ETV Bharat / technology

ನಿಮ್ಮ iPhone 14 Plus ಕ್ಯಾಮೆರಾದಲ್ಲಿ ದೋಷವಿದೆಯೇ?: ಆ್ಯಪಲ್​​ನಿಂದ ಫ್ರೀ ಸರ್ವೀಸ್​ ಘೋಷಣೆ - REAR CAMERA ISSUE

2023ರ ಏಪ್ರಿಲ್​​ನಿಂದ 2024 ರ ಏಪ್ರಿಲ್​ ನಡುವೆ ಖರೀದಿಸಿದ ಆ್ಯಪಲ್​ 14 ಐಫೋನ್​​ಗಳಲ್ಲಿನ ಕ್ಯಾಮೆರಾ ದೋಷವನ್ನು ಉಚಿತವಾಗಿ ಸರಿಪಡಿಸಲು ಸಂಸ್ಥೆಯು ಮುಂದಾಗಿದೆ. ಇದಕ್ಕೆ ನೀವು ಅರ್ಹರೇ ಎಂಬುದನ್ನು ಹೀಗೆ ಪರಿಶೀಲಿಸಿಕೊಳ್ಳಿ.

iPhone 14 Plus
iPhone 14 Plus (Getty images)
author img

By ETV Bharat Karnataka Team

Published : Nov 4, 2024, 5:32 PM IST

ಹೈದರಾಬಾದ್: ಐಫೋನ್​ 14 ಮೊಬೈಲ್​ಗಳ ಕ್ಯಾಮೆರಾಗದಲ್ಲಿ ದೋಷವಿದ್ದರೆ ಅದನ್ನು ಸರಿಪಡಿಸಲು ಆ್ಯಪಲ್​ ಸಂಸ್ಥೆಯು ಉಚಿತ ಆಫರ್​ ನೀಡಿದೆ. 2023 ರ ಏಪ್ರಿಲ್​​ 10 ರಿಂದ ಏಪ್ರಿಲ್​ 28, 2024 ರ ನಡುವೆ ತಯಾರಿಸಲಾದ ಮೊಬೈಲ್​ಗಳನ್ನು ದುರಸ್ತಿ ಮಾಡಿಕೊಡುವುದಾಗಿ ಸಂಸ್ಥೆ ತಿಳಿಸಿದೆ.

ಸಂಸ್ಥೆ ತಿಳಿಸಿದ ನಿಗದಿತ ಅವಧಿಯಲ್ಲಿ ಐಫೋನ್​ 14 ಮಾದರಿಯ ಮೊಬೈಲ್​ಗಳ ಕ್ಯಾಮೆರಾದಲ್ಲಿ ದೋಷ ಉಂಟಾಗಿದೆ. ಕ್ಯಾಮೆರಾದಿಂದ ತೆಗೆದ ಚಿತ್ರವು ಪ್ರಿವ್ಯೂವ್​ (image preview) ಆಗುತ್ತಿಲ್ಲ ಎಂಬುದು ಗ್ರಾಹಕರ ಆರೋಪವಾಗಿದೆ. ಇಂತಹ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಉಚಿತವಾಗಿ ಸೇವೆ ನೀಡುವುದಾಗಿ ಸಂಸ್ಥೆ ತಿಳಿಸಿದೆ.

ಉಚಿತ ಸೇವೆ ಪಡೆಯಲು ಹೀಗೆ ಮಾಡಿ; ನಿಮ್ಮ iPhone 14 Plus ಮಾದರಿಯ ಕ್ಯಾಮೆರಾದಲ್ಲಿ ದೋಷ ಉಂಟಾಗಿದ್ದರೆ, ಅದನ್ನು ಉಚಿತವಾಗಿ ದುರಸ್ತಿ ಮಾಡಲು ಅಧಿಕೃತ ಸೇವಾ ಕೇಂದ್ರಕ್ಕೆ ಮೊಬೈಲ್​ ತೆಗೆದುಕೊಂಡು ಬರಬಹುದು. ನಿಮ್ಮ ಮೊಬೈಲ್​ ಉಚಿತ ದುರಸ್ತಿಗೆ ಅರ್ಹವಾಗಿದೆಯೇ ಎಂದು ಪರಿಶೀಲಿಸಲು, ನೀವು Apple ನ ನಿಗದಿತ ಪುಟಕ್ಕೆ ಹೋಗಬೇಕು. ಅಲ್ಲಿ ನಿಮ್ಮ ಫೋನ್‌ನ ಸರಣಿ ಸಂಖ್ಯೆಯನ್ನು ನಮೂದಿಸಬೇಕು. ಜೊತೆಗೆ ಈ ಕೆಳಗಿನ ಹಂತಗಳನ್ನೂ ಪೂರೈಸಿ.

ಮೊದಲನೆಯದಾಗಿ, ನಿಮ್ಮ ಫೋನ್‌ನ ಸರಣಿ ಸಂಖ್ಯೆಯನ್ನು ಕಂಡುಕೊಳ್ಳಿ. ಇದಕ್ಕಾಗಿ ನೀವು ಸೆಟ್ಟಿಂಗ್‌ಗೆ ತೆರಳಿ, ಬಳಿಕ ಜನರಲ್​​, ಅಬೌಟ್​ಗೆ (about) ಹೋಗಬೇಕು. ಇಲ್ಲಿ, ನಿಮ್ಮ iPhone 14 Plus ನ ಸರಣಿ ಸಂಖ್ಯೆ ಕಾಣಲಿದೆ. ಈ ಸಂಖ್ಯೆಯನ್ನು ನಿಮ್ಮ ಕ್ಲಿಪ್‌ಬೋರ್ಡ್‌ಗೆ ನಕಲಿಸಲು ದೀರ್ಘವಾಗಿ ಒತ್ತಿರಿ.

ಇಲ್ಲಿ ಕ್ಲಿಕ್ ಮಾಡುವ ಮೂಲಕ Apple ನ ಸಪೋರ್ಟ್​ ಪೇಜ್​​ಗೆ ಹೋಗಬೇಕು. ನಂತರ ಅಲ್ಲಿ ನಿಮ್ಮ ಮೊಬೈಲ್​ನ ಸರಣಿ ಸಂಖ್ಯೆಯನ್ನು ನಮೂದಿಸಿ. ನಕಲಿಸಿದ ಅಂಕಿಗಳನ್ನು ಅಲ್ಲಿ ಅಂಟಿಸಲು ಬಾಕ್ಸ್ ಅನ್ನು ದೀರ್ಘವಾಗಿ ಒತ್ತಿ ಹಿಡಿಯಿರಿ.

ಬಳಿಕ, ನಿಮ್ಮ iPhone 14 Plus ಉಚಿತ ದುರಸ್ತಿಗೆ ಅರ್ಹವಾಗಿದೆಯೇ ಎಂಬುದನ್ನು ಕೆಳಗಿನ ಪರದೆಯಲ್ಲಿ ಗೋಚರವಾಗುತ್ತದೆ. ಕ್ಯಾಮೆರಾ 'ರಿಪೇರಿ ಪ್ರೋಗ್ರಾಂ' ನೀವು ಮೊಬೈಲ್​ ಖರೀದಿಸಿದ ದಿನಾಂಕದಿಂದ ಮೂರು ವರ್ಷಗಳವರೆಗೆ ವಾರಂಟಿ​​ ಹೊಂದಿರುತ್ತದೆ. ಬಳಕೆದಾರರಿಗೆ ದೋಷಗಳನ್ನು ಸರಿಪಡಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ. ಒಂದು ವೇಳೆ ನೀವು iPhone 14 Plus ನಲ್ಲಿನ ದೋಷಗಳನ್ನು ರಿಪೇರಿಗಾಗಿ ಮುಂಚಿತವಾಗಿ ಹಣ ಪಾವತಿ ಮಾಡಿದ್ದರೆ, ಅದನ್ನು ಮರುಪಾವತಿಗೆ ವಿನಂತಿಸಬಹುದು.

ಕ್ಯಾಮೆರಾ ಗಾಜು ಒಡೆದಿರಬಾರದು: ಒಂದು ವೇಳೆ ನಿಮ್ಮ ಮೊಬೈಲ್​ನ ಕ್ಯಾಮೆರಾ ಗಾಜು ಒಡೆದಿದ್ದರೆ, ಅದನ್ನು ದುರಸ್ತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀವು ಅರ್ಹ ಗ್ರಾಹಕರಾಗಿದ್ದರೆ, ಇಂತಹ ಸಮಸ್ಯೆಯನ್ನು ಮೊದಲೇ ಸರಿಪಡಿಸಿಕೊಳ್ಳಿ. ಬಳಿಕವಷ್ಟೇ ಕ್ಯಾಮೆರಾ ದೋಷವನ್ನು ಉಚಿತವಾಗಿ ಪಡೆಯಲು ಸಾಧ್ಯ. ಹಾಗೊಂದು ವೇಳೆ ಹೆಚ್ಚುವರಿ ದೋಷಗಳ ದುರಸ್ತಿ ಬಯಸಿದಲ್ಲಿ ಸೇವಾ ಕೇಂದ್ರವು ಶುಲ್ಕ ವಿಧಿಸಲಿದೆ.

ಇದನ್ನೂ ಓದಿ: Mentions ಎಂಬ ಹೊಸ ಫೀಚರ್​ ಬಳಕೆಗೆ ತಂದ ವಾಟ್ಸ್​ಆ್ಯಪ್​​ : ಇದರ ಉಪಯೋಗ ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.