ ದಾಖಲೆ ಮಾಡಿದ್ದ ರಾಕೆಟ್ನ ಮೇಲಿನ ಭಾಗ!