ETV Bharat / state

12,000 ಕಿಲೋ ಮೀಟರ್ ಒಬ್ಬಂಟಿಯಾಗಿ ಬೈಕ್ ರೈಡ್ ಮಾಡಿ 12 ಜ್ಯೋತಿರ್ಲಿಂಗಗಳ ದರ್ಶನ ಪಡೆದ ಹುಬ್ಬಳ್ಳಿ ಯುವತಿ - Solo Bike Ride

ಹುಬ್ಬಳ್ಳಿಯ ಯುವತಿ 12 ಸಾವಿರ ಕಿ.ಮೀ ಸೋಲೋ ಬೈಕ್ ರೈಡ್ ಮಾಡಿ 12 ಜ್ಯೋತಿರ್ಲಿಂಗಗಳ ದರ್ಶನ ಪಡೆದು, ಗಮನ ಸೆಳೆದಿದ್ದಾರೆ.

author img

By ETV Bharat Karnataka Team

Published : Jun 3, 2024, 9:06 PM IST

Bhagirathi Ajagonda
ಭಾಗೀರಥಿ ಅಜಗೊಂಡ (ETV Bharat)
ಭಾಗೀರಥಿ ಅಜಗೊಂಡ ಹೇಳಿಕೆ (ETV Bharat)

ಹುಬ್ಬಳ್ಳಿ: ದೇಶದ ವಿವಿಧ ರಾಜ್ಯಗಳಲ್ಲಿರುವ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯಬೇಕೆಂಬ ಮಹದಾಸೆಯಿಂದ 12 ಸಾವಿರ ಕಿಲೋ ಮೀಟರ್ ಒಬ್ಬರೇ (ಸೋಲೊ) ಬೈಕ್ ರೈಡ್ ಮಾಡುವ ಮೂಲಕ ಹುಬ್ಬಳ್ಳಿಯ ಯುವತಿ ವಿಶೇಷವಾಗಿ ಸಾಧನೆ ಮಾಡಿದ್ದಾರೆ. ನೂಲ್ವಿ ಗ್ರಾಮದ ನಿವಾಸಿ ಹಾಗೂ ಹುಬ್ಬಳ್ಳಿ ಜೆ.ಜಿ.ಕಾಮರ್ಸ್ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಭಾಗೀರಥಿ ಅಜಗೊಂಡ (22) ಅವರೇ ಸಾಹಸಿ ಸಾಧಕಿ.

ಭಾಗೀರಥಿ ಈಗಾಗಲೇ ಕರ್ನಾಟಕದಾದ್ಯಂತ ತಮ್ಮ ಸ್ನೇಹಿತರೊಂದಿಗೆ ಬೈಕ್ ರೈಡ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಿಂದ ಉತ್ತರಾಖಂಡ್‌ವರೆಗೂ ಸೋಲೋ ಬೈಕ್ ರೈಡ್ ಮಾಡಿರುವ ಇವರು ಸುರಕ್ಷಿತವಾಗಿ ಹುಬ್ಬಳ್ಳಿಗೆ ವಾಪಸಾಗಿದ್ದಾರೆ. ಈ ಸಾಧನೆಯೊಂದಿಗೆ ವಿಶ್ವದಾಖಲೆ ನಿರ್ಮಿಸುವ ಹೆಬ್ಬಯಕೆಯನ್ನು ಭಾಗೀರಥಿ ಹೊಂದಿದ್ದಾರೆ.

Bhagirathi Ajagonda
ಭಾಗೀರಥಿ ಅಜಗೊಂಡ (ETV Bharat)

ಏಪ್ರಿಲ್ 25ರಂದು ಹುಬ್ಬಳ್ಳಿ ಸಿದ್ದಾರೂಢ ಮಠದಿಂದ ಬೈಕ್ ರೈಡ್ ಆರಂಭಿಸಿದ್ದ ಭಾಗೀರಥಿ, ಮಹಾರಾಷ್ಟ್ರ ಮಾರ್ಗವಾಗಿ ದೇಶದ ವಿವಿಧ ಭಾಗಗಳಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗ ಪುಣ್ಯ ಕ್ಷೇತ್ರಗಳ ದರ್ಶನ ಪಡೆದಿದ್ದಾರೆ.

''ದೂರ ಪ್ರಯಾಣದಲ್ಲಿ ಎಲ್ಲಿಯೂ ಅಡೆತಡೆ ಎದುರಾಗಲಿಲ್ಲ. ಈ ಪ್ರಯಾಣವು ನನ್ನ ಜೀವನದ ಪ್ರಮುಖ ಸಾಧನೆಯಾಗಿದ್ದು, ಪ್ರಯಾಣದುದ್ದಕ್ಕೂ ವಿವಿಧ ಬೈಕ್ ರೈಡರ್‌ ತಂಡದ ಸದಸ್ಯರು ನನಗೆ ಮಾರ್ಗದರ್ಶನ ತೋರಿದರು. ನನ್ನ ತಂದೆ-ತಾಯಿ ಹಾಗೂ ಸ್ನೇಹಿತರ ಪ್ರೋತ್ಸಾಹದಿಂದ 12 ಸಾವಿರ ಕಿ. ಮೀ ಸೋಲೋ ರೈಡ್ ಮಾಡಲು ಸಾಧ್ಯವಾಯಿತು. ನನ್ನ ಈ ಸಾಧನೆಯನ್ನು ವರ್ಲ್ಡ್ ರೆಕಾರ್ಡ್ ಹಾಗೂ ಗಿನ್ನಿಸ್ ರೆಕಾರ್ಡ್​ಗೆ ಕಳುಹಿಸಿಕೊಡುವ ಚಿಂತನೆಯಿದೆ'' ಎಂದು ಭಾಗೀರಥಿ ಹೇಳಿದರು.

Bhagirathi Ajagonda
ಪೋಷಕರೊಂದಿಗೆ ಭಾಗೀರಥಿ ಅಜಗೊಂಡ (ETV Bharat)

"ಮಹಿಳೆಯರೆಂದರೆ ಕೇವಲ ಅಡುಗೆ ಮನೆಗೆ ಸೀಮಿತರಾದವರಲ್ಲ. ಅವರಲ್ಲಿ ಸಾಧಿಸುವ ಅದಮ್ಯ ಛಲ ಹಾಗೂ ಗುರಿ ಇದ್ದೇ ಇರುತ್ತದೆ. ಅದನ್ನು ಕಾರ್ಯರೂಪಕ್ಕೆ ತಂದಲ್ಲಿ ಸಾಧನೆ ಸಾಧ್ಯವಿದೆ. ನಾನು ಶಿವನ ಆರಾಧಕಿ. 12 ಜ್ಯೋತಿರ್ಲಿಂಗ ನೋಡಬೇಕೆಂಬ ಆಸೆ ಇತ್ತು. ನನ್ನ ಈ ಸುದೀರ್ಘ ಪ್ರಯಾಣ ಬಹಳಷ್ಟು ಖುಷಿ ತಂದಿದೆ" ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಣೆಬೆನ್ನೂರಿನಿಂದ ಕಾಶ್ಮೀರದವರೆಗೆ ಬೈಕ್ ರೈಡ್: ಯುವತಿಗೆ ಅತಿ ಕಿರಿಯ ಏಕವ್ಯಕ್ತಿ ಬೈಕ್ ರೈಡರ್ ಎಂಬ ಹೆಗ್ಗಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.