ETV Bharat / state

ಅವಳಿ ನಗರದಲ್ಲೂ ಡ್ರಗ್ಸ್​, ಗಾಂಜಾ ಘಮಲು: ಅಪರಾಧಗಳು ದ್ವಿಗುಣ: ವೈದ್ಯರ ಸಲಹೆಗಳೇನು ಗೊತ್ತಾ? - Drugs Ganja Mafia

ಅವಳಿ ನಗರ ಧಾರವಾಡ ಹುಬ್ಬಳ್ಳಿಯಲ್ಲಿ ಗಾಂಜಾ, ಮದ್ಯಪಾನ, ಡ್ರಗ್ಸ್ ಮಾಫಿಯಾ ಯುವಜನರನ್ನು ಸೆಳೆಯುತ್ತಿದ್ದು, ಈ ಮಾದಕ ಜಾಲ ಖೆಡ್ಡಾದಲ್ಲಿ ಯುವಜನ ಬಿದ್ದು ದಾರಿ ತಪ್ಪುತ್ತಿದ್ದಾರೆ. ಮಾದಕ ವ್ಯಸನಿಗಳ ಕುರಿತು ಮಾನಸಿಕ ವೈದ್ಯರ ಸಲಹೆ ಏನು ಗೊತ್ತಾ..?

Hubli
ಮಹಾನಗರ ಹುಬ್ಬಳ್ಳಿ (ETV Bharat)
author img

By ETV Bharat Karnataka Team

Published : May 24, 2024, 6:29 PM IST

Updated : May 24, 2024, 10:53 PM IST

ಮನೋ ವೈದ್ಯ ಡಾ. ಮಹೇಶ ದೇಸಾಯಿ (ETV Bharat)

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಫಿ ಹಾಗೂ ವಿದ್ಯಾಕಾಶಿ ಧಾರವಾಡ ಎಂದು ಖ್ಯಾತಿ ಗಳಿಸಿರುವ ಅವಳಿ ನಗರದಲ್ಲಿ ಈಗ ಅಭಿವೃದ್ಧಿ ಚಟುವಟಿಕೆಗಳಿಗಿಂತ ಅಕ್ರಮ ಚಟುವಟಿಕೆಗಳ ಸದ್ದು ಜೋರಾಗಿದೆ. ಸಾಲು ಸಾಲು ಕೊಲೆಗಳು ಧಾರವಾಡ ಜಿಲ್ಲೆಯ ಜನರ ನಿದ್ದೆ ಗೆಡಿಸಿದ್ದು, ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ 14 ಕೊಲೆಗಳು ನಡೆದಿವೆ. ಅಪರಾಧ ಕೃತ್ಯಗಳು ಹೆಚ್ಚಾದ ಬೆನ್ನಲ್ಲೆ ಮಾದಕ ವಸ್ತುಗಳ ಘಾಟು ಹೆಚ್ಚಾಗಿದೆ ಎಂಬ ಮಾತುಗಳು ಅವಳಿ ನಗರದ ಗಲ್ಲಿ - ಗಲ್ಲಿಗಳಲ್ಲಿ ಕೇಳಿ ಬರುತ್ತಿವೆ.

ನಗರದ ಮಾರುಕಟ್ಟೆಯಲ್ಲಿ ಸರಾಗವಾಗಿ ದೊರೆಯುವ ವಿವಿಧ ಮಾದರಿಯ ಮಾದಕ ವಸ್ತುಗಳು ಅತಿ ಕಡಿಮೆ ದರದಲ್ಲಿ ಯುವಕ - ಯುವತಿಯರ ಕೈ ಸೇರುತ್ತಿವೆ. ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳ ನಂಟು ಈ ಕೊಲೆ ಪ್ರಕರಣಗಳ ಹಿಂದಿದೆ ಅನ್ನೋದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಜನರು ಬೆಚ್ಚಿ ಬೀಳಿಸುವ ಎರಡು ಪ್ರಕರಣಗಳು ಏಪ್ರಿಲ್ 18 ರಂದು ನೇಹಾ ಹಿರೇಮಠ ಕೊಲೆ ಪ್ರಕರಣ ಮತ್ತು ಮೇ 15 ರಂದು ಅಂಜಲಿ ಅಂಬಿಗೇರ ಭೀಕರ ಕೊಲೆ ಪ್ರಕರಣಗಳ ಕಾರಣ ಬೇರೆ ಬೇರೆ ಆಗಿದ್ದರು. ಇದರ ಹಿಂದೆ ಮಾದಕ ವಸ್ತುಗಳ ನಂಟು ಎದ್ದು ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ತನಿಖೆಗಳೇ ಸಾಬೀತು ಪಡಿಸಬೇಕಿದೆ.

ಕೊಲೆ ಆರೋಪಿಗಳು ಮಾದಕ ವ್ಯಸನದಿಂದ ಇಂತ ಕೃತ್ಯ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ‌ ಕಂಡು ಬರುವಂತಿದೆ. ಆರೋಪಿಗಳ ಮಾನಸಿಕತೆ , ಆಗುವ ಕ್ರೌರ್ಯದ ಬಗ್ಗೆ ಮನೋ ವೈದ್ಯ ಡಾ. ಮಹೇಶ ದೇಸಾಯಿ ಮಾತನಾಡಿದ್ದಾರೆ.

ಆರೋಪಿಗಳ ಮನಸ್ಥಿತಿ: ಹಲವು ಕ್ರಿಮಿನಲ್ ಚಟುವಟಿಕೆ ಮಾಡುವವರು ದುಶ್ಚಟಗಳಿಗೆ ಅವಲಂಬನೆ ಆಗಿರುತ್ತಾರೆ. ಮದ್ಯ ಪಾನ, ಗಾಂಜಾ ಸೇವನೆ ಸೇರಿದಂತೆ ಇತರ ಚಟಗಳಿಗೆ ಒಳಗಾದವರು ಯಾವ ಹೇಯ ಕೃತ್ಯಕ್ಕೂ ಹೆದರುವದಿಲ್ಲ. ಇನ್ನೊಂದಿಷ್ಟು ಸಮಾಜ ದ್ರೋಹಿ‌ ಮನಸ್ಥಿತಿಯವರು ಇಂತಹ ಕೃತ್ಯಗಳನ್ನು ‌ಮಾಡುತ್ತಾರೆ. ಅವರಿಗೆ ಪಶ್ಚಾತಾಪ ಇರುವದಿಲ್ಲ. ಇಂತ ಘಟನೆಗಳಿಂದ ಪ್ರೇರಣೆ ಪಡೆದು ಕೃತ್ಯಗಳ ಭಾಗಿಯಾಗುವ ಆತಂಕಾರಿಗಳು ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲ ಸಾಮಾಜಘಾತಕ‌ ಶಕ್ತಿಗಳು ಆಮಿಷ ತೋರಿಸಿ ಗಾಂಜಾ, ಮದ್ಯಪಾನ, ಡ್ರಗ್ಸ್ ಕೊಡಿಸಿ ತಮ್ಮ ಕೆಲಸಗಳಿಗೆ ಬಳಸಿಕೊಳ್ಳುತ್ತಿ ರುವ ಅಂಶಗಳು ಬೆಳಕಿಗೆ ಬಂದಿವೆ.

ತಡೆಗಟ್ಟುವ ಕ್ರಮ: ಪೋಷಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸರ್ಕಾರವು ಮಾದಕ ವಸ್ತುಗಳ ಮಾರಾಟ ಸರಬರಾಜಿನ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗುವವರನ್ನು ತಜ್ಞ ಮನೋವೈದ್ಯರ ಕಡೆಯಿಂದ ಸಲಹೆ ಪಡೆಯುವುದು ಸೂಕ್ತ.

ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯಿಂದ ಚಿಗರು ಮೀಸೆಯ ಯುವ ಸಮುದಾಯ ಚಾಕು - ಚೂರಿಗಳನ್ನ ಬಳಸಿ ಕೊಲೆ ಮಾಡುವ ಹಂತಕ್ಕೆ ಬಂದಿದ್ದಾರೆ. ಈ ಕಾರಣಕ್ಕಾಗಿ ರೌಡಿ ಶೀಟರ್‌ಗಳು ಪಟ್ಟಿ ಬೆಳೆಯುತ್ತಾ ಸಾಗಿದೆ. ಮದ್ಯ ಕುಡಿಸಲು, ಮಟ್ಕಾ ಹಣ ವಾಪಸ್ ಕೊಡದಿರುವುದು, ನಶೆಯಲ್ಲಿ ಅನುಮಾನದಿಂದ ಫೋನ್ ಕಾಲ್ ರಿಸೀವ್ ಮಾಡಲಿಲ್ಲ ಹಾಗೂ ಪ್ರೀತಿಗೆ ನಿರಾಕರಣೆ, ಮದುವೆಗೆ ಒಪ್ಪಲಿಲ್ಲ, ಹಣ ವಾಪಸ್ ಕೊಡಲಿಲ್ಲ ಎಂಬುದರ ಜೊತೆಗೆ ಗುಟ್ಕಾ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೂ ನಶೆಯಲ್ಲೇ ಬರ್ಬರ ಕೊಲೆಗಳು ನಡೆದಿವೆ.

ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರೇ ಗಾಂಜಾ ಮಾರಾಟಗಾರರ ಟಾರ್ಗೆಟ್, ಬಹುಪಾಲು ಕಾಲೇಜುಗಳು ಇರುವ ರಸ್ತೆಗಳೇ ದಂಧೆಕೋರರ ಅಡ್ಡೆ. ಆದರೆ ಚರಸ್, ಅಫೀಮ್ ಹಾಗೂ ಹೆರಾಯಿನ್ ಬೇರೆ ಬೇರೆ ರಾಜ್ಯಗಳಿಂದ ಧಾರವಾಡ ಜಿಲ್ಲೆಗೆ ಸರಬರಾಜಾಗುತ್ತಿದ್ದು, ಮೂಲ ಪತ್ತೆ ಹಚ್ಚಬೇಕಿದೆ. ಈ ಸಾಮಾಜಿಕ ಪೀಡುಗಿನ ವಿರುದ್ಧ ಹೋರಾಟ ನಡೆಸುವ ಅವಶ್ಯವಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಇದನ್ನೂಓದಿ:ಪುಂಡರಿಂದ ಯೋಧನ ಮೇಲೆ ಹಲ್ಲೆ: ಐವರ ಮೇಲೆ ಪ್ರಕರಣ ದಾಖಲು - Assault on Soldier

Last Updated : May 24, 2024, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.