ETV Bharat / state

ಬೆಂಗಳೂರು: ಪಿಜಿಯೊಳಗೆ ನುಗ್ಗಿ ಯುವತಿ ಹತ್ಯೆ ಪ್ರಕರಣ, ಆರೋಪಿ ವಿರುದ್ಧ 1205 ಪುಟಗಳ ಚಾರ್ಜ್​ ಶೀಟ್ - Bengaluru PG Murder Case

author img

By ETV Bharat Karnataka Team

Published : Aug 31, 2024, 5:19 PM IST

ಬೆಂಗಳೂರಿನ ಪಿಜಿಯಲ್ಲಿ ಯುವತಿಯ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಕೋರಮಂಗಲ ಪೊಲೀಸರು 1205 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಹತ್ಯೆಯಾದ ಯುವತಿ ಕೃತಿ ಕುಮಾರಿ ಮತ್ತು ಆರೋಪಿ ಅಭಿಷೇಕ್ ಘೋಸಿ
ಹತ್ಯೆಯಾದ ಯುವತಿ ಕೃತಿ ಕುಮಾರಿ ಮತ್ತು ಆರೋಪಿ ಅಭಿಷೇಕ್ ಘೋಸಿ (ETV Bharat)

ಬೆಂಗಳೂರು: ಕೋರಮಂಗಲದಲ್ಲಿನ ಪಿಜಿಯೊಳಗೆ ನುಗ್ಗಿ ಬಿಹಾರ ಮೂಲದ ಯುವತಿಯ ಕತ್ತು ಸೀಳಿ ಹತ್ಯೆಗೈದಿದ್ದ ಪ್ರಕರಣದ ಆರೋಪಿಯ ವಿರುದ್ಧ ಕೋರಮಂಗಲ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ‌. ಯುವತಿ ಕೊಲೆ ಪ್ರಕರಣ ಸಂಬಂಧ ಆರೋಪಿ ವಿರುದ್ಧ 85 ಸಾಕ್ಷಿಗಳೊಂದಿಗೆ 1205 ಪುಟಗಳ ಚಾರ್ಜ್ ಶೀಟ್​ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜುಲೈ 23ರಂದು ರಾತ್ರಿ ಕೋರಮಂಗಲದ 6ನೇ ಬ್ಲಾಕ್‌ನಲ್ಲಿರುವ ವಿ.ಆರ್. ಲೇಔಟ್‌ನಲ್ಲಿರುವ ಪಿಜಿಯಲ್ಲಿ ಬಿಹಾರ ಮೂಲದ ಕೃತಿ ಕುಮಾರಿ‌ (24) ಎಂಬ ಯುವತಿಯನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೋರಮಂಗಲ ಠಾಣಾ ಪೊಲೀಸರು ಮಧ್ಯಪ್ರದೇಶದ ಬೇಗಂ ಗಂಜ್ ಮೂಲದ ಅಭಿಷೇಕ್ ಘೋಸಿ (23) ಎಂಬ ಆರೋಪಿಯನ್ನ ಬಂಧಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ಕೈಗೊಂಡು, ಬರೋಬ್ಬರಿ 1205 ಪುಟಗಳ ಚಾರ್ಜ್ ಶೀಟ್‌ ಸಲ್ಲಿಸಿದ್ದಾರೆ.

ಕೃತಿ ಕುಮಾರಿಯ ಸಹೋದ್ಯೋಗಿ ಮತ್ತು ರೂಮ್‌ಮೇಟ್‌ ಆಗಿದ್ದ ಯುವತಿ ಹಾಗೂ ಅಭಿಷೇಕ್​ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯಾವುದೇ ಉದ್ಯೋಗ ಮಾಡದೆ ಖಾಲಿಯಿರುತ್ತಿದ್ದ ಅಭಿಷೇಕ್, ಆಗಾಗ ಬೆಂಗಳೂರಿಗೆ ಬಂದು ತನ್ನ ಪ್ರೇಯಸಿಯನ್ನ ಭೇಟಿಯಾಗಿ ಹೋಗುತ್ತಿದ್ದ. ನಿರುದ್ಯೋಗಿಯಾಗಿ ಸುತ್ತಾಡದೆ ಯಾವುದಾದರೂ ಕೆಲಸ ಮಾಡುವಂತೆ ಅಭಿಷೇಕ್‌ಗೆ ಆತನ ಪ್ರೇಯಸಿ ಬುದ್ಧಿವಾದ ಹೇಳುತ್ತಿದ್ದುದರಿಂದ ಆಗಾಗ ಇಬ್ಬರ ನಡುವೆಯೂ ಜಗಳ ನಡೆಯುತ್ತಿತ್ತು. ಇದರ ನಡುವೆ ತಾನು ಕೆಲಸಕ್ಕೆ ಸೇರಿರುವುದಾಗಿ ಅಭಿಷೇಕ್ ಸುಳ್ಳು ಹೇಳಿದ್ದ. ಸುಳ್ಳು ಹೇಳಿರುವುದನ್ನ ತಿಳಿದ ಬಳಿಕ ಅಭಿಷೇಕ್‌ನನ್ನ ಆತನ ಪ್ರೇಯಸಿ ನಿರ್ಲಕ್ಷ್ಯಿಸಲಾರಂಭಿಸಿದ್ದಳು. ಇದರಿಂದ ಸಿಟ್ಟಾಗಿದ್ದ ಅಭಿಷೇಕ್ ಆಗಾಗ ಪಿ.ಜಿ ಬಳಿ ಬಂದು ಗಲಾಟೆ ಮಾಡಲಾರಂಭಿಸಿದ್ದ. ಹೀಗಾಗಿ ಸ್ನೇಹಿತೆಯನ್ನ ಕೆಲವು ದಿನಗಳ ಹಿಂದಷ್ಟೇ ಕೃತಿ ಕುಮಾರಿಯೇ ಬೇರೊಂದು ಪಿಜಿಗೆ ಶಿಫ್ಟ್ ಮಾಡಿಸಿದ್ದಳು. ಇದರಿಂದ ಕೃತಿ ಕುಮಾರಿ ಮೇಲೆ ಸಿಟ್ಟಾಗಿದ್ದ ಅಭಿಷೇಕ್, ಜುಲೈ 23ರಂದು ರಾತ್ರಿ 8 ಗಂಟೆ ಸುಮಾರಿಗೆ ಪಿಜಿ ಬಳಿ ಬಂದಿದ್ದ. ಆದರೆ ಅಭಿಷೇಕ್​ನನ್ನು ಅಲ್ಲಿನ ಸೆಕ್ಯುರಿಟಿ ತಡೆದಿದ್ದ. ರಾತ್ರಿ 11ರ ಸುಮಾರಿಗೆ ಮತ್ತೆ ಬಂದಿದ್ದ ಅಭಿಷೇಕ್ ನೇರವಾಗಿ 3ನೇ ಫ್ಲೋರ್‌ಗೆ ತೆರಳಿ ಕೃತಿ ಕುಮಾರಿಯ ರೂಮ್ ಬಾಗಿಲು ಬಡಿದಿದ್ದ. ರೂಮ್‌ನ ಬಾಗಿಲು ತೆರೆಯುತ್ತಿದ್ದಂತೆ ಆಕೆಯ ಕತ್ತು ಕೊಯ್ದು ಪರಾರಿಯಾಗಿದ್ದ ಎಂದು ವಿವರಿಸಲಾಗಿದೆ.

ಕೃತ್ಯದ ಬಳಿಕ ತನ್ನ ಊರಿಗೆ ಹೋಗಿದ್ದ ಆರೋಪಿ, ಪೋಷಕರನ್ನು ಸಂಪರ್ಕಿಸಿ ತಾನು ಯುವತಿಯೊಬ್ಬಳನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದ. ಮತ್ತೊಂದೆಡೆ ಆರೋಪಿಯ ಪೋಷಕರ ಮಾಹಿತಿ ಕಲೆಹಾಕಿ ಸಂಪರ್ಕಿಸಿದ್ದ ಪೊಲೀಸರು ಬಳಿಕ ಮಧ್ಯಪ್ರದೇಶದ ಸ್ಥಳೀಯ ‌ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಪಿಜಿಗಳಿಗೆ ಕಟ್ಟುನಿಟ್ಟಿನ ನಿಯಮಗಳು ಜಾರಿ - Strict Rules For Women PG

ETV Bharat Logo

Copyright © 2024 Ushodaya Enterprises Pvt. Ltd., All Rights Reserved.