ಹೈದರಾಬಾದ್: ಭಾರತ ಸೇರಿದಂತೆ 91 ದೇಶಗಳಲ್ಲಿ ತಮ್ಮ ಐಫೋನ್ ಬಳಕೆದಾರು ಹೊಸ ದಾಳಿಗೆ ಒಳಗಾಗಬಹುದು ಎಂದು ಆಪಲ್ ಎಚ್ಚರಿಕೆಯ ನೋಟಿಫಿಕೇಶನ್ ನೀಡಿದೆ. ಇಸ್ರೇಲ್ನ ಎನ್ಎಸ್ಒ ಗುಂಪಿನ ವಿವಾದಾತ್ಮಕ ಪೆಗಾಸಾಸ್ ಮಾಲ್ವೇರ್ನಂತಹ ಮೆರ್ಸೆನರಿ ಸ್ಪೈವೇರ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಪಲ್ ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಈ ಸಂಬಂಧ ಆಪಲ್ ಬಳಕೆದಾರರಿಗೆ ಸಂದೇಶ ಕಳುಹಿಸಿರುವ ಐಫೋನ್: 'ಅಲರ್ಟ್: ನಿಮ್ಮ ಐಫೋನ್ ಮರ್ಸೆನರಿ ಸ್ಪೈವೇರ್ ದಾಳಿಗೆ ಗುರಿಯಾಗಬಹುದು ಎಂದು ಆಪಲ್ ಪತ್ತೆ ಮಾಡಿದೆ' ಎಂಬ ಸಂದೇಶದೊಂದಿಗೆ ಎಚ್ಚರಿಕೆ ನೋಟಿಫಿಕೇಶನ್ ಕಳುಹಿಸಿದೆ
ಆಪಲ್ನ ಸಂಯೋಜಿತವಾಗಿರುವ ಐಫೋನ್ ಅನ್ನು ದೂರದಿಂದಲೇ ಮರ್ಸೆನರಿ ಸ್ಪೈವೇರ್ ದಾಳಿಯನ್ನು ನಡೆಸುವ ಗುರಿಯಾಗಿಸಿದೆ ಎಂಬುದನ್ನು ಆಪಲ್ ಪತ್ತೆ ಮಾಡಿದೆ. ಈ ದಾಳಿಯು ನಿಮ್ಮನ್ನು ಉದ್ದೇಶಿಸಿರುವ ಕಾರಣ ನೀವು ಯಾರು ಅಥವಾ ನೀವು ಏನು ಮಾಡುತ್ತಿದ್ದೀರಾ ಎಂಬುದನ್ನು ತಿಳಿಯಲು. ಆದಾಗ್ಯೂ ಈ ರೀತಿಯ ದಾಳಿಯಿಂದ ಸಾಧನೆ ಮಾಡುವುದು ಸಾಧ್ಯವಿಲ್ಲ. ಆಪಲ್ ಈ ಎಚ್ಚರಿಕೆಯಲ್ಲಿ ಹೆಚ್ಚಿನ ವಿಶ್ವಾಸವನ್ನು ಹೊಂದಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಇಮೇಲ್ ಮೂಲಕ ಬಳಕೆದಾರನ್ನು ಎಚ್ಚರಿಸಿದೆ.
ಮರ್ಸೆನರಿ ಸ್ಪೈವೇರ್ ದಾಳಿಯು ಎನ್ಎಸ್ಒ ಗುಂಪಿನಿಂದ ನಡೆದ ಪೆಗಾಸಾಸ್ ದಾಳಿ ರೀತಿ ನಡೆಯಲಿದೆ. ಸಾಮಾನ್ಯ ಸೈಬರ್ ಕ್ರಿಮಿನಲ್ ಚಟುವಟಿಕೆ ಅಥವಾ ಗ್ರಾಹಕ ಮಾಲ್‌ವೇರ್‌ಗಿಂತ ಅಸಾಧಾರಣವಾಗಿ ಅಪರೂಪ ಮತ್ತು ಹೆಚ್ಚು ಅತ್ಯಾಧುನಿಕವಾಗಿದೆ. ಈ ದಾಳಿಯು ಅನೇಕ ಮಿಲಿಯನ್ ಡಾಲರ್ ವೆಚ್ಚ ಹೊಂದಿದ್ದು, ಸಣ್ಣ ಗುಂಪಿನ ಜನರನ್ನು ಪ್ರತ್ಯೇಕವಾಗಿ ನೇಮಿಸಲಾಗಿದೆ. ಆದರೆ, ಈ ದಾಳಿಯು ಜಾಗತಿಕವಾಗಿ ಸಾಗಲಿದೆ ಎಂದು ಆಪಲ್ ನೋಟಿಫೀಕೇಶನ್ನಲ್ಲಿ ತಿಳಿಸಿದೆ.
ಈ ಮರ್ಸೆನರಿ ಸ್ಪೈವೇರ್ ದಾಳಿಯನ್ನು ಬಳಕೆದಾರರ ವಾಟ್ಸ್ಆ್ಯಪ್ ಮತ್ತು ಐಮೇಸೆಜ್ ಸೇರಿದಂತೆ ಕ್ಲೌಡ್ ಆಪ್ಸ್, ಹಲವು ವಿಧದ ಮೆಸೇಜಿಂಗ್, ಮೈಕ್ರೋಸಾಫ್ಟ್ ವಿಂಡೋ, ಗೂಗಲ್ ಕ್ರೋಮ್, ಗೂಗಲ್ ಆಂಡ್ರಾಯ್ಡ್ ಜೊತೆಗೆ ಸಫಾರಿ, ಐಒಎಸ್ ಒಳಗೊಂಡಂತೆ ಅನೇಕ ಆಧುನಿಕ ಕಂಪ್ಯೂಟಿಂಗ್ ಫ್ಲಾಟ್ಫಾರ್ಮ್ ಮೂಲಕ ನಡೆಸಲಾಗುವುದು. ಈ ದಾಳಿ ನಡೆಸಲು ಉತ್ತಮವಾದ ನಿಧಿ ದೊರೆಯುತ್ತಿದ್ದು, ಇದು ನಿರಂತರವಾಗಿ ವಿಕಸಿತಗೊಳ್ಳುತ್ತಿದೆ ಎಂದು ನೋಟಿಫೀಕೇಶನ್ನಲ್ಲಿ ಎಚ್ಚರಿಸಲಾಗಿದೆ.
ಅನಿರೀಕ್ಷಿತ ಅಥವಾ ಅರಿಚಿತ ಸೆಂಡರಸ್ ಕಳುಹಿಸುವ ಯಾವುದೇ ಲಿಂಕ್ ಅಥವಾ ಅಟಾಚ್ಮೆಂಟ್ ಬಂದಾಗ ಅವುಗಳನ್ನು ಯಾವುದೇ ದೃಢೀಕರಣ ಇರದೇ ಪರೀಕ್ಷಿಸಲು ಮುಂದಾಗಬೇಡಿ ಎಂದು ಆಪಲ್ ಬಳಕೆದಾರರಿಗೆ ಸಲಹೆ ನೀಡಿದೆ. ಯಾವ ಕಾರಣದಿಂದ ಈ ರೀತಿಯ ಬೆದರಿಕೆ ಅಥವಾ ಮುನ್ನೆಚ್ಚರಿಕೆಯ ನೋಟಿಫೀಕೇಶನ್ ಅನ್ನು ಕಳುಹಿಸಲಾಗಿದೆ. ಇದಕ್ಕೆ ಕಾರಣ ಏನು ಎಂಬ ಕುರಿತು ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಈ ಮುನ್ನೆಚ್ಚರಿಕೆ ಸಂದೇಶ ಮೆರ್ಸೆನರಿ ಸ್ಪೈವೇರ್ ದಾಳಿಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಕಳೆದ ಅಕ್ಟೋಬರ್ನಲ್ಲಿ ಕೂಡ ಆಪಲ್ ಎಲ್ಲ ವಿರೋಧ ಪಕ್ಷದ ನಾಯಕರಿಗೆ ಈ ರೀತಿಯ ಮುನ್ನೆಚ್ಚರಿಕೆಯ ಸಂದೇಶವನ್ನು ನೀಡಿತ್ತು. ರಾಜ್ಯ ಬೆಂಬಲಿತ ಸ್ಪೈವೇರ್ ದಾಳಿ ಸಾಮರ್ಥ್ಯದ ಕುರಿತು ಐಫೋನ್ನಲ್ಲಿ ಎಚ್ಚರಿಕೆ ರವಾನಿಸಿತ್ತು. ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಶಿವ ಸೇನಾ (ಯುಬಿಟಿ) ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಅವರ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಈ ರೀತಿ ಸಂದೇಶವನ್ನು ಐಫೋನ್ನಿಂದ ಸ್ವೀಕರಿಸಿದ್ದಾಗಿ ದೃಢಪಡಿಸಿದ್ದರು.
2021ರ ನವೆಂಬರ್ನಿಂದ ಈ ರೀತಿಯ ಬೆದರಿಕೆ ಸಂದೇಶ ವ್ಯವಸ್ಥೆಯನ್ನು ನೀಡುವ ಮೂಲಕ ಬಳಕೆದಾರರಿಗೆ ಐಫೋನ್ ಮತ್ತೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಇದನ್ನೂ ಓದಿ: 'ಕ್ಲೌಡ್ ನೆಕ್ಸ್ಟ್’ 2024'ರಲ್ಲಿ ಹಲವು ಹೊಸ ಫೀಚರ್ ಪರಿಚಯಿಸಿದ ಗೂಗಲ್; ಇಲ್ಲಿದೆ ಹೊಸ ವೈಶಿಷ್ಟ್ಯದ ಸಂಪೂರ್ಣ ಮಾಹಿತಿ