ಹಾವೇರಿ: ವಿಧಾನಸಭೆ ಅಧಿವೇಶನದಲ್ಲಿ ಹಸಿ ಸುಳ್ಳನ್ನು ರಾಜ್ಯಪಾಲರ ಬಾಯಿಂದ ಹೇಳಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಹಾವೇರಿಯಲ್ಲಿಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಸಾಧನೆಗಳನ್ನು ತಮ್ಮದೆಂದು ಈ ಸರ್ಕಾರ ಬರೆದುಕೊಳ್ಳುವುದನ್ನು ಬಿಟ್ಟರೆ ಈ ಸರ್ಕಾರ ಯಾವ ಸಾಧನೆಗಳನ್ನೂ ಮಾಡಿಲ್ಲ ಎನ್ನುವುದು ಬಹಳ ಸ್ಪಷ್ಟ ಎಂದು ತಿಳಿಸಿದರು.
ಈ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಹಾವೇರಿ, ಬೆಳಗಾವಿ ಘಟನೆಯೇ ಇರಬಹುದು. ಹಲವಾರು ಘಟನೆಗಳು ನೋಡಿದರೆ ಇದು ಗೊತ್ತಾಗುತ್ತದೆ. ಈಗ ಅವರ ಸರ್ಕಾರದ ಮೇಲೆ ಶೇ.40 ಕಮೀಷನ್ ಆರೋಪ ಬಂದಿದೆ. ಈ ಕುರಿತಂತೆ ಈಗ ಮತ್ತು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಚರ್ಚೆಯಾಗುತ್ತದೆ ಎಂದರು.
ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಆರೋಪ ಮತ್ತು ಅವರು ತಮ್ಮ ಹೇಳಿಕೆ ಬದಲಿಸುವುದರ ಹಿಂದೆ ಸರ್ಕಾರದ ಒತ್ತಡ ಇದೆ. ನ್ಯಾಯಾಲಯ ಸಹ ಈ ಕುರಿತಂತೆ ಆದೇಶಿಸಿದೆ. ನಿಮ್ಮ ಕಡೆ ಹಣ ಇಲ್ಲದ್ದಕ್ಕೆ ಈ ರೀತಿ ಕಮೀಷನ್ ಆರೋಪ ಮಾಡುತ್ತಾ ಕುಳಿತಿದ್ದೀರಿ ಎಂದು ಟೀಕಿಸಿದರು.
ಇದನ್ನೂಓದಿ: ಇ-ಸ್ವತ್ತು ಸಮಸ್ಯೆ: ಕಂದಾಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ- ಪ್ರಿಯಾಂಕ್ ಖರ್ಗೆ